ಕಾರೆ ಹಣ್ಣಿನ (ಮದನ ಫಲ)ಮಹತ್ವ – ಸುಮನಾ ಮಳಲಗದ್ದೆ 

ಕಾರೆ ಹಣ್ಣಿನ ಮಹತ್ವವನ್ನು ನಾಟಿ ವೈದ್ಯರಾದ ಸುಮನಾ ಮಳಲಗದ್ದೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ….

ಕಾರೆ ಗಿಡವನ್ನು ಯಂತ್ರ ತಂತ್ರಗಳಲ್ಲಿ ಉಪಯೋಗಿಸುತ್ತಾರೆ. ನಮ್ಮಲ್ಲಿ ತುಳಸಿ ಕಾರ್ತಿಕದಲ್ಲಿ ಕಾರೆ ಮತ್ತು ನೆಲ್ಲಿ ಎರಡು ಪೂಜೆಗೆ ಬೇಕೇ ಬೇಕು. ಇದರ ಬೇರು ಎಲೆ, ಕಾಂಡ, ಕಾಯಿ, ಹೂವು ಎಲ್ಲವೂ ಔಷಧೀಯ ಗುಣವನ್ನು ಹೊಂದಿದೆ.

ವಿಶೇಷ ಸೂಚನೆ :

  • ವಸಂತ ಮತ್ತು ಗ್ರೀಷ್ಮ ಋತುವಿನಲ್ಲಿ ಬೀಜವನ್ನು ಸಂಗ್ರಹಿಸಬೇಕು.
  • ಪುಷ್ಯ ಅಶ್ವಿನಿ ಮೃಗಶಿರ ನಕ್ಷತ್ರಗಳು ತುಂಬಾ ಶ್ರೇಷ್ಠ.
  • ಹಳದಿ ಬಣ್ಣದ ಬಲಿತ ಹಣ್ಣನ್ನು ತಂದು ದರ್ಬೆಯಲ್ಲಿ ಸುತ್ತಿ ದೇಶಿ ಸಗಣಿಯನ್ನು ಲೇಪಿಸಿ ಒಣಗಿಸಬೇಕು.
  • ಗೋಮೂತ್ರದಲ್ಲಿ ತೊಳೆದು ಏಳು ದಿನ ಗೋಮೂತ್ರದ ಭಾವನೆ ಕೊಡಬೇಕು.
  • ಭತ್ತದ ರಾಶಿಯಲ್ಲಿ ಯವಕ್ಷಾರ ರಾಶಿಯಲ್ಲಿ ಉದ್ದಿನ ರಾಶಿಯಲ್ಲಿ ಅಕ್ಕಿ ರಾಶಿಯಲ್ಲಿ ಹೆಸರು ರಾಶಿಯಲ್ಲಿ ಹುರುಳಿ ರಾಶಿಯಲ್ಲಿ ಎಂಟು ದಿನ ಪ್ರತ್ಯೇಕವಾಗಿ ಹುದುಗಿಡಬೇಕು.
  • ನಂತರ ಹಣ್ಣಿನ ಬೀಜ ತೆಗೆದು ತುಪ್ಪ, ಮೊಸರು, ಜೇನುತುಪ್ಪ, ಎಳ್ಳು ಇವುಗಳಲ್ಲಿ ಪ್ರತ್ಯೇಕವಾಗಿ ಅರೆಯಬೇಕು ಈಗ ಬೀಜ ಶುದ್ಧೀಕರಣ ಆಗುತ್ತದೆ. ಇಷ್ಟು ರೆಡಿಯಾದ ಬೀಜ ತುಂಬಾ ಒಳ್ಳೆಯ ಔಷಧೀಯ ಗುಣ ಉಳ್ಳದ್ದಾಗುತ್ತದೆ.

ಸಾಮಾನ್ಯರ ಸುಲಭ ಔಷಧಿಗಳು :

1) ಎಳೆಯ ಕಾರೆಕಾಯನ್ನು ಅರೆದು ಹಚ್ಚುವುದರಿಂದ ಬಾವು ಗುಣವಾಗುತ್ತದೆ.

2) ಕಾಯಿಯನ್ನು ನೀರಿನಲ್ಲಿ ಅರೆದು ಹೊಕ್ಕಳಿನ ಸುತ್ತ ಹಚ್ಚುವುದರಿಂದ ಹೊಟ್ಟೆ ಶೂಲೆ ಗುಣವಾಗುತ್ತದೆ.

3) ಕಾಲು ಚಮಚ ಕಾಯಿಯ ಒಳಗಿನ ತಿರುಳನ್ನು ತೆಗೆದು ನೀರಿನಲ್ಲಿ ಕದಡಿ ಕುಡಿಸುವುದರಿಂದ 10 ನಿಮಿಷದಲ್ಲಿ ಕಫ ವಾಂತಿಯಾಗುತ್ತದೆ.

4) ಕಾರೆಕಾಯಿ ಅಥವಾ ಎಲೆಯ ಕಷಾಯದಲ್ಲಿ ಗಾಯ ತೊಳೆಯುವುದರಿಂದ ಗಾಯ ಬೇಗನೆ ಮಾಯುತ್ತದೆ.

5) ವಿಷಪ್ರಾಶನ ಮಾಡಿದ ವ್ಯಕ್ತಿಗೆ ವಾಂತಿ ಮಾಡಲು ಉಪಯೋಗಿಸುತ್ತಾರೆ.

6) ಚಿಟಿಕೆಯಷ್ಟು ಕಾಯಿಯ ಚೂರ್ಣವನ್ನು ರುಚಿಗೆ ಕೆಂಪು ಕಲ್ಲು ಸಕ್ಕರೆ ಹಾಕಿ ದೇಸಿ ಹಸುವಿನ ಹಾಲಿನಲ್ಲಿ ಅರೆದು ಸೂರ್ಯ ಉದಯಕ್ಕೆ ಮುನ್ನ ಮೂಗಿನಲ್ಲಿ ನಶ್ಯ ತೆಗೆದುಕೊಳ್ಳುವುದರಿಂದ ಸೂರ್ಯ ವರ್ತ ಅಥವಾ ಅರೆದಲೆ ಶೂಲೆ ಗುಣವಾಗುತ್ತದೆ.

7) ಕಾಯಿಯನ್ನು ತಿರುಳು ಬೀಜ ಸಹಿತ ಒಣಗಿಸಿ ಪುಡಿಮಾಡಿ ಸೋಪಿನಂತೆ ತಲೆಗೆ ಮತ್ತು ಸ್ನಾನಕ್ಕೆ ಉಪಯೋಗಿಸಬಹುದು. ಚರ್ಮರೋಗಕ್ಕೆ ತುಂಬಾ ಒಳ್ಳೆಯದು.


  •  ಸುಮನಾ ಮಳಲಗದ್ದೆ – ನಾಟಿ ವೈದ್ಯರು 

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW