ವೀಕೆಂಡ್ ವಿತ್ ರಮೇಶ್ ಷೋನಲ್ಲಿ ನಟರಾಕ್ಷಸ ಡಾಲಿ ಧನಂಜಯ

ಕಿರುತೆರೆಯ ವೀಕ್ಷಕರನ್ನು ತನ್ನತ್ತ ಸೆಳೆದಿಟ್ಟುಕೊಂಡಿರುವ ಜೀ ಕನ್ನಡದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ 5ನೇ ಕಂತಿನಲ್ಲಿ ನಟರಾಕ್ಷಸ ಡಾಲಿ ಧನಂಜಯ ನೆನಪುಗಳ ಮೆರವಣಿಗೆಯನ್ನೇ ಮಾಡಿಸಿದ್ದಾರೆ!

ಹೌದು… ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಜನಮೆಚ್ಚುಗೆಯ ಟಾಕ್ ಷೋ. ಇದು ಮಾತಿನ ಮಂಟಪ, ನೆನಪುಗಳ ಮೆರವಣಿಗೆಗೆ, ಅದೇ ರೀತಿ ಸಂಬಂಧಗಳ ಜಾತ್ರೆಗೆ ವೇದಿಕೆ. ಈ ಕಾರ್ಯಕ್ರಮ ಈ ವಾರ ಐದನೇ ಕಂತಿಗೆ ಪ್ರವೇಶಿಸುತ್ತಿದೆ. ಮೊದಲ ಕಂತಿನಲ್ಲಿ ನಟಿ ರಮ್ಯಾ, ಎರಡನೇ ಕಂತಿನಲ್ಲಿ ಪ್ರಭುದೇವ, ಮೂರನೇ ಕಂತಿನಲ್ಲಿ ಡಾ.ಮಂಜುನಾಥ್, ನಾಲ್ಕನೇ ಕಂತಿನಲ್ಲಿ ಹಿರಿಯ ನಟ ದತ್ತಣ್ಣ ಕಾಣಿಸಿಕೊಂಡಿದ್ದರು.

ನಟ ರಾಕ್ಷಸ ಎಂದೇ ಗುರುತಿಸಿಕೊಂಡಿರುವ ಡಾಲಿ ಧನಂಜಯ ಈ ವಾರದ ಹಾಟ್‍ ಸೀಟ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

https://www.instagram.com/reel/Cq5gscIM6eL/?utm_source=ig_web_copy_link

ಡಾಲಿ ಧನಂಜಯ್ ಅವರದು ಬಹುಮುಖ ಪ್ರತಿಭೆ. ನಟರಾಗಿ, ನಿರ್ಮಾಪಕನಾಗಿ, ಗೀತ ಸಾಹಿತಿಯಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಬದುಕಿನಲ್ಲಿ ಹಲವು ಏರಿಳಿತಗಳನ್ನು ಕಂಡು, ಇದೀಗ ಚಂದನವನದ ಭರವಸೆಯ ನಾಯಕನಾಗಿ ಬೆಳೆದು ನಿಂತಿದ್ದಾರೆ. ಅವರ ವೃತ್ತಿ ಬದುಕಿನ ಆರಂಭದ ದಿನಗಳನ್ನು ಗಮನಿಸಿದವರಿಗೆ `ಜಯನಗರ 4ನೇ ಬ್ಲಾಕ್’ ಕನ್ನಡ ಕಿರುಚಿತ್ರ ನೆನಪಾಗದೇ ಇರದು. ಯೂಟ್ಯೂಬ್‍ನಲ್ಲಿ ಅದು ಲಭ್ಯವಿದೆ.

https://www.youtube.com/watch?v=CmK91AxPA1A

ಸಿನಿಮಾ ರಂಗ ಪ್ರವೇಶಿಸಬೇಕು ಎಂಬ ಒಂದೇ ಗುರಿಯೊಂದಿಗೆ ಅವರು ಕೆಲಸ ಮಾಡಿದ ಪರಿ, ಒಂಬತ್ತು ಅಥವಾ ಹತ್ತು ವರ್ಷಗಳ ಅವಧಿಯಲ್ಲಿ ಅವರು ಬೆಳೆದ ರೀತಿ ಗಮನಾರ್ಹ.
ಬಡವರ ಮಕ್ಕಳು ಬೆಳೀಬೇಕು ಎಂಬ ಡೈಲಾಗ್‌ ಡಾಲಿ ಧನಂಜಯ ಅವರಿಗೆ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಟ್ಟಿದೆ.

ಹೌದು… ಧನಂಜಯ್‌ ಕನ್ನಡ ಚಿತ್ರರಂಗಕ್ಕೆ ಬಂದು ಒಂದು ದಶಕ. ಈ ಜರ್ನಿಯಲ್ಲಿ ಸೋಲು ಮತ್ತು ಗೆಲುವಿನ ಎರಡೂ ಅನುಭವ ಅವರದ್ದಾಗಿದೆ. ಕಡುಕಷ್ಟದ ದಿನಗಳನ್ನೂ ಕಂಡಿದ್ದಾರೆ. ಸಿನಿಮಾ ಗೆದ್ದಾಗ ಒಳ್ಳೆಯ ದಿನಗಳನ್ನೂ ಅನುಭವಿಸಿದ್ದಾರೆ.ತೆರೆಮೇಲೆ ಅಕ್ಷರಶಃ ಪಾತ್ರಕ್ಕೆ ತಕ್ಕಂತೆ ಬದಲಾಗುವ ಕಾರಣ ಧನಂಜಯ್‌ ಅವರು ಆಪ್ತ ಬಳಗದಲ್ಲಿ ನಟರಾಕ್ಷಸ ಎಂದೇ ಗುರುತಿಸಿಕೊಂಡಿದ್ದಾರೆ. ಈ ವೀಕೆಂಡ್ ವಿತ್ ರಮೇಶ್ ಅವರ ಷೋನಲ್ಲಿ ಅವರ ಸಿನಿಮಾ ಸ್ನೇಹಿತರು, ಆಪ್ತರು, ಬಾಲ್ಯದ ಸ್ನೇಹಿತರು, ಸ್ಯಾಂಡಲ್‌ವುಡ್‌ನ ಕಲಾ ಬಳಗದ ನೆನಪುಗಳ ಜಾತ್ರೆ, ಮೆರವಣಿಗೆ ಇರಲಿದೆ. ಆದ್ದರಿಂದ ನಟರಾಕ್ಷಸನ ಮಾತಿನ ಮಂಟಪ ಪ್ರವೇಶಿಸುವುದನ್ನು ಮರೆಯಬೇಡಿ ಮತ್ತೆ..


  • ಆಕೃತಿ ನ್ಯೂಸ್
0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW