‘ಹನಿಬಳಗ’ ಒಂದು ದಿನದ ಹನಿಗವನ ರಚನಾ ಕಮ್ಮಟ ಹಮ್ಮಿಕೊಳ್ಳಲಾಗಿದ್ದು, ಹನಿಗವನ ಬರೆಯುವ ಉತ್ಸಾಹ ನಿಮ್ಮಲ್ಲಿದ್ದರೇ, ಬನ್ನಿ ಭಾಗವಹಿಸಿ, ಹೆಚ್ಚಿನ ವಿವರ ಕೆಳಗಿನಂತಿದೆ…
ಹನಿಗವನ/ ಚುಟುಕು ಅತ್ಯಂತ ಜನಪ್ರಿಯ ಕಾವ್ಯಪ್ರಕಾರ. ಸಾಮಾಜಿಕ ಮಾಧ್ಯಮಗಳಿಂದಾಗಿ ಈಗ ಹನಿಗವನಗಳ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ಹನಿಗವನ ಬರೆಯುವ ಉತ್ಸಾಹ ಅನೇಕರಲ್ಲಿದೆ. ಆದರೆ ಅಂಥವರಿಗೆ ಸೂಕ್ತ ಮಾರ್ಗದರ್ಶನದ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ‘ಹನಿಬಳಗ’ ಒಂದು ದಿನದ ಹನಿಗವನ ರಚನಾ ಕಮ್ಮಟವನ್ನು ಏರ್ಪಡಿಸಿದೆ.
ದಿನಾಂಕ: 1.5.22 (ಭಾನುವಾರ)
ಸಮಯ: ಬೆಳಿಗ್ಗೆ 9.30 ರಿಂದ ಸಂಜೆ 6.00
ಸ್ಥಳ: ಶ್ರೀವರ ವಿವಂತಾ ಅಪಾರ್ಟ್ಮೆಂಟ್
ಸಂಧ್ಯಾ ದೀಪ ಆಶ್ರಮದ ಹತ್ತಿರ
ಪೂರ್ಣ ಪ್ರಜ್ನಾ ನಗರ
ಉತ್ತರಹಳ್ಳಿ
ಬೆಂಗಳೂರು – 560061
ನಾಡಿನ ಸುಪ್ರಸಿದ್ಧ ಕವಿ , ಹನಿಗವನಗಳ ರಾಜರೆಂದೆ ಖ್ಯಾತರಾಗಿರುವ ಶ್ರೀ ಎಚ್. ಡುಂಡಿರಾಜ್ ಕಮ್ಮಟದ ನಿರ್ದೇಶಕರಾಗಲು ಒಪ್ಪಿದ್ದಾರೆ. ಇವರೊಂದಿಗೆ ಹಿರಿಯ ಕವಿ, ವಿಮರ್ಶಕರು ಉಪನ್ಯಾಸಕರಾಗಿ ಪಾಲ್ಗೊಳ್ಳುತ್ತಾರೆ. ಅಭ್ಯರ್ಥಿಗಳಿಗೆ ನೀಡುವ ಪಠ್ಯ ಹಾಗೂ ಊಟೋಪಚಾರದ ಬಾಬ್ತು ಪ್ರವೇಶ ಧನ ರೂ.400/-
ಆಸಕ್ತರು ತಮ್ಮ ಹೆಸರನ್ನು ನೊಂದಾಯಿಸಲು ಕೊನೆಯ ದಿನಾಂಕ ಎಪ್ರಿಲ್ 23, 2022
ನೋಂದಣಿ ಹಾಗೂ ಹೆಚ್ಚಿನ ವಿವರಗಳಿಗೆ ಸಂಚಾಲಕರ ಸಂಪರ್ಕ ಸಂಖ್ಯೆ:
ಭಾಸ್ಕರ ಹೆಬ್ಬಾರ್ : +91 81977 72277
ಶ್ರೀಧರ ಕಾಡ್ಲೂರು : 9964378761
- ಆಕೃತಿ ನ್ಯೂಸ್