ಅವನಿಯಲ್ಲಿ ನಿಲುಕದಂತ ಚೆಲುವ ಚೆನ್ನ ಚಂದ್ರಮ ಅವನೆ…ಸುಂದರ ಸಾಲುಗಳನ್ನು ಕವಿ ಚನ್ನಕೇಶವ ಜಿ ಲಾಳನಕಟ್ಟೆ ಸುಂದರವಾಗಿ ವರ್ಣಿಸಿದ್ದಾರೆ, ಮುಂದೆ ಓದಿ…
ಅವನಿಯಲ್ಲಿ ನಿಲುಕದಂತ
ಚೆಲುವ ಚೆನ್ನ ಚಂದ್ರಮ
ಅವನೆ ಇಲ್ಲಿ ತಲುಪಿ ನಿಂತ
ಹೃದಯದಲ್ಲಿ ಸಂಭ್ರಮ
ಇರುಳಿನಲ್ಲಿ ಅರಳಿನಿಂತ
ಇನಿಯನಿವನು ಸುಂದರ
ತೆರಳಿದರು ಜೊತೆಯಲಿರುವ
ಭುವಿಯ ಭವ್ಯ ಹಂದರ
ಕರೆದರೂನು ಬಾರನೆಂದು
ಮೌನಿಯಾಗಿ ನಿಲ್ಲುತ
ಕೆರೆಯ ನೀರ ಒಳಗೆ ಬೆರೆವ
ನೋಡಲೇಳಿ ಸೊಲ್ಲುತ
ತಾರೆಗಳಲಿ ನೀರೆಗಳಿರೆ
ಅವನೆ ಅಲ್ಲಿ ಬಂಧಿತ
ಮೀರಿ ತೋರೆ ಪ್ರೀತಿ ಧಾರೆ
ಇಳಿವನೇನೊ ಖಂಡಿತ.
ತುಡಿದು ಮನಸು ಪ್ರೀತಿಗಾಗಿ
ಮೇರೆ ಮೀರಿ ನಿಂತಿದೆ
ಮಿಡಿದು ಏರಿ ಒಲವಿಗಾಗಿ
ಧಾರೆಯಾಗಿ ಬಂದಿದೆ.
- ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು
