‘ಹೇಳಿಬಿಡು ಎಂದು ಬರುವೆ…?’ ಕವನ

ನೀನಿದ್ದಾಗ ವಸಂತ ಇತ್ತು, ಕನಸಿತ್ತು ಬದುಕು ಸ್ವರ್ಗದ ರೀತಿಯಾಗಿತ್ತು, ಆದರೆ ನೀನು ಹೋದಾಗ ಎಲ್ಲವು ಕಮರಿತು ಎನ್ನುತ್ತಾರೆ ಕವಿ ಟಿ.ಪಿ.ಉಮೇಶ್ ಹೊಳಲ್ಕೆರೆ ಅವರು, ತಪ್ಪದೆ ಮುಂದೆ ಓದಿ…

ಹೇಳಿಬಿಡು ಎಂದು ಬರುವೆ;
ಎದೆಬಾಗಿಲ ತೆರೆದು ಕಾಯುತ್ತಿರುವೆ ಅನುಗಾಲ!
ಹೊರಟೆ ನೀನೇನು ಹೇಳದೆ;
ಮನೆಬಾಗಿಲ ಬರಿದಾಗಿಸಿ ಮನದಲ್ಲಿ ಬರಗಾಲ!

ಯಾವ ಸುಳಿಯು ಸೆಳೆಯಿತೆ;
ಅರಿಯದೆ ಚಡಪಡಿಸುತ ನಿಡುಸುಯ್ದೆ ನಾನಿಲ್ಲಿ!
ಅದಾವ ಮೋಹಕ್ಕೆ ಸಿಲುಕಿದೆ;
ತಿಳಿಯದೆ ಕಣ್ಣೀರಾದೆ ಕೇಳುವರಿಲ್ಲ ಒಂಟಿಯಿಲ್ಲಿ!

ವಸಂತ ಸುರಿದಿತ್ತು ನೀನಿದ್ದಾಗ!
ಹೊರಟೆ ಬರೀ ಶಿಶಿರದ ಧಗೆ ಬಿಸಿಲು ಆಹಾಕಾರ!
ಹೂಗಂಧ ಅಮಲೆ ನಗುವಾಗ!
ಹೋದೆಯೆ ಕಾರ್ಗತ್ತಲ ನಿಶೆ ಜೀವನ ಅಂಧಕಾರ!

ಚಿಗುರಿತ್ತು ಕೊಟ್ಟುಕೊಂಡ ಪ್ರೀತಿ;
ಸೊರಗಿ ಒಣಗಿ ತರಗೆಲೆಯಂತಾಯಿತೆ ವಿರಹದಿ!
ಕನಸಿತ್ತು ಬದುಕು ಸ್ವರ್ಗದ ರೀತಿ!
ಕಮರಿತೇ ನಿನ್ನ ನಿರ್ಲಕ್ಷ್ಯತೆ ಧಾಳಿಯ ಪ್ರವಾಹದಿ!

ಬಿಲ್ಲ ಕಣ್ಣುಬ್ಬ ಕುಣಿಸಿ ಆಡಿಸಿದೆ;
ನಿನ್ನ ಮನವ ಅರಿಯದೆ ಮೋಸಕ್ಕೆ ವಶವಾದೆನೆ!
ಕಲ್ಲಿನಂತ ಹೃದಯ ನಿನಗೇಕಿದೆ;
ಚೆಲುವೇ ಒಲವ ಅರ್ಪಿಸಿ ಅವಸರಿಸೀ ಸೋತೆನೆ!


  • ಟಿ.ಪಿ.ಉಮೇಶ್ ಹೊಳಲ್ಕೆರೆ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW