ಕವಿಯತ್ರಿ ಅಮೃತ ಎಂ.ಡಿ ಅವರ ‘#ಕಾಡುವ_ಭೀತಿ‘ ಗಜಲ್ ಓದುಗರಿಗಾಗಿ, ಓದಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ…
ಕಾಡುವ ಭೀತಿಯೊಂದು ಬೆಚ್ಚಿಸುತ್ತಿದೆ #ಗಾಲಿಬ್
ಸುಳಿವು ಇಲ್ಲದ ಸುಳಿಯೊಳಗೆ ನಡುಗಿದೆ ಗಾಲಿಬ್
ಸುತ್ತಣ ದಾರಿಯು ಸುಂಕಕ್ಕಾಗಿ ತೆರೆಯದೆ ಮುಚ್ಚಿದೆ
ನಸೀಬು ಕೆತ್ತಿ ಎತ್ತ ನೋಡಿದರು ದಿಗಂತವಿದೆ ಗಾಲಿಬ್
ಅನಂತದೆಡೆ ಧಾವಿಸುವ ಆಸೆ ಹುಚ್ಚಾಟವೆನಿಸಿದೆ
ಕಾರಿರುಳ ದರ್ಶನ ಕೂಪದಲ್ಲೇ ಬೇಯಿಸಿದೆ ಗಾಲಿಬ್
ತಥ್ಯ ಮಿಥ್ಯಗಳ ಸೆಣಿಸಾಟದಲ್ಲಿ ಬಾಳು ಮರೀಚಿಕೆ
ದಿಮ್ಮಗಿರುವ ಮನಸ್ಸಿದ್ದರು ಅವಕಾಶ ಎಲ್ಲಿದೆ ಗಾಲಿಬ್
#ಶಬರಿಯ ಜೀವಮಾನವು ಉತ್ತರಕ್ಕಾಗಿ ಅಲೆಯುತ್ತಿದೆ
ಪ್ರಶ್ನೆಗಳ ತಾಣವೇ ಎದುರು ನಿಂತು ನರ್ತಿಸಿದೆ ಗಾಲಿಬ್
- ಅಮೃತ ಎಂ. ಡಿ (ಗಣಿತ ಶಾಸ್ತ್ರ ವಿಭಾಗ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ, ‘ಭಾವನೆಗಳಿಲ್ಲದವಳ ತೀರ ಯಾನ’ ಗಜಲ್ ಸಂಕಲವನ್ನು ಹೊರಗೆ ತಂದಿದ್ದು, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಅವರಿಂದ ಧನ ಸಹಾಯ ಪಡೆದ ಕೃತಿಯಾಗಿದೆ ) ಮಂಡ್ಯ.
