ನಲ್ಲೆಯ ಕಾಣುವ ಕಾತುರತೆಯಲ್ಲಿರುವ ಪ್ರೇಮಿ, ಪ್ರೇಮಕವಿತೆಯನ್ನು ಕವಯತ್ರಿ ರೇಶ್ಮಾಗುಳೇದಗುಡ್ಡಾಕರ್ ಸುಂದರವಾಗಿ ವರ್ಣಿಸಿದ್ದಾರೆ. ಮುಂದೆ ಓದಿ…
ಹೇ…ಬೊಗಸೆ ಕಂಗಳ ಚೆಲುವೆ
ನಿನ್ನ ನೆನೆದು ನಾ …ಅಳುವೆ
ಕ್ಷಣವದು ಯುಗವಾಗಿ ಕಾಡಿದಾಗ
ಮಿಂಚೊಂದು ಮನದಲಿ ಹೊಕ್ಕಾಗ
ಕಾತರವೂ ….ತಳಮಳವೂ ….
ತಿಳಿಯದಾಗಿದೆ ಈಗ
ಮೋಹಕ ನೋಟಕೆ ಸರೆಯಾದ
ಈ ಹೃದಯ ಕೇಳದು ಎಂದು
ನಿನ್ನಿಂದ ಬಿಡುಗಡೆಯಾ…..
ಮತ್ತೆ ಮತ್ತೆ ನಿನ್ನ
ಕಂಗಳಲಿ ಬಂಧಿಸುವೆಯಾ…..
ಒಲವಿನ ಉಯ್ಯಾಲೆ ಯಲಿ
ತೂಗುತ
ನನ್ನ ಎದೆಯಂಗಳಕೆ ಬಾ …
ನಲ್ಲೆ ಬಳುಕುತ
ಯಾವುದೂ ಸೆಳೆತ ಈ
ಮನದಲಿ
ನಿನ್ನ ಕಾಣುವ ತವಕ ಈ
ಕಣ್ಣಲಿ …..
- ರೇಶ್ಮಾಗುಳೇದಗುಡ್ಡಾಕರ್