ಬಣ್ಣವನು ಎರಚದಿರು ಪೋರಿಯ ಮೇಲೆ ಓ! ಶ್ಯಾಮನೆ!…ಖ್ಯಾತ ಕವಿ ಕೇಶವ ಮಳಗಿ ಅವರ ಲೇಖನಿಯಲ್ಲಿ ಸುಂದರ ಕವನ, ಮುಂದೆ ಓದಿ…
ಬಣ್ಣವನು ಎರಚದಿರು ಪೋರಿಯ ಮೇಲೆ ಓ! ಶ್ಯಾಮನೆ
ಚೆಲುವಾದ ಕನ್ನೆ ಪಾದ ಮಣ್ಣಾಗುವುದು
ಸೀರೆ ಹೊಸತು, ಸಖಿಯರು ಅಪಹಾಸ್ಯ ಮಾಡುವರು
ನೀನೇನು ನನ್ನ ಆಸರೆಗೆ ಬರುವವನಲ್ಲ
ಅವರ ಛೇಡಿಕೆಯಿಂದ ನನಗೆ ಬಿಡುಗಡೆಯಿಲ್ಲ
ಸಾಕು ನಿನ್ನ #ರಂಗಿನಾಟ, ಕೊಟ್ಟ ಭರವಸೆಯೇನಾದವು ಹೇಳು?
ನಾನು ಬಂದಿ, ಸೋಲೇ ನನಗೆ ಕಟ್ಟಿಟ್ಟ ಬುತ್ತಿ
ನಿನ್ನ ಸೋಗಿನ ಆಣೆಗಳ ಬಣ್ಣದಲಿ ತೋಯಿಸದಿರು
ಬಣ್ಣವನು ಎರಚದಿರು ಪೋರಿಯ ಮೇಲೆ ಓ! ಶ್ಯಾಮನೆ!
- ಕೇಶವ ಮಳಗಿ (ಖ್ಯಾತ ಕತೆಗಾರರು, ಲೇಖಕರು, ಕವಿಗಳು)
