ಐದು ಮರದ ಶಾಲಕ್ಕ – ಶಾಲಿನಿ ಹೂಲಿ ಪ್ರದೀಪ್



ಒಂದು ಗಿಡ ನೆಟ್ಟು ಮರವಾಗಲು ವರ್ಷಾನುಗಂಟಲೇ ಕಾಯಬೇಕು, ಅದೇ ಗಿಡ ಕಡೆಯಲು ನಿಮಿಷಗಳೇ ಸಾಕು…ಗಿಡ ಬೆಳೆಸಿ, ಹಸಿರು ಉಳಿಸಿ… ನೀವು ಗಿಡ ನೆಟ್ಟು ಸಾಲುಮರದ ತಿಮ್ಮಕ್ಕ ಅಮ್ಮನಂತೆ ಆಗಿದ್ದರೆ ನಿಮ್ಮ ಅನುಭವವನ್ನು ಹಂಚಿಕೊಳ್ಳಿ…

ಸಾಲು ಮರದ ತಿಮ್ಮಿಕ್ಕ ಅಮ್ಮನವರ ಜಾಗವನ್ನು ಯಾರು ಪಡೆಯಲಾರರು, ಆದರೆ ಅವರ ಪ್ರೇರಣೆಯಿಂದ ಐದು ಮರಗಳನ್ನು ನೆಟ್ಟು ಇದು ಮರಗಳ ಶಾಲಕ್ಕ ನಾನು. 5 ವರ್ಷದ ಹಿಂದೆ ನನ್ನ ಮಕ್ಕಳ ಪ್ರತಿ ಹುಟ್ಟುಹಬ್ಬದ ದಿನದಂದು ಒಂದೊಂದು ಗಿಡ ನೇಡುತ್ತಾ ಬಂದೆ.

 

 

ಈಗ ಐದು ಗಿಡಗಳು ಬೇರು ಬಿಟ್ಟು ಆಕಾಶದ ಉದ್ದಗಲಕ್ಕೂ ಛಾಚುಕೊಂಡಿದೆ. ಅದರ ನೆರಳು, ಅದರ ಚಿಗುರು ನೋಡುವಾಗಲೆಲ್ಲ ನನ್ನ ಮಕ್ಕಳ ಹುಟ್ಟುಹಬ್ಬವನ್ನು ನೆನೆಪಿಸುತ್ತದೆ. ಬೆಂಗಳೂರಿನಲ್ಲಿ ರಸ್ತೆಗಾಗಿ, ನಿವೇಶನಕ್ಕಾಗಿ ಇರೋ ಮರಗಳನ್ನು ಕಡಿದು ಬಯಲು ಮಾಡುವಾಗ, ಮರಗಳಿಗಾಗಿಯೇ ಜಾಗ ಸಿಗುವುದು ಕಷ್ಟಕರ. ಮನೆಯ ರಸ್ತೆಯ ಅಕ್ಕ ಪಕ್ಕದಲ್ಲಿ ಅಲ್ಲೊಂದು ಇಲ್ಲೊಂದು ಗಿಡವನ್ನು ನೆಟ್ಟಿದ್ದೆ. ಖಾಲಿ ನಿವೇಶನದವರು ಮನೆ ಕಟ್ಟುವಾಗ ಗಿಡವನ್ನು ತಗೆದು ಬಿಸಾಡಬಹುದು ಎನ್ನುವ ಕಾರಣಕ್ಕೆ ಮೂಲೆಯಲ್ಲಿ ನೆಟ್ಟೆ, ಮನೆ ಕಟ್ಟುವವರು ದೊಡ್ಡ ಮನಸ್ಸು ಮಾಡಿ ನನ್ನ ಎರಡು ಗಿಡಗಳನ್ನು ಉಳಿಸಿಕೊಂಡರು. ಅವರಿಗೆ ಧನ್ಯವಾದಗಳು.

ವಸಂತ ಮಾಸದಲ್ಲಿ ಅದರ ಚಿಗುರು, ಹೂವು ನೋಡುವಾಗ ನನ್ನಲ್ಲಿ ‘ಐದು ಮರದ ಶಾಲಕ್ಕ’ ಎನ್ನುವ ಒಂದು ಅಹಂನ್ನು ಮೂಡಿಸುತ್ತದೆ. ಆಗ ನನ್ನ ಅಹಂನ್ನು ಮುರಿಯಲು ನಾಲ್ಕು ಕಿ.ಮೀ. ಗಿಡ ನೆಟ್ಟು , ಪೋಷಿಸಿ ಬೆಳೆಸಿದ ಗಿಡಗಳ ತಾಯಿ ಸಾಲುಮರದ ತಿಮ್ಮಕ್ಕ ಅಮ್ಮ ನೆನಪಾಗುತ್ತಾರೆ.

ಅದೇ ಗಿಡದ ನೆರಳಿಗಾಗಿ ಕಾರ್, ಬೈಕ್ ನವರು ಕಿತ್ತಾಡುವಾಗ ಅದನ್ನು ನೋಡಿ… ‘ಐದು ಮರ ಶಾಲಕ್ಕ’ ಎಂದು ಮನಸ್ಸು ಮತ್ತೆ ಕಿಲ್ ಕಿಲನೆ ನಗುತ್ತದೆ…


  • ಶಾಲಿನಿ ಹೂಲಿ ಪ್ರದೀಪ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading