ಕವಿಯತ್ರಿ ರಶ್ಮಿ ಪ್ರಸಾದ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ….
ಬದುಕಿಗೆ ಹಾಸುಹೊದ್ದ ಬವಣೆ
ನಿಲ್ಲಿಸದೆ ಸಾಗಿಹುದು ನಿತ್ಯದಬೇನೆ
ಮೂರುದಿನದ ಬಾಳಿನ ಪರಿಪಾಠ
ಎದುರಿಸಲೇಬೇಕು ನಿಂತು ಹೋರಾಟ.!!
ಮುಗಿಯಿತೆಂದರೆ ಒಂದು ಯುದ್ಧ
ಹಿಂದೆಯೇ ಮತ್ತೊಂದು ಯುದ್ಧಸಿದ್ದ
ಆಗಿರಲೇಬೇಕು ಇಲ್ಲಿ ಸರ್ವಸನ್ನದ್ಧ
ಸಿದ್ಧವಿರಲೇಬೇಕು ನಾವು ಸದಾಬದ್ದ.!!
ಮೊಳಗುತಿರಲು ರಣಕಹಳೆ
ನಿಲ್ಲದು ಕಾಲನೊಂದಿಗೆ ಕಾಲನಡೆ
ಬಗೆಹರಿದಷ್ಟೂ ಬಾಳಿನ ಬೀಜಬುತ್ತಿ
ತೆರೆದುಕೊಳ್ವುದು ಸಮಸ್ಯೆಗಳ ತತ್ತಿ.!!
ತಂದುಕೊಟ್ಟ ಗೆಲುವುಗಳ ಸಂಭ್ರಮ
ಕಬಳಿಸುವುದು ಸೋಲಿನ ಸಂಕಟಗಳು
ಕ್ಷಣಕ್ಷಣವೂ ಕಾಡುತಿಹುದು ಆಂತರ್ಯ
ಒಳಗೊಳಗೆ ದಹಿಸುತಿಹುದು ಮಾತ್ಸರ್ಯ.!!
ದೇಹವೆಂಬ ರಥವು ಚಲಿಸುತಿರಲು
ಅಂತರಾತ್ಮವು ಸಾರಥ್ಯ ವಹಿಸಿರಲು
ಆತ್ಮಸಾಕ್ಷಿಯ ದೀವಿಗೆಯ ಎದುರು
ಸೋಲದೆಂದೂ ಅಂತರ್ದನಿಯ ಬಾಳಹಾದಿ.!!
- ರಶ್ಮಿ ಪ್ರಸಾದ್
