‘ಕನ್ನಡ ಸಾಹಿತ್ಯದಲ್ಲಿ ದ್ರೌಪದಿ’ ಪಿ ಹೆಚ್ ಡಿ ಮಹಾಪ್ರಬಂಧ

ಹಿರಿಯ ಸಾಹಿತಿಗಳಾದ ಡಾ ಎಸ್ ವಿ ಪ್ರಭಾವತಿ ಅವರ ‘ಕನ್ನಡ ಸಾಹಿತ್ಯದಲ್ಲಿ ದ್ರೌಪದಿ’ ಪಿ ಹೆಚ್ ಡಿ ಮಹಾಪ್ರಬಂಧದ ಲೇಖನವನ್ನು ತಪ್ಪದೆ ಮುಂದೆ ಓದಿ….

ಪುಸ್ತಕ : ಕನ್ನಡ ಸಾಹಿತ್ಯದಲ್ಲಿ ದ್ರೌಪದಿ
ಪ್ರಕಾರ :
(ಪಿ ಹೆಚ್ ಡಿ ಮಹಾಪ್ರಬಂಧ)
ಲೇಖಕಿ : ಡಾ ಎಸ್ ವಿ ಪ್ರಭಾವತಿ
ಪುಟ : ೧೪೦
ಬೆಲೆ : ೧೬೦
ನಾಲ್ಕನೇ ಮುದ್ರಣ : ೨೦೨೨

ಹಳೆಯದು – ಕಳೆದುಕೊಂಡ ನನ್ನ ಗೋಡೆಯಲ್ಲಿ ಬರಲೆಂದು ಮತ್ತೆ ಹಾಕುತ್ತಿರುವೆ. ನಾನು ಪಿಹೆಚ್ ಡಿಗೆ ರಿಜಿಸ್ಟರ್ ಮಾಡಿಸಿದ್ದು ೧೯೭೬ ಅದು ಟೈಪ್ ಆಗಿದ್ದು ೧೯೮೨. ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಗೆ ಸ್ವೀಕರಿಸಿದ್ದು ೧೯೮೯. ಪ್ರಕಟವಾದದ್ದು ೧೯೯೨. ಇಷ್ಟು ದೀರ್ಘಯಾತ್ರೆಯ ಇದರ ನಾಲ್ಕನೇ ಮುದ್ರಣ ಈಗ ಹೊರಬಂದಿದೆ. ನಮ್ಮ ಮುಖಪುಟದ ವಿಶೇಷ ವ್ಯಕ್ತಿ ಅಣಕು ರಾಮನಾಥ ಇದನ್ನು ಪ್ರಕಟಿಸಿ ಬೆನ್ನುಡಿಯನ್ನೂ ಬರೆದಿದ್ದಾರೆ.

ನಾನು ಇದನ್ನು ಪ್ರಾರಂಭಿಸಿದ ಕಾಲಕ್ಕೆ ಮಾಡುವವರೂ ಇರಲಿಲ್ಲ. ಕೇಳುವವರೂ ಇರಲಿಲ್ಲ ಮಾಡುವುದರಿಂದ ಪ್ರಯೋಜನ ವೂ ಇರಲಿಲ್ಲ. ಆದರೆ ನಾನು ಓದುಗೂಳಿಯಾದುದರಿಂದ ಯಾವುದೇ ಕೆಲಸ ವಾಗಲೀ ಮಾಡದೇ ಬಿಡುತ್ತಿರಲಿಲ್ಲ . ಹೀಗಿದ್ದೂ ಇಷ್ಟೊಂದು ತಡವಾಯಿತೆಂದರೆ ಅದಕ್ಕೆ ವ್ಯವಹಾರ ಜ್ಞಾನ ದ ಕೊರತೆಯೇ ಕಾರಣ ‘ವಕ್ರತೆ ಸಹ ಬೇಕು ಸರಳತೆ ಜೊತೆಗೆ ಮಾಡಿದೆವಾದರೆ ಬೆರಳನು ನೆಟ್ಟಗೆ ಹಿಡಿಯುವುದೇನನು ಹೇಗೆ’ ಎಂದು ಎಸ್ ವಿ ಪರಮೇಶ್ವರ ಭಟ್ಟರು ಬರೆಯುತ್ತಾರೆ ತಮ್ಮ ಇಂದ್ರಚಾಪ ಕವಿತೆಯಲ್ಲಿ .

ಪರಿಷತ್ತು ಕೇವಲ ೫೦೦ ಪ್ರತಿಗಳನ್ನು ಮುದ್ರಿಸಿ ಅವು ಬಹು ಬೇಗ ತೀರಿಹೋದರೂ ಎರಡನೇ ಮೂರನೇ ಮುದ್ರಣಗಳನ್ನು ಕಾಣುವಾಗಲೂ ತುಂಬಾ ತಡವಾಗಿತ್ತು. ಈ ಮುದ್ರಣವೂ ತಡವಾಗಿಯೇ ಬಂದಿದೆ. ಬಹು ಮಂದಿಗೆ ನಾನು ಇದರ ಜೆರಾಕ್ಸ್ ಹಾಳೆಗಳನ್ನು ಕಳಿಸಿದ್ದೇ ಹೆಚ್ಚು.

ಮಹಾಭಾರತದ ದ್ರೌಪದಿ ತುಂಬಾ ಪ್ರಭಾವಶಾಲಿ ವ್ಯಕ್ತಿತ್ವ . ಸಂಸ್ಕೃತ ನಾಟಕಕಾರರು ಮಾಡಿಕೊಂಡ ಬದಲಾವಣೆ ಗಳೂ ಪಂಪ ರನ್ನ ಕುಮಾರವ್ಯಾಸರು ಮಾಡಿಕೊಂಡ ಬದಲಾವಣೆಗಳೂ ಅವಳ ವ್ಯಕ್ತಿತ್ವ ವನ್ನು ಹೊಳೆದು ತೋರಿಸಿವೆ . ಜೈನ ಭಾರತಪರಂಪರೆಯ ಕನ್ನಡ ಕವಿಗಳು ನೀಡುವ ಚಿತ್ರವೇ ಬೇರೊಂದು ಬಗೆ . ಈ ಹಿನ್ನೆಲೆಯಲ್ಲಿ ಆಧುನಿಕ ಕನ್ನಡ ಸಾಹಿತ್ಯಕ್ಕೆ ಬಂದರೆ ದೃಶ್ಯ ಮಾಧ್ಯಮಗಳೂ ಸೇರಿದಂತೆ ಅಪಾರವಾದ ಕೃತಿಗಳ ರಾಶಿಯೇ ಇದೆ. ಆ ಕಾಲಕ್ಕೆ ತಕ್ಕಂತೆ (೧೯೯೨) ನಾನು ಆಧುನಿಕ ಕೃತಿಗಳ ವಿಮರ್ಶೆ ಮಾಡಿದ್ದೆ . ಅದರಲ್ಲಿ ಸಿಂಹ ಪಾಲನ್ನು ಪರ್ವ ತೆಗೆದು ಕೊಂಡಿತ್ತು .

ಹೆಚ್ಚಿನ ಬದಲಾವಣೆಯಿಲ್ಲದೆ ಇದು ಮೂವತ್ತು ವರ್ಷಗಳ ನಂತರ ನಾಲ್ಕನೇ ಮುದ್ರಣ ಕಾಣುತ್ತಿದೆ.


  • ಡಾ ಎಸ್ ವಿ ಪ್ರಭಾವತಿ – ಹಿರಿಯ ಸಾಹಿತಿಗಳು, ಲೇಖಕರು,

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW