ಸಾಹಿತ್ಯಾಸಕ್ತರೆ ” ಸ್ನೇಹಾ ಬುಕ್ ಹೌಸ್” ನವರು ಪ್ರಕಟಿಸಿರುವ “ಪಲ್ಲಟ” ಕಾದಂಬರಿಯು ಫೆಬ್ರವರಿ ೨೬ ರಂದು ಬಿಡುಗಡೆಯಾಗಲಿದ್ದು, ಕಾರ್ಯಕ್ರಮದ ಆಹ್ವಾನ ಪತ್ರ ಕೆಳಗಿನಂತೆ ಇದೆ, ದಯವಿಟ್ಟು ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಬೇಕಾಗಿ ವಿನಂತಿ…
ಮೂಲತಃ “ಭಾರತೀಯ ಸ್ಟೇಟ್ ಬ್ಯಾಂಕ್ ಕನ್ನಡ ಸಂಘಗಳ ಸಮನ್ವಯ ಸಮಿತಿ” ಯ ಕ್ರಿಯಾಶೀಲರಿಂದ ಆರಂಭವಾದ ಸಮನ್ವಯ ಸಮಿತಿ ಕನ್ನಡವೇ ಸತ್ಯ ವೇದಿಕೆಯು, ಇಂದು ಸಮಾಜದ ಎಲ್ಲಾ ಸ್ತರಗಳ ಕನ್ನಡಪರ, ಕ್ರಿಯಾಶೀಲ ಸಾಹಿತಿಗಳಿಂದ, ಸಾಹಿತ್ಯಸಕ್ತರಿಂದ ಕೂಡಿದ ವೇದಿಕೆಯಾಗಿದೆ. ನಮ್ಮಲ್ಲಿ ಈಗ ಹಿರಿ, ಕಿರಿಯ ಸಾಹಿತಿಗಳಿದ್ದಾರೆ. ಪ್ರಸಿದ್ದರಿದ್ದಾರೆ. ಕಲಿಯುವವರು ಕಲಿಸುವವರೂ ಹಾಗೂ ಸಹೃದಯರು ಇದ್ದಾರೆ.
೧೯೯೯ ರಿಂದ ಪ್ರತಿ ತಿಂಗಳ ಸಾಹಿತ್ಯ ದಾಸೋಹಗಳು,(ಇಲ್ಲಿಯವರೆಗೆ ೨೦೯), ಕೊರೊನ ಕಾಲದಲ್ಲಿ ನೋಡಿಯೋ ವೇದಿಕೆಯ ಮೂಲಕ ದಾಸೋಹ ಮತ್ತು ಇನ್ನಿತರ ಸಾಹಿತ್ಯ ಕಾರ್ಯಕ್ರಮಗಳು ಹಾಗೂ ೨೦೧೪ ರಿಂದ ವಾಟ್ಸಪ್ ಗುಂಪಿನ ಮೂಲಕ ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಿದೆ. ಇದು ನಿತ್ಯ ಕನ್ನಡ ಕಮ್ಮಟ. ಇಲ್ಲಿಯವರೆಗೆ ಐದು ಸಾಹಿತ್ಯ ಸಂಚಿಕೆಗಳನ್ನು , ೮೯ ಕವಿಗಳ “ಸರಪಳಿ ಕವನ ಸಂಕಲನವನ್ನು ಪ್ರಕಟಿಸಿದೆ. “ಎಚ್ಚೆಸ್ಕೆ ನೂರು” ಕಾರ್ಯಕ್ರಮದಲ್ಲಿ ಒಟ್ಟಿಗೆ ೫೫ ಲೇಖಕರ ೫೫ ಕೃತಿಗಳು ಅಂತರ್ಜಾಲದಲ್ಲಿ ಬಿಡುಗಡೆಯಾಯಿತು. ವೇದಿಕೆಯ ಚಟುವಟಿಕೆಗಳಿಂದ ಸ್ಪೂರ್ತಿ ಪಡೆದು ವೇದಿಕೆಯ ಸದಸ್ಯರು ಕವನ, ಕಥಾ, ಪ್ರಬಂಧ ಸಂಕಲನಗಳನ್ನು ಬಿಡುಗಡೆ ಮಾಡಿದ್ದಾರೆ. ನಾಡಿನ ಪ್ರಸಿದ್ದ ಪತ್ರಿಕೆಗಳಲ್ಲಿ ಬರೆಯುತ್ತಿದ್ದಾರೆ. ಪ್ರಯೋಗಶೀಲರಾಗಿದ್ದಾರೆ.
೨೦೨೧-೨೨ ರಲ್ಲಿ ಅಪರೂಪವಾದ, ವಿಭಿನ್ನವಾದ ಪ್ರಯೋಗ ‘ಖೋ ಕಾದಂಬರಿ’ ಯನ್ನು ಪ್ರಯತ್ನಿಸಿದೆವು. ಸಂಚಾಲಕ ಸಮಿತಿಯ ಸಹಕಾರದಿಂದ ಒಂದು ಕಥಾ ಹಂದರ ರೂಪಿಸಿಕೊಂಡು, ೨೭ ಲೇಖಕರು, ೨೭ ಅಧ್ಯಾಯಗಳಲ್ಲಿ ಖೋ ಕಾದಂಬರಿ “ಪಲ್ಲಟ” ವನ್ನು ರಚಿಸಿದ್ದಾರೆ.
ಸಮನ್ವಯ ಸಮಿತಿ ಕನ್ನಡವೇ ಸತ್ಯ
ಸಂಚಾಲಕ ಸಮಿತಿಯ ಪರವಾಗಿ
ಬೆಂಶ್ರೀ ರವೀಂದ್ರ/೨೩-೦೨-೨೦೨೩.
- ಆಕೃತಿ ನ್ಯೂಸ್