‘ಕನ್ನಡ’ ಕವನ – ಚನ್ನಕೇಶವ ಜಿ ಲಾಳನಕಟ್ಟೆ

‘ಕನ್ನಡದೊಳಗಿದೆ ಕನ್ನಡಿ ಬಿಂಬವೆ,  ಭಾಷೆಯ ಭವ್ಯತೆ ತಂಪಿನಲಿ’…ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಅರಳಿದ ಕನ್ನಡದ ಕಂಪು, ತಪ್ಪದೆ ಓದಿ…

ಒಂದೊಂದಕ್ಕರವಕ್ಕರೆಯಿಂದಲೆ
ಬಿಕ್ಕಳಿಸದೆನಾನಾಡುವೆನು
ಅಂದದೊಳಂದವನೆಂದೆಂದೆಂದಿಗು
ಕನ್ನಡಪದದೊಳಗಾಡುವೆನು

ಹೊನ್ನುಡಿಯಂತಿಹ ಚೆನ್ನುಡಿ ಚೆನ್ನವು
ಗಂಧವೆ ಬಿರಿದಿಹ ಕಂಪಿನಲಿ
ಕನ್ನಡದೊಳಗಿದೆ ಕನ್ನಡಿ ಬಿಂಬವೆ
ಭಾಷೆಯ ಭವ್ಯತೆ ತಂಪಿನಲಿ

ಕವಿಕುಲ ತಿಲಕರಿಗೊಲಿಯುತಲುಲಿದಿಹ
ಕೋಗಿಲೆ ಕೂಗಿದ ಸಡಗರವು
ರವಿತಾನೆಲ್ಲವ ಕಾಣದುದೆಲ್ಲವ
ಕವಿತಾನಡಗಿಸಲುತ್ಸುಕವು

ಹೃನ್ಮನದೊಳಗಡೆ ಸವಿಜೇನುಣಿಸುತ
ಪದಪದ ಕಟ್ಟುವ ಕಾವ್ಯವಿದು
ಪದಲಾಲಿತ್ಯದಿ ಲಯದೊಳಗೂಡುತ
ಕನ್ನಡವೆಂದರೆ ಭವ್ಯವಿದು

ಬಿಸಿಲಿನ ಬೇಗೆಗೆ ದಾಹವನೀಗಿಸೆ
ಹನಿಹನಿ ನೀರಿನ ಬುಗ್ಗೆಯಿದು
ಖಗಗಳಿಗಂತಲೆ ತರುವಿನ ರೂಪದಿ
ನೆಳಲನು ನೀಡುವ ಗೂಡುಯಿದು


  • ಚನ್ನಕೇಶವ ಜಿ ಲಾಳನಕಟ್ಟೆ ,ಕವಿಗಳು, ಲೇಖಕರು, ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading