‘ಮತ್ತೆ ಎಂದೂ ಮಲಗಲೇಬಾರದೆನ್ನುವಷ್ಟು ಕನಸು ಕೆಟ್ಟದಾಗಿತ್ತು’… ಅನಾಮಿಕ 💯 ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ, ತಪ್ಪದೆ ಓದಿ…
ಸಧ್ಯ, ಅರ್ಧದಲ್ಲೇ ಎಚ್ಚರವಾದದ್ದು
ಒಳ್ಳೇದಾಯಿತು,
ಮತ್ತೆ ಎಂದೂ ಮಲಗಲೇಬಾರದೆನ್ನುವಷ್ಟು
ಕನಸು ಕೆಟ್ಟದಾಗಿತ್ತು,
ದೇಹ ಶ್ರಮಪಟ್ಟು ಆಯಾಸಗೊಂಡು ಬದುಕು
ಸಾಕೆನಿಸಿದ ಹಗಲಿಗಿಂತ
ನನ್ನವರ ಕಳೆದುಕೊಂಡ ಈ ಮೌನವಾದ ರಾತ್ರಿ
ಅತೀ ಭಯಂಕರ,
ರಾತ್ರಿ,
ಹೊರಗಿನ ತೋರಿಕೆಗಷ್ಟೇ ನಿಶ್ಶಬ್ದ, ನಿಶ್ಚಿಂತೆ…
ಆದರೆ ಒಳಗೊಳಗೆ,
ನೊಂದು ಬೆಂದ ಮನಗಳು
ಯಾರಿಗೂ ತಿಳಿಯದ ರೀತಿಯಲಿ ಗೋಳಿಡುವ ಸ್ಮಶಾನ,
ಪಡೆದುದಕ್ಕಿಂತ
ಕಳೆದುಕೊಂಡದ್ದೇ ಹೆಚ್ಚು,
ಹೀಗೆ ಕಿತ್ತು ನೋಡುವೆನೆಂದು
ಆಗಾಗ ಭಯಪಡಿಸುವುದು
ದೇವನೆನಿಸಿಕೊಂಡವನ ಗುಣವಾಗದ ಹುಚ್ಚು.
- ಅನಾಮಿಕ 💯