ವೃತ್ತಿಯಲ್ಲಿ ಹೈಸ್ಕೂಲ್ ಗಣಿತ ಶಿಕ್ಷಕರಾಗಿರುವ ಜ್ಯೋತಿ ಕುಮಾರ್.ಎಂ(ಜೆ.ಕೆ.) ಅವರ ‘ಹೃದಯದಿ ಜಾಗ’ ಕವನವನ್ನು ತಪ್ಪದೆ ಮುಂದೆ ಓದಿ…
ನೋವಿರಲಿ
ನಲಿವಿರಲಿ
ಜೊತೆಯಾಗಿಯೆ ನಮ್ಮಿಬ್ಬರ ಸಾವಿರಲಿ||1||
ನಾನಿರಲಿ
ಇರದಿರಲಿ
ನೆನಪುಗಳು ಕಳೆದು ಹೋಗದಿರಲಿ||2||
ಹಗಲಿರಲಿ
ಇರುಳಿರಲಿ
ಪ್ರೇಮದ ಹಣತೆ ಬೆಳಗುತ್ತಲೆ ಇರಲಿ||3||
ಜಗವಿರಲಿ
ಜನರಿರಲಿ
ಅನುರಾಗ ಅಲೆ ಅಲೆಯಾಗಿ ತೇಲುತಿರಲಿ||4||
ಕಾಡಿರಲಿ
ನಾಡಿರಲಿ
ಒಲವು ಚಿಲುಮೆಯಾಗಿ ಚಿಮ್ಮುತಿರಲಿ||5||
ಏನೇ ಬರಲಿ
ಏನೆಲ್ಲ ಹೋಗಲಿ
ಪ್ರೀತಿ ಮಾಸಿ ಮುಸುಕಾಗದಿರಲಿ||6||
ಅಂದವಿರಲಿ
ಆನಂದವಿರಲಿ
ಮನದಲಿ ಪ್ರೇಮದ ಪ್ರತಿಮೆ ಇರಲಿ||7||
ಸಕಲ ಸೌಕರ್ಯವಿರಲಿ
ಅಂಗ ವೈಕಲ್ಯವಿರಲಿ
ಹೃದಯದಿ ಜಾಗ ಖಾಯಂ ಆಗಿ ಇರಲಿ||8||.
- ಜ್ಯೋತಿ ಕುಮಾರ್.ಎಂ(ಜೆ.ಕೆ.)
ಜ್ಯೋತಿ ಕುಮಾರ್.ಎಂ(ಜೆ.ಕೆ.),ಇವರು ಓದಿದ್ದು,ಎಮ್,ಎಸ್ಸಿ.ಎಮ್,ಇಡಿ.ವೃತ್ತಿಯಲ್ಲಿ ಹೈಸ್ಕೂಲ್ ಗಣಿತ ಮೇಷ್ಟ್ರು.ಮೂಲತಃ ದಾವಣಗೆರೆ ತಾಲ್ಲೂಕು ಹಾಗೂ ಜಿಲ್ಲೆಯ ಮುದಹದಡಿ ಗ್ರಾಮದವರು.ಸದ್ಯ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಗುತ್ತಿದುರ್ಗದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.ಇವರು ಹವ್ಯಾಸಿ ಬರಹಗಾರರಾಗಿದ್ದು,ಪ್ರಸ್ತುತ ಇವರ ಬರಹಗಳು ನಾಡಿನ ಹೆಸರಾಂತ ಪತ್ರಿಕೆಗಳಾದ ಹಾಯ್ ಬೆಂಗಳೂರು,ಮಂಗಳ,ನಿಮ್ಮೆಲ್ಲರ ಮಾನಸ,ಜೀವನಾಡಿ ಪತ್ರಿಕೆ,ಬುಕ್ ಬ್ರಹ್ಮೣ,ಆಕೃತಿ ಕನ್ನಡ ,ಶ್ರಾವಣ ಬ್ಲಾಗ್, ಸಂಗಾತಿ, ಕೆಂಡಸಂಪಿಗೆ, ಮಿಂಚುಳ್ಳಿ, ಪಂಜು ಮ್ಯಾಗಝೀನ್, ಪ್ರತಿ ಲಿಪಿ, ಮಾಮ್ಸ್ ಪ್ರೆಸ್ಸೋ ಇವುಗಳಲ್ಲಿ ಪ್ರಕಟವಾಗಿವೆ.
