ಮೈಸೂರಿನ ನಟನ ರಂಗಶಾಲೆಯಲ್ಲಿ ‘ಜತೆಗಿರುವನು ಚಂದಿರ’ ನಾಟಕದಲ್ಲಿ ಮಂಗಳಾ ಎನ್ ಮತ್ತು ಹುಲುಗಪ್ಪ ಕಟ್ಟೀಮನಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲೂ ಬರಲಿದ್ದಾರೆ, ತಪ್ಪದೆ ನಾಟಕಕ್ಕೆ ಬನ್ನಿ….
ನಾಟಕ : ಜತೆಗಿರುವನು ಚಂದಿರ
ರಚನೆ : ಜಯಂತ್ ಕಾಯ್ಕಿಣಿ
ದಿನಾಂಕ : ಮೇ೨೬, ೨೦೨೪
ಸಮಯ : ಸಂಜೆ ೬.೩೦ ಕ್ಕೆ
ಸ್ಥಳ : ನಟನ ರಂಗಶಾಲೆ, ಮೈಸೂರು
ಟಿಕೆಟ್ ದರ : ೧೫೦.೦೦
ಮಂಗಳಾ ಎನ್ ರಂಗಾಯಣದಲ್ಲಿ ನಟಿಯಾಗಿ ಕೆಲಸ ಮಾಡುತ್ತಿದ್ದ ಕಾಲದಲ್ಲಿ ಹುಲುಗಪ್ಪ ಕಟ್ಟೀಮನಿ ಮತ್ತು ಅವರು ಹಲವು ನಾಟಕಗಳಲ್ಲಿ ಜೋಡಿಯಾಗಿ ಅಭಿನಯಿಸಿದ್ದರು. ಯೂರಿಪಿಡೀಸಿನ ಹಿಪೋಲಿಟಸ್ ನಾಟಕದಲ್ಲಿ ಫೇಡ್ರಾ – ಥೀಸಿಯೂಸ್ ರಾಗಿ (ನಿ: ವ್ಯಾಸಿಲಿಯೋಸ್ ಕ್ಯಾಲೀಟ್ಸಿಸ್), ಮೋಹನ ರಾಕೇಶರ ಅಲೆಗಳಲ್ಲಿ ರಾಜಹಂಸಗಳು ನಾಟಕದಲ್ಲಿ ಅಲಕಾ- ಶ್ಯಾಮಾಂಗರಾಗಿ(ನಿ: ಗಂಗಾಧರ ಸ್ವಾಮಿ), ಅಕಿರೋ ಕುರೋಸೋವಾ ಅವರ ರಶೋಮನ್ ಚಿತ್ರದ ರಂಗರೂಪದಲ್ಲಿ ಹೆಣ್ಣು – ಡಕಾಯಿತರಾಗಿ( ನಿ: ಕನ್ಹಯ್ಯಲಾಲ್), ಚೆಕಾಫ್ ರ ಚೆರ್ರಿ ಆರ್ಚರ್ಡ್ ನಾಟಕದ ದುನ್ಯಾಶಾ- ಯಾಶಾರಾಗಿ ( ನಿ; ಫ್ರಿಟ್ಜ ಬೆನವಿಟ್ಜ್) , ಷೇಕ್ಸಪಿಯರನ ಮೂರು ನಾಟಕಗಳ ಕೊಲಾಜಿನಲ್ಲಿ, ಮಿಡ್ ಸಮ್ಮರ್ ನೈಟ್ಸ್ ಡ್ರೀಂ ನ ಹಿಪೋಲಿಟಾ – ಕತ್ತೆ(ಬಾಟಮ್)ರಾಗಿ ( ನಿ.ಫ್ರಿಟ್ಜ್ ಬೆನವಿಟ್ಜ್) ಮತ್ತು ಚೌಗಲೆ ಯವರ ಗಾಂಧಿ v/s ಗಾಂಧಿ ನಾಟಕದಲ್ಲಿ ಚಿಕ್ಕ ವಯಸ್ಸಿನ ಕಸ್ತೂರ ಬಾ ಮತ್ತು ಗಾಂಧಿಯಾಗಿ (ನಿ.ಸಿ.ಬಸವಲಿಂಗಯ್ಯ) ಹೀಗೇ.




ಈಗ 23 ವರ್ಷಗಳ ನಂತರ ಮತ್ತೆ ಮುನೀರ್ – ಬಡೇಮಿಯ ರಾಗಿ ಜೊತೆಯಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ . ತಪ್ಪದೆ ನಾಟಕಕ್ಕೆ ಬನ್ನಿ…
- ಆಕೃತಿಕನ್ನಡ ನ್ಯೂಸ್
