ಬಹು ಜೀವಚರಗಳಿಗೆ ಜೀವನದ ಅವಿಭಾಜ್ಯವೇ ಆಗಿದೆ ಬಾಲವೆಂಬ ಒಂದು ಅಂಗ. ಆದರೆ ಮನುಷ್ಯನಿಗೆ ಮಾತ್ರವಿಲ್ಲ.ಮನುಷ್ಯನಿಗೇಕೆ ಬಾಲವಿಲ್ಲ? ಪ್ರಶ್ನೆಗೆ ಉತ್ತರವನ್ನು ಡಾ ಶ್ರೀಧರ್ ಎನ್ ಬಿ ಅವರು ಕೊಡುತ್ತಾರೆ, ಈ ಲೇಖನವನ್ನು ಮುಂದೆ ಓದಿ…
ಜಾಸ್ತಿ ಬಾಲ ಬಿಚ್ಚಿದ್ರೆ ಬಾಲ ಕಟ್ ಮಾಡ್ಬಿಡ್ತೀನಿ ಹುಶಾರ್ !ಎನ್ನುವುದು ಶಾಲೆ, ಪೆÇೀಲಿಸು ಠಾಣೆಗಳಲ್ಲಿ ಕೇಳಿಬರುವ ಮಾತು. ಬಾಲ ಇದ್ದರೆತಾನೆತುಂಡರಿಸುವಮಾತು!.ನಮಗೇಕೆ ಬಾಲವಿಲ್ಲ? ಇದ್ದಿದ್ದರೆಏನಾಗುತ್ತಿತ್ತು. ಇದ್ದರೆ ನಮ್ಮಉಡುಪಿನಲ್ಲಿಅದಕ್ಕೊಂದು ವಿಶೇಷ ಸ್ಥಾನ ಕೊಡಬೇಕಾಗಿತ್ತಲ್ಲ !. ನಮಗೆ ಬಾಲವಿದ್ದರೆ ನಮ್ಮ ಅಂಗಿ ಚಡ್ಡಿ ಸೀರೆ, ಪ್ಯಾಂಟುಗಳನ್ನು ಯಾವರೀತಿಯಲ್ಲಿ ವಿನ್ಯಾಸ ಮಾಡಬೇಕಿತ್ತಲ್ಲ!ಬಸ್ಸು, ಟ್ರೇನು, ವಿಮಾನ, ಸಭೆ ಸಮಾರಂಭಗಳಲ್ಲಿ ಹೊಸ ಹೊಸ ರೀತಿಯ ಮಾತುಗಳು ಹುಟ್ಟಿಕೊಳ್ಳುತ್ತಿದ್ದವು. “ರೀ.. ನನ್ನ ಬಾಲ ತುಳಿಬೇಡ್ರಿ.. ಮುಂದೆ ಹೋಗ್ರೀ” “ಎಲ್ಲರ ಬಾಲದಕಡೆಜೋಪಾನ” ನಿಮ್ಮ ನಿಮ್ಮ ಬಾಲಕ್ಕೆ ನೀವೇ ಜವಾಬ್ದಾರರು” “ನಿಮ್ಮಬಾಲಕ್ಕೊಂದು ವಿಸ್ಮಯರೀತಿಯಮ್ಯಾಚಿಂಗ್‍ಚಡ್ಡಿ, ಬನ್ನಿ ಕೊಳ್ಳಿ” “ವಿಚ್ಛೇದನ ನೀಡದಗಂಡನ ಬಾಲ ಕತ್ತರಿಸಿದ ಹೆಂಡತಿ” ಎಂತೆಲ್ಲ ಸಂಭಾಷಣೆಗಳಿರುತ್ತಿದ್ದವು. ಊಹಿಸಿದರೂ ವಿಸ್ಮಯವೆನಿಸುವ ಈ ವಿಷಯದಲ್ಲಿಅಸಾಮಾನ್ಯ ವಿಜ್ಞಾನಅಡಗಿದೆಎಂದರೆತಪ್ಪಿಲ್ಲ. ಬಾಲವಿಲ್ಲದ ಬೆಕ್ಕು ಅಥವಾ ನಾಯಿಯನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಸಹಸ್ರಾರು ಪಶು, ಮೀನು, ಜಲಚರ, ಹಾವು, ಪಕ್ಷಿಗಳಲ್ಲಿ ಅವುಗಳ ಹಿಂಬಾಗದ ಅವಿಭಾಜ್ಯ ಅಂಗವಾದ ಬಾಲ ನಮಗೇಕಿಲ್ಲ ? ಎಂಬ ಕುತೂಹಲಕಾರಿ ವಿಷಯವನ್ನು ತಿಳಿದುಕೊಳ್ಳೋಣವೇ? ಸ್ವಲ್ಪ ತಾಳ್ಮೆಯಿಂದ ಬಾಲದಕಥೆ ಓದಿ.

ಫೋಟೋ ಕೃಪೆ: deviantart.
ವಾಸ್ತವವಾಗಿ, ಸಮುದ್ರದಲ್ಲಿರುವ ಅನೇಕ ಜಲಚರಗಳಲ್ಲಿ, ಭೂಮಿಯ ಮೇಲೆ ವಾಸಿಸುವ ಸಸ್ಥನಿಗಳಲ್ಲಿ, ಅನೇಕ ಹುಳ ಹುಪ್ಪಟೆ, ಚೇಳು ಇತ್ಯಾದಿಗಳಲ್ಲಿ ಅವುಗಳ ಜೀವನದ ಅವಿಭಾಜ್ಯವೇ ಆಗಿದೆ ಬಾಲವೆಂಬ ಒಂದು ಅಂಗ. ಆದರೆ ಮನುಷ್ಯನಿಗೆ ಮಾತ್ರವಿಲ್ಲ.
ಉದಾಹರಣೆಗೆ, ಸರೀಸೃಪಗಳು ಮತ್ತು ಮೀನುಗಳಿಗೆ ಅದುಅತ್ಯಂತ ಮುಖ್ಯವಾದ ಅಂಗ. ಮೀನುಗಳಿಗಳಿಗಂತೂ ಸಮುದ್ರದಲ್ಲಿ ವೇಗವಾಗಿ ಸಾಗಲು ಬಾಲ ಬೇಕೇ ಬೇಕು. ಹಾಗೆಯೇ ಉಭಯಚರಿಗಳಾದ ಮೊಸಳೆ, ಹಾವು ಇತ್ಯಾದಿಗಳಿಗೂ ಸಹ ಇದು ಚಲನವಲನಕ್ಕೆ ಅತ್ಯಂತಅವಶ್ಯವಾದ ಅಂಗ. ಅಷ್ಟೇ ಏಕೆ? ಈಗ ಬಹುತೇಕ ನಶಿಸಿ ಹೋದ ಡೈನೋಸಾರುಗಳಿಗೂ ಸಹ ಅತ್ಯಂತ ಬಲೀಷ್ಟವಾದ ಟನ್ನುಗಳಷ್ಟು ತೂಗುವ ಬಾಲವಿತ್ತುಎನ್ನುವುದುಇರಿಹಾಸ ಸೇರಿದ ವಿಷಯ. ಹಾಕಿಗಳಿಗೂ ಸಹ ಅವುಗಳ ಬಾಲ ಹಾರಲು, ದಿಕ್ಕನ್ನು ಬದಲಿಸಲು ಅತ್ಯಂತಅವಶ್ಯವಿರುವಒಂದು ಅಂಗ. ಇವುಗಳ ಬದುಕೇ ಬಾಲವಿಲ್ಲದಿದ್ದರೆ ನಿಶ್ಯೇಷಎನ್ನುವುದುಜನಜನಿತ ಸಂಗತಿ.
ಆದರೆ ಬಹುತೇಕ ಸಸ್ಥನಿಗಳಿಗೆ ಇದೊಂದು ಮುಖ್ಯವಾದ ಅಂಗವಿಲ್ಲದಿದ್ದರೂ ಸಹ ಅನೇಕ ಇತರ ವಿಷಯಗಳಿಗೆ ಬಾಲ ಬೇಕು. ಭೂಮಿಯ ಮೇಲೆ ವಾಸಿಸುವ ಪ್ರತಿಯೊಂದು ಪ್ರಾಣಿಗೂಒಂದುತಲೆ ಮತ್ತುಒಂದು ಬಾಲವಿದೆ. ನಾಲ್ಕು ಕಾಲುಗಳು ಇರಬಹುದು, ಮನುಷ್ಯನಂತೆಇರದೆಯೂ ಸಹ ಇರಬಹುದು. ಆದರೆತಲೆಯಲ್ಲಿನ ಮೆದುಳು ಇಡೀದೇಹವನ್ನು ನಿಯಂತ್ರಿಸುವುದುಎಲ್ಲಾ ಪ್ರಾಣಿ, ಪಶು ಪಕ್ಷಿಗಳಲ್ಲಿ ಅತ್ಯಂತ ಸಾಮಾನ್ಯವಾದ ವಿಷಯ.

ಫೋಟೋ ಕೃಪೆ : worldwildlife.
ಆದರೆ ಪ್ರಾಣಿಗೆ ಒಂದೇ ಬಾಲ ಏಕೆ?! ಬಾಲಗಳು ಏಕೆ ಹೇಗೆ ಕಾಣಿಸಿಕೊಂಡಿವು ಎಂಬುದನ್ನುತಿಳಿಯಲು ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡುವುದುಅತ್ಯಂತಅವಶ್ಯ.
ಜಗತ್ತಿನಲ್ಲಿಜೀವದಆರಂಭದಕಾಲದಲ್ಲಿ ಭೂಮಿಯಲ್ಲಿ ವಾಸಿಸುವ ಎಲ್ಲಾ ಪ್ರಾಣಿ ಪ್ರಭೇದಗಳ ಪೂರ್ವಜರು ವಿಭಿನ್ನಗಾತ್ರದ ಬಾಲಗಳನ್ನು ಹೊಂದಿದ್ದವು. ಆದರೆಸಹಸ್ರಾರು ಶತಮಾನಗಳ ನಂತರ ಪ್ರಾಣಿಗಳು ವಿಕಸನಗೊಂಡ ನಂತರ, ಅವುಗಳಲ್ಲಿಕ್ರಮೇಣ ಅವುಗಳಲ್ಲಿ ಬಾಲದಅವಶ್ಯಕತೆಕಡಿಮೆಯಾಗುತ್ತಾ ಬಂತುಎನ್ನಲಾಗಿದೆ. ಕಾಲಕ್ರಮೇಣಮರಳು ಅಥವಾ ಪೆÇದೆಗಳಲ್ಲಿ ವಾಸಿಸುತ್ತಿದ್ದ ಮೋಲ್‍ಅಥವಾ ಶ್ರೂ ನಂತಅನೇಕ ಭೂಚರ ಪ್ರಾಣಿಗಳಿಗೆ ಬಾಲವು ಯಾವುದೇ ಪ್ರಯೋಜನವನ್ನು ನೀಡದಕಾರಣಅದರಗಾತ್ರಚಿಕ್ಕದಾಗುತ್ತಾ ಬಂದಿತುಎನ್ನಲಾಗಿದೆ.
ಆದರೆ ಮರಗಳಲ್ಲಿ ವಾಸಿಸುವ, ನೆಲದ ಮೇಲೆ ವೇಗವಾಗಿ ಓಡಾಡುವ ಮತ್ತು ಜಲಮೂಲಗಳಲ್ಲಿ ಈಜುವ ಪ್ರಾಣಿಗಳಿಗೆ ಬಾಲವು ಜೀವನದಆಧಾರವಾಗಿರುವುದರಿಂದಅದು ಬಲವಾಗಿಯೇ ಬೆಳಯುತ್ತಾ ಬಂದಿತು. ಅಳಿಲು ಮತ್ತು ಮಂಗ, ಮರ ಹತ್ತುವ ಪೆÇಸಮ್‍ಗಳು ಸಹ ತಮ್ಮ ಬಾಲಗಳನ್ನು ಸ್ಟೀರಿಂಗ್ ವೀಲ್‍ನಂತೆ ನಿಯಂತ್ರಿಸುತ್ತವೆ. ಅವುಒಂದು ಮರದಿಂದಇನ್ನೊಂದಕ್ಕೆಹಾರಿದಾಗ, ಗುರಿಯತ್ತಉತ್ತಮದೃಷ್ಟಿಗಾಗಿಬಾಲವನ್ನುಅತ್ಯಂತ ಯಶಸ್ವಿಯಾಗಿ ಉಪಯೋಗಿಸುತ್ತವೆ. ನೆಲದ ಮೇಲೆ ಚಲಿಸುವ ವೇಗವುಳ್ಳ ಕಾಂಗರೂ ಮತ್ತುಜರ್ಬೋಗಳಂತ ಪ್ರಾಣಿಗಳಿಗೆ ಬಾಲವು ಅವುಗಳ ದೇಹವನ್ನು ನಿಯಂತ್ರಣ ಮಾಡಲು ಅತ್ಯಂತ ಅವಶ್ಯ ಅಂಗ. ಕಾಂಗರೂಗಂತೂ ಮೂರನೆಯ ಕಾಲಿನಂತ ಅತ್ಯಂತ ಪ್ರಭಲವಾದ ಶಕ್ತಿಶಾಲಿ ಬಾಲ ಇದ್ದುಇದರಿಂದಲೇ ಅದು ಚಿಮ್ಮುತ್ತಾ ಓಡಲು ಸಾಧ್ಯವಾಗಿದ್ದು !.

ಫೋಟೋ ಕೃಪೆ : NSTA
ಮೀನಿನಂತ ಲಕ್ಷಾಂತರ ಜಲಚರಗಳು ಬಾಲವಿಲ್ಲದೇ ಬದುಕಲಾರವು. ನೀರಿನಲ್ಲಿ ಕೌಶಲ್ಯದಿಂದ ಈಜಿ ಸಾಗಲು ಬಲವಾದ ಬಾಲ ಬೇಕೇ ಬೇಕು. ದೊಡ್ದದೊಡ್ಡ ಮೀನುಗಳು, ಡಾಲ್ಫಿನ್‍ಗಳು, ಕೊಲೆಗಾರ ತಿಮಿಂಗಿಲಗಳುಇವುಗಳಿಗೆ ಸಾರಿಗೆ ಸಾಧನವಾಗಿ ಬಾಲ ಹೊರಹೊಮ್ಮಿದೆ.ಡೈನೋಸಾರುಗಳು ಮತ್ತು ಅನೇಕ ಇತರಸರೀಸೃಪಗಳು ತಮ್ಮ ಎದುರಾಳಿಗಳಿಗೆ ತಾನುತಾವು ಬಲಶಾಲಿ ಎಂದುತೋರಿಸಲು ಬಯಸಿದಾಗ ಶಕ್ತಿಯುತವಾದತಮ್ಮ“ಬಾಲ”ವನ್ನು ಬಳಸುತ್ತವೆ.
ಇನ್ನು ಹಲ್ಲಿಗಳಂತ ಅಸಹ್ಯಕರ ಜೀವಿಗಳಿಗೆ ಸಹ ಬಾಲದಿಂದಲೇ ಚಲನೆ ಸಾಧ್ಯವಾದರೂ ಸಹ ಜೀವಕ್ಕೆಕುತ್ತು ಬಂದಾಗ ಬಾಲವನ್ನು ಬಿಟ್ಟು ಓಡಿ ಹೋಗುವ ಸಮಯಸಾಧಕತನ ಮೆರೆಯುತ್ತವೆ. ಹಲ್ಲಿಯು ಹೊರಡಿಸುವ ಶಕುನದ ‘ಲೊಚ್ ಲೊಚ್’ ಶಬ್ಧ ಸಹ ಬಾಲವನ್ನುಗೋಡೆಗೆ ಬಡಿದುಉಂಟು ಮಾಡುವುದುಅನ್ನುವುದು ನಮಗೆಲ್ಲಾ ತಿಳಿದೇ ಇದೆ. ಹಲ್ಲಿಯನ್ನು ಹಿಡಿಯಲು ಹೋದಲ್ಲಿ ಬಾಲ ನಿಮ್ಮ ಕೈಲಲ್ಲೇಇದ್ದುಅದು ತಪ್ಪಿಸಿಕೊಂಡು ಓಡಿ ಹೋಗುವ ಸಾಧನವಾಗುತ್ತದೆ. ಟಾಮ್ ಮತ್ತು ಜೆರ್ರಿದಂತಕಥೆಯಲ್ಲಿ ಜಾಣಜರ್ರಿಯನ್ನು ಹಿಡಿದು ಪಳಗಿಸಲು ಬಾಲವನ್ನು ಹೇಗೆ ಹೀಡಿದು ಬಗ್ಗಿಸಲು ಟಾಮ್ ಪ್ರಯತ್ನಿಸುತ್ತದೆಎಂಬುದು ಮತ್ತುಟಾಮಿನ ಬಾಲವನ್ನು ಇಲಿ ಕತ್ತರಿಯಲ್ಲಿ ಸಿಕ್ಕಿಸಿ ಜೆರ್ರಿ ಹೇಗೆ ಅದಕ್ಕೆಕಾಟಕೊಡುತ್ತದೆಎಂಬುದನ್ನೆ ನೆನೆಸಿಕೊಂಡರೆ ನಗು ಬರುತ್ತದೆ. ಬಾಲವಿಲ್ಲದ
ಹಾವು ಹಲ್ಲಿಗಳಂತ ಸರೀಸ್ರಪಗಳನ್ನು ಊಹಿಸಲೂ ಸಹ ಸಾಧ್ಯವಿಲ್ಲ.
ಪಕ್ಷಿಗಳಿಗೂ ಸಹ ಬಾಲ ಏಕೆ ಬೇಕು ಅನ್ನುವುದು ಸೋಜಿಗದ ಸಂಗತಿ. ಬಾಲ ಇವುಗಳಲ್ಲಿ ವೇಗವನ್ನುಕಡಿಮೆ ಮಾಡುವ ಬ್ರೇಕಿನಂತೆಕಾರ್ಯ ನಿರ್ವಹಿಸುತ್ತದೆ. ಮೇಲೆ ಹಾರುವ ಹಕ್ಕಿ ಹಟಾತ್ತಾನೆ ಕೆಳಗೆ ಇಳಿಯಲು ಬಾಲವು ಬೇಕೇ ಬೇಕು. ವೇಗವಾಗಿ ಹೋಗುವಾಗ ದಿಕ್ಕು ಬದಲಿಸಲೂ ಸಹ ಬಾಲ ಬೇಕೇ ಬೇಕು. ಪಾರಿವಾಳಗಳು ಹಾರುವ ಪರಿಯನ್ನು ನೋಡಿದಾಗ ಅವು ಬಾಲವನ್ನು ನೆಲದ ಮೇಲೆ ಹೇಗೆ ಅಗಲವಾಗಿ ಹರಡಿ ಕುಳಿತುಕೊಳ್ಳುತ್ತವೆ ಎಂಬುದೂ ಸಹ ತಿಳಿದೇ ಇದೆ. ಇದನ್ನು ನೋಡಿಯೇರೈಟ್ ಸಹೋದರರು ವಿಮಾನವನ್ನು ವಿನ್ಯಾಸ ಮಾಡಿದರುಎಂಬುದು ಈಗ ಇತಿಹಾಸ. ಎದುರಾಳಿ ಪಕ್ಷಿಯಜೊತೆ ಹೊಡೆದಾಡಲು ಮತ್ತು ಶತ್ರುಗಳನ್ನು ಸಮರ್ಥವಾಗಿಎದುರಿಸಲು ಬಾಲ ಒಮ್ದು ಅವಿಭಾಜ್ಯ ಅಂಗ. ಮರಕುಟಿಗ ಹಕ್ಕಿಗಳಿಗೆ ಕೊಕ್ಕಿನಿಂದ ಬಲವಾಗಿ ಮರಕ್ಕೆತೋಟೆ ಹೊಡೆಯಲು ಬಾಲವು ಬೇಕೇ ಬೇಕು.ಗಂಡುನವಿಲು ತನ್ನ ಬಾಲದ ಬಣ್ಣ ಬಣ್ಣದ ಮನಮೋಹಕ ಗರಿಗಳನ್ನು ಅಂದವಾಗಿ ಹರಡಿ ನರ್ತನ ಮಾಡಿ ಹೆಣ್ಣು ನವಿಲನ್ನು ಬುಟ್ಟಿಗೆ ಹಾಕಿಕೊಳ್ಳುವುದು ಎಲ್ಲರಿಗೂ ತಿಳಿದೇ ಇದೆ.

ಫೋಟೋ ಕೃಪೆ : smithsonianmag
ನಮ್ಮ ಗೋಮಾತೆ ಮತ್ತಿತರ ರಾಸುಗಳಲ್ಲಿ ಬಾಲವು ರಕ್ಷಣಾತ್ಮಕ ಅಂಗವಾಗಿ ಕಾರ್ಯ ನಿರ್ವಹಿಸುತ್ತದೆ. ಸದಾ ನೊಣಗಳು, ಕಚ್ಚುವ ಸೊಳ್ಳೆಗಳನ್ನು ದೇಹದಿಂದ ಓಡಿಸಲು ಬಾಲ ಬೇಕೇ ಬೇಕು. ಅಲ್ಲದೇ ಹೊಡೆದಾಟದ ಸಮಯದಲ್ಲಿಯೂ ಸಹ ಬಾಲ ದಿಕ್ಸೂಚಿಯಂತೆ ಕೆಲಸ ನಿರ್ವಹಿಸುತ್ತದೆ. ಆಕಳ ಬಾಲದಲ್ಲಿ 18-20 ಎಲುಬುಗಳಿವೆ. ದಿನವೊಂದಕ್ಕೆ ಹಸುವೊಂದು ಸರಾಸರಿ 1200-1500 ಸಲ ಅದರ ಬಾಲವನ್ನು ಹೊಡೆದುಕೊಳ್ಳುತ್ತದೆ. ಇದು ಹಸುವನ್ನು ಸ್ವಚ್ಚವಾಗಿಸಿಕೊಳ್ಳಲು, ಮತ್ತೊಂದು ಹಸುವಿನೊಂದಿಗೆ ಸಂಪರ್ಕ ಸಾಧಿಸಲೂ ಸಹ ಅವಶ್ಯ. ಆಕಳುಗಳು ಬೆದೆಗೆ ಬಂದಿರುವುದೂ ಸಹ ಬಾಲದ ಚಲನೆಯಿಂದಲೇ. ಕರು ಹಾಕುವಾಗ, ಹೊಟ್ಟೆಯಲ್ಲಿ ನೋವಿದ್ದಾಗ ಆಕಳುಗಳು ಬಾಲವನ್ನು ಸದಾಎತ್ತಿ ಹಿಡಿದಿರುತ್ತವೆ.ಇನ್ನು ಎಮ್ಮೆಗಳಂತೂ ಸಹ ಬಾಲವನ್ನುಅತ್ಯಂತ ಯಶಸ್ವಿಯಾಗಿ ಅವುಗಳ ಉಚ್ಚೆಯಲ್ಲಿ ಮುಳುಗಿಸಿ ಒಮ್ಮೆ ಬೀಸಿದವೆಂದರೆ ತಾಕಿದವರು ಮೂರು ಬಾರಿ ಸ್ನಾನ ಮಾಡಿ ಬಂದರೂ ಸಹ ವಾಸನೆ ಹೋಗಲಿಕ್ಕಿಲ್ಲ. ಆಕಳು ನೆಲ ಹಿಡಿದಾಗ, ಏಳಲು ಅಸಹಕಾರ ಮಾಡಿದಾಗ, ಮೊಂಡುತನ ಮಾಡಿದಾಗ ಅವುಗಳನ್ನು ಹಿಡಿದೆತ್ತಿ ನಿಯಂತ್ರಿಸಲು ಬಾಲ ಬೇಕೇ ಬೇಕು. ಬಾಲದ ಕುಚ್ಚು ಆಕರ್ಷಕವಾಗಿದ್ದು, ಅನೇಕಾನೇಕ ಹೇನಿನಂತಹಕ್ಷುದ್ರ ಜೀವಿಗಳ ಅಡಗುತಾಣವೂಆಗಿದೆ.
ಆದರೆ ಕುದುರೆಗಳು ಬಾಲವನ್ನು ಬಳಸುವುದು ಒಂಥರಾ ಫ್ಯಾನಿನ ಹಾಗೆ. ಸೆಖೆ ಜಾಸ್ತಿಯಾದಾಗ ಅವು ಬಾಲವನ್ನುಚಾಮರದಂತೆ ಬಳಸಿ ದೇಹದಉಷ್ಣತೆಯನ್ನುಕಡಿಮೆ ಮಾಡಿಕೊಳ್ಳುತ್ತವೆ.
ನಾಯಿಗಳಲ್ಲಿ ಬಾಲ ಡೊಂಕುಎಂದು ಪ್ರತೀತಿ. ನಾಯಿಯ ಬಾಲವೇಕೆ ಡೊಂಕುಎನ್ನುವುದಕ್ಕೆತರಹೆವಾರಿ ಕಥೆಗಳಿವೆ. ಮುಂದೆ ಮತ್ತೊಮ್ಮೆಅದರ ಬಗ್ಗೆ ಬರೆಯುವೆ. ನಾಯಿಗಳಲ್ಲಿ, ಬೆಕ್ಕುಗಳಲ್ಲಿ ಮತ್ತುಇತರ ಮುದ್ದು ಪ್ರಾಣಿಗಳಲ್ಲಿ ಬಾಲವು ಅತ್ಯಂತಚುರುಕಾಗಿದ್ದು ಸಂವಹನದ ಪ್ರಭಲ ಸಾಧನವಾಗಿದೆ. ನಾಯಿಗಳು ಅವುಗಳ ಸಂತಸ, ದು:ಖ, ಬೇಸರ, ನವೋಲ್ಲಾಸಎಲ್ಲವನ್ನೂ ಸಹ ಬಾಲದ ಮೂಲಕವೇ ವ್ಯಕ್ತ ಮಾಡುವುದು. ಡೊಂಕು ಬಾಲದ ನಾಯಕರೆ, ನೀವೇನೂಟವ ಮಾಡಿದಿರಿಎಂದು ಪುರಂಧರದಾಸರು ನಾಯಿಯ ಬಾಲದ ಮೂಲಕ ಮನುಷ್ಯರ ಬುದ್ಧಿಯ ವಿಡಂಬನೆ ಮಾಡುತ್ತಾರೆ. ಬಾಲದ ಚಲನೆಯ ಮೇಲೆಯೇ ಸಂಪೂರ್ಣವಾಗಿ ನಾಯಿಬುದ್ಧಿಯನ್ನು ಹೇಳಬಹುದು. ನಾಯಿಯ ಬಾಲವು ಎಡಕ್ಕೂ ಬಲಕ್ಕೂ ಆಡುತ್ತಿದ್ದರೆಅದು ಖುಷಿಪಟ್ಟಿದೆಯೆಂದೂ, ವಿಭಿನ್ನ ದಿಕ್ಕುಗಳಲ್ಲಿ ಬಾಣದಂತೆ ಚಲಿಸುತ್ತಿದ್ದರೆಅದುಕೋಪಗೊಂಡಿದ್ದು ಮುಟ್ಟಬಾರದೆಂದೂ, ಬಾಲ ಎರಡು ಕಾಲುಗಳ ಮಧ್ಯೆ ಹೋಗಿದ್ದರೆಅದಕ್ಕೆ ಭಯವಾಗಿದೆಯೆಂದೂಅರ್ಥ. ಶ್ವಾನದ ಅನೇಕ ಭಾವನೆಗಳನ್ನು ಬಾಲದ ಚಲನವಲನೆಯ ಮೇಲೆ ನಿಖರವಾಗಿ ಕಂಡುಕೊಳ್ಳಬಹುದು.
ಕೆಲವು ಪ್ರಾಣಿಗಳಿಗೆ ಬಾಲವು ಮನುಷ್ಯನ ಕೈಗಳ ಪಾತ್ರವನ್ನು ವಹಿಸುತ್ತದೆ. ಅನೇಕ ಜಾತಿಯ ಮಂಗಗಳು, ಲಂಗೂರಗಳು, ಮುಸವಗಳು ಅವುಗಳ ಉದ್ದನೆಯ ಬಾಲವನ್ನು ಮರದ ಕೊಂಬೆಗೆ ಬಿರುಸಾಗಿ ಸುತ್ತಿಗಟ್ಟಿಯಾಗಿ ಭದ್ರವಾಗಿ ಕುಳಿತು ಕೊಳ್ಳಲು ಬಳಸುತ್ತವೆ. ಬಾಲದ ಸಹಾಯದಿಂದಲೇ ನೇತಾಡುತ್ತಾಜೋಕಾಲಿ ಹಾಕುತ್ತಾ ಹಣ್ಣುಗಳನ್ನು ತಿನ್ನಲು ಬಳಸುತ್ತವೆ.
ಕೆಲವೊಂದು ವಿಧದನರಿ, ತೋಳ ಅಥವಾ ಚಿರತೆ ಮುಂತಾದ ಪ್ರಾಣಿಗಳಿಗೆ, ಉಗ್ರ ಹಿಮದಿಂದತಮ್ಮನ್ನುತಾವು ರಕ್ಷಿಸಿಕೊಳ್ಳಲು ಬಾಲವು ಕಂಬಳಿಯ ರೀತಿಯಲ್ಲಿಕಾರ್ಯ ನಿರ್ವಹಿಸುತ್ತದೆ. ಇವುಗಳು ಚಲಿಸುವ ದಿಕ್ಕನ್ನೂ ಸಹ ಅವುಗಲ ಬಾಲದ ದಿಶೆಯಿಂದ ಪತ್ತೆ ಹಚ್ಚಬಹುದಂತೆ !. ಹಿಮದ ಗಾಳಿಯಿಂದ ರಕ್ಷಿಸಿಕೊಳ್ಳಲು ತುಪ್ಪಳದ ಬಾಲದಿಂದ ಮೂಗನ್ನು ಬಾಲದಿಂದ ಮುಚ್ಚಿಕೊಳ್ಳುತ್ತವೆ. #ಕೊರೋನಾ ಬರುವ ಮೊದಲುಚೀನಿಯರು ಹುರಿದು ಮುಕ್ಕಿದ ವಾಹಕ ಪೆಂಗೋಲಿನ್ ಎಂಬ ಪಾಪದಜೀವಿಯು ವಾತಾವರಣದತಾಪಮಾನದ ಪತ್ತೆಗೆ ಬಾಲವನ್ನು ಥರ್ಮಾಮೀಟರಿನಂತೆ ಉಪಯೋಗಿಸುತ್ತದಂತೆ. ಅಳಿಲೂ ಸಹ ಬಾಲಕ್ಕೆ ಮರಳನ್ನು ಅಂಟಿಸಿಕೊಂಡು ಕಪಿಗಳು ಲಂಕೆಗೆ ಹೋಗಲು ಕಟ್ಟುತ್ತಿರುವ ಸೇತುವೆಯ ಮೇಲೆ ಹೊರಳಾಡಿ, ಮರಳು ಸಾಗಿಸಿ ಶ್ರೀರಾಮನಿಗೆ ರಾಮ ಸೇತುವೆಕಟ್ಟಲು ನೆರವಾಗಿ“ಅಳಿಲು ಸೇವೆ” ಮಾಡಿದ್ದರಿಂದಅದರ ಬೆನ್ನ ಮೇಲೆ ಮೂರು ನಾಮವನ್ನು #ಶ್ರೀರಾಮ ಎಳೆದ ಎಂಬ ಪ್ರತೀತಿಇದೆ. ಇದು ಮರದಿಂದ ಮರಕ್ಕೆ ಹಾರಲು ಬಾಲವನ್ನು ಬಳಸಿ ಬ್ಯಾಲನ್ಸ್ ಮಾಡುತ್ತದೆ. ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೋಕಾದಂಬರಿಯಲ್ಲಿರುವ ಹೀರೋ ಬಾಲದ ಓತಿ. ಇದು ಬಾಲದಂತೆಕಾಣುವಚರ್ಮದ ಪದರಗಳನ್ನು ರೆಕ್ಕೆಯಂತೆ ಬಿಡಿಸಿ ಮರದತುದಿಯಿಂದ ಮಹಾನ್ ಕಂದಕಕ್ಕೆ ಹಾರಿಅನಂತದಲ್ಲಿ ಮಾಯವಾಯಿತೆಂದು ವರ್ಣಿಸುವುದುಕಣ್ಣಿಗೆಕಟ್ಟಿದಂತಿದೆ.

ಫೋಟೋ ಕೃಪೆ : easydrawingart
ತಲೆ ಮತ್ತು ಬಾಲ ಶರೀರವನ್ನು ಸಮತೋಲನದಲ್ಲಿಡಲು ಬೇಕಾಗುತ್ತವೆ. ಮನುಷ್ಯನಿಗೆ ತಲೆ 5 ಕಿಲೋ ಭಾರವಿರುತ್ತಿದ್ದು, ಕೇವಲ ಎರಡೇ ಕಾಲಿನಲ್ಲಿಆತ ನೇರವಾಗಿ ನಡೆಯ ಬಲ್ಲ. ತಲೆ ಜಾಸ್ತಿ ಕೆಲಸ ಮಾಡುವಲ್ಲಿ ಬಾಲಕ್ಕೆ ಕೆಲಸ ಕಡಿಮೆಯಂತೆ. ಮನುಷ್ಯನಲ್ಲಿ ಶರೀರ ನೇರವಾಗಿರಲು ಮೆದುಳು ಸಂಯಮದಿಂದ ಕೆಲಸ ಮಾಡುವುದರಿಂದ ಆತನಿಗೆ ಬಾಲವಿಲ್ಲವಂತೆ. ಆದರೆ ನಮ್ಮ ನಿಮ್ಮ ಬುಡದಲ್ಲಿ ಬಾಲದ ಪಳಿಯುಳಿಕೆಯಾಗಿ ಒಂದು ಎಲುಬು ಇದೆ. ಹೆಮ್ಮೆಯಿಂದ ಬೇಕಾದರೆಮೊಂಡಾದ ಬಾಲದಅಂತಿಮ ಪಳಿಯುಳಿಕೆ ಮುಟ್ಟಿ ಪರೀಕ್ಷೆ ಮಾಡಿಕೊಳ್ಳಿ !! ಇಷ್ಟು ಓದಿದ ಮೇಲೂ ಸಹ ನಿಮ್ಮ ಕೈ ನಿಮ್ಮ ಬಾಲದ ಬುಡ ಮುಟ್ಟಿಕೊಳ್ಳದಿದ್ದರೆ ನೀವಿನ್ನೂ ಮನುಷ್ಯನ ಸ್ಥಿತಿ ತಲುಪಿಲ್ಲ ಎಂದರ್ಥ !!
- ಡಾ ಶ್ರೀಧರ್ ಎನ್ ಬಿ (ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ ಪಶುವೈದ್ಯಕೀಯ ಮಹಾವಿದ್ಯಾಲಯ) ಶಿವಮೊಗ್ಗ.
