ಕವಿಯ ಹೃದಯದಲ್ಲಿ ಅರಳಿದ ವಿರಹದ ಕವನ, ತಪ್ಪದೆ ಮುಂದೆ ಓದಿ…
ಎದೆಯಾಳದಿಂದ ಹರಿದ ಕಣ್ಣೀರ ಹನಿಗಳನು ಬಂದು ಕೇಳು
ಉತ್ತರ ಹೇಳುತ್ತವೆ.
ನಾ ಎಂದೂ ನಿನ್ನನು
ತಿರಸ್ಕಾರ ಭಾವದಿಂದ ನೋಡೇ ಇಲ್ಲಾ.
ನಿನ್ನ ಅನುಪಸ್ಥಿತಿಯಲ್ಲಿ
ನಾ ಹೆಚ್ಚಾಗಿ ಖುಷಿಯನ್ನೇ
ಎರವಲು ಪಡೆಪಡೆದು
ಏಕಾಂತವನ್ನ ಮೀಟುತ್ತಲೇ
ನಿನ್ನ ಮಂದಹಾಸದ ನಗುವನು ಕಾಣುತ್ತಲೇ ಇರುತ್ತೇನೆ.
ಎಂದಾದರೊಮ್ಮೆ ಸನಿಹ ಬಂದು ಬಿಗಿದಪ್ಪಿ
ರಾಶಿ ರಾಶಿ ಮುತ್ತುಗಳನು ಸುರಿಸುರಿದು
ನನ್ನೆಲ್ಲಾ ದುಃಖದ ತೀವ್ರತೆಯನ್ನ
ಮರೆಮಾಚಿಸುತ್ತಿ ಎಂದು.
ನಿನಗೇನು ಗೊತ್ತು?
ನಕ್ಕು ನಲಿಸುವ ಈ ಹೃದಯದೊಳಗಿನ
ನೋವಿನ ಖಜಾನೆ ಎಷ್ಟಿದೆಯೆಂದು!!
- ಯಾರಿಗೂ ಕಾಣದ ಕವಿ