ಬೆಂಗಳೂರಿನಲ್ಲೊಂದು Bamboo house – ಮಾಲತಿ ಗಣೇಶ್ ಭಟ್



ಪರಿಸರ ಪ್ರೇಮಿ ಗಣೇಶ್ ಭಟ್ ದಂಪತಿಗಳು ಬೆಂಗಳೂರಿನ ತಮ್ಮ ನಿವಾಸದಲ್ಲಿ ಪರಿಸರ ಸ್ನೇಹಿ ಬಿದಿರು,ಬಾಂಬು ಬಳಸಿ ಮನೆಯ ಒಳಾಂಗಣ ವಿನ್ಯಾಸ ಮಾಡಿಸಿದ್ದಾರೆ. ಅದರ ಬಳಕೆ, ಅದರ ಜೊತೆಗಿನ ದಿನನಿತ್ಯದ ಅನುಭವ ಎಲ್ಲವನ್ನು ಮಾಲತಿ ಗಣೇಶ್ ಭಟ್ ಅವರು ಆಕೃತಿಕನ್ನಡ ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ …

ಈ ಬಿದಿರು ಏನಾದ್ರೂ ನಮ್ಮನೆಗೆ ಬಂದ್ರೆ ” ಮನುಷ್ಯ ಮನಸ್ಸು ಮಾಡಿದ್ರೆ ಏನೇನೆಲ್ಲ ಆಗಬಹುದು.!!! ” ಅಂತ ಆಶ್ಚರ್ಯಚಕಿತವಾಗಿ ನಿಲ್ಲುತ್ತೇನೋ..

“Bamboo house “.. ನಮ್ಮನೆಯ ಅನ್ವರ್ಥಕ ನಾಮ.. ಬಿದಿರು ಏನೇನಾಗಲಿಕ್ಕೆ ಬಯಸಿತ್ತೋ ಅದರ ಶಕ್ತಿಗೆ ಮೀರಿ ನಾವು ಬಿದಿರನ್ನು ನಮ್ಮ ಮನೆಯಲ್ಲಿ ದುಡಿಸಿಕೊಂಡಿದ್ದೇವೆ. ಮಾಡು ಮನಸ್ಸು, ಹೇಳಕೊಡು ಜನ, ಇದ್ದಾಗ ಏನೂ ಆಗಬಹುದು… ಸತ್ಯ.

ಹನ್ನೆರಡು ವರ್ಷಗಳ ಹಿಂದೆ ಇಲ್ಲೇ ಬೆಂಗಳೂರಿನಲ್ಲಿ ನಡೆದ ಒಂದು exhibition ನಲ್ಲಿ ಈ ಅಸ್ಸಾಂನ ಬಿದಿರು ಪೀಠೋಪಕರಣಗಳು ನಮ್ಮ ಕಣ್ಣಿಗೆ ಬಿತ್ತು. ನೋಡಲಿಕ್ಕೆ ಸೊಗಸಾಗಿ ಕಂಡ ಖುರ್ಚಿಗಳನ್ನು ಖರೀದಿಸಿಯೇಬಿಟ್ಟೆವು. ಈ bamboo person ‘ರೆಹಮಾನ್ ಭಾಯ್’ ನಾವು ಕೊಟ್ಟ ದುಡ್ಡನ್ನು ತಗೊಂಡು ತನ್ನ phone number ಕೊಡುತ್ತಾ ಹೇಳಿದ “ಈ chair ಗಳಿಗೆ ಎರಡು ವರ್ಷಕ್ಕೊಮ್ಮೆ ಆದ್ರೂ varnish ಮಾಡಿಸ್ಬೇಕು. ನಾನೇ ಬರ್ತೇನೆ, call ಮಾಡಿ ಅಂದ. ಆಯ್ತು ಅಂತ number ತಗೊಂಡು ಬಂದ್ವಿ. ಅದಾಗಿ ಒಂದು ನಾಲ್ಕು ವರ್ಷಕ್ಕೆ ಒಮ್ಮೆ ಅವನನ್ನೇ ಕರೆದು ಅದಕ್ಕೆ ಬೇಕಾದ ಉಪಚಾರ ಮಾಡ್ಸಿದ್ವಿ, ಅಷ್ಟೇ.. ಆಮೇಲೆ ಈ bamboo ಫರ್ನಿಚರ್ ಏನೂ ಆಗಿಲ್ಲ, ನಾವು ರೆಹಮಾನ್ ಭಾಯ್ ನ ಮರ್ತೇ ಹೋದ್ವಿ. ಹಾಗೇ ಈಗೊಂದು ಮೂರು ವರ್ಷಗಳ ಹಿಂದೆ ಬೆಂಗಳೂರಲ್ಲಿ ಒಂದು ಫ್ಲಾಟ್ ತಗೊಂಡೇ ಬಿಡೋಣ ಅಂತ ಚಟ ಬಂದು.. ತಗೋಳ್ಳೋ plan ಮಾಡಿದ್ವಿ.

ಅದೇನೋ ನಾವು ಈ Mr. &  Mrs Bhat ಇಬ್ರಿಗೂ ಬೆಂಗಳೂರಲ್ಲಿ ಸ್ವಂತ ಮನೆ ಅಥವಾ ಜಾಗ ತಗೋಳ್ಳೋ plan ದೂರದೂರದಿಂದನೂ ಇರ್ಲಿಲ್ಲ. ಕಡೆಗೆ ಕಾಲಾನಂತರದಲ್ಲಿ ಮನೆ ಬಾಡಿಗೆನೇ 20,000ದ ಗಡಿಯಲ್ಲಿ ನಿಂತಾಗ, ಎಲ್ಲಾ ಅನುಕೂಲ, ಅನಾನುಕೂಲಗಳನ್ನು ಪರಿಗಣಿಸಿ ಒಂದು flat ತಗೋಳ್ಳೋಕೆ ಮುಂದಾದ್ವಿ. ಹುಡುಕಾಟ ಶುರು.

 

ಅಯ್ಯೋ ಈ field ಗೆ ಇಳಿದಾಗಲೇ ಗೊತ್ತಾಯ್ತು real estate ಗಳ real ಮೋಸ. ಅಂತೂ ಇಂತೂ ಇದ್ದಿದ್ರಲ್ಲಿ ಕಡಿಮೆ ಮೋಸ ಇರೋ  flat ಖರೀದಿನೂ ಆಯ್ತು. ಆಮೇಲೆ…. ಆಮೇಲೇ ಇರೋದಲ್ವೇ ಇನ್ನೂ ಮಜಾ… Interiors.. ಇದೊಂಥರ real estate ಮೋಸಕ್ಕಿಂತ ದೊಡ್ಡ ಮೋಸ. ಅಪಾರ್ಟ್ಮೆಂಟ್ token advance ಕೊಟ್ಟು book ಮಾಡಾಯ್ತು. ನನ್ನ ಪತಿದೇವರಿಗೆಇದೇ ಸಮಯಕ್ಕೆ ಸರಿಯಾಗಿ ತಿಂಗಳಕಾಲ foreign ತಿರುಗಾಟ(ಕೆಲಸದ ಮೇಲೆ) schedule ಆಯ್ತು.So…ಈ ಮನೆಗೆ makeup(interior designer) ಮಾಡೋವ್ರನ್ನ ಹುಡುಕುವ ಸಂಪೂರ್ಣ ಜವಾಬ್ದಾರಿ ನನ್ನ ಮೇಲೇ ಬಿತ್ತು. ಸರಿ, MG road ಹತ್ರ ಇರೋ Livspace interiors ಇಂದ ಹಿಡಿದು ಕನಕಪುರ ರೋಡ್ ನಲ್ಲಿ ಇರೋ Homelane interiors ವರೆಗೆ ಎಲ್ಲಾ ಕಡೆ ಕಟ್ಟೆ ಪೂಜೆ ಆಯ್ತು. Designs ಎಲ್ಲಾ ನಾನು ನೋಡೋದು, ವ್ಯವಹಾರದ ಮಾತುಕತೆಗಳಿಗೆಲ್ಲ ಯಜಮಾನ್ರಿಗೆ watsapp call ಮಾಡೋದು.ತಿಂಗಳುಗಟ್ಟಲೆ ಇದೇ ಆಯ್ತು. Plywood ಮೇಲೆ ಹೇಸಿಗೆ ಹುಟ್ಟೋ ಅಷ್ಟು interior design ಮಾಡೋವ್ರನ್ನ ನೋಡಿದ್ದಾಯ್ತು. ಯಾಕೋ ಈ plywood ಒಂಥರಾ ಯಾಂತ್ರಿಕ ಬದುಕನ್ನು ಎತ್ತಿ ಹಿಡಿದಂತೆ ಅನ್ನಿಸಿಬಿಟ್ಟಿತು. ಎಲ್ಲಾ ಹುಡುಕಾಟದ ಮಧ್ಯೆ ಸಿಕ್ಕಿದ್ದು Godrej interiors…ಈ godrej ನವರು steel mould ಇಂದ kitchen cabinet, wardrobe ಎಲ್ಲಾ ಮಾಡೋದು. ಇಲ್ಲಿಗೆ ಒಂದು visit ನಾನು ಮಾಡಿಕೊಂಡು ಬಂದ ನಂತರ ವಿದೇಶದಿಂದ ಯಜಮಾನ್ರು ವಾಪಸ್ಸಾದರು. ಇನ್ನು ಮತ್ತೆ ಹುಡುಕಿ ಪ್ರಯೋಜನ ಇಲ್ಲ. ಎಲ್ಲಾ ಒಂದೇ, ಇದ್ದಿದ್ರಲ್ಲಿ Godrej ಸ್ವಲ್ಪ ಬಾಳಿಕೆನೂ ಇದೆ ಅಂತ ತಿಳಿದು ಅಡಿಗೆ ಮನೆ, wardrobe ಎಲ್ಲಾ ಅವ್ರಿಗೆ order ಕೊಟ್ಟು, ಅವ್ರನ್ನ ಮನೆಗೆ ಕರೆಸಿ measurement ಗಳನ್ನೆಲ್ಲ ತಗೊಂಡಿದ್ದಾಯ್ತು. ಇವೆಲ್ಲದರ ನಡುವೆ ನಮ್ಮ ರೆಹಮಾನ್ ಭಾಯ್ ಗೆ ಹಲವು ಸಲ ಫೋನಾಯಿಸಿದ್ದಾಗಿತ್ತು. Cot ಸಲುವಾಗಿ.. ಅದೆಲ್ಲೋ ನೋಡಿದ್ದೆ google ನಲ್ಲಿ ಅಸ್ಸಾಂ bamboo cot… ತುಂಬಾ ಹಿಡಿಸಿತ್ತು. ಎಷ್ಟೇ ಫೋನಾಯಿಸಿದ್ರೂ, phone connect ಆಗದ ಕಾರಣ, ತುಂಬಾ ವರ್ಷವಾಯ್ತಲ್ಲ ನಂಬರ್ ಬೇರೆ ಆಗಿರಬೇಕು ಅಂತ ನಿರಾಶರಾಗಿದ್ವಿ. ಸರಿ ಅಂತ cot, study table ಹೀಗೇ ಉಳಿದ ವಸ್ತುಗಳಿಗಾಗಿ showroom ತಿರುಗಾಟ ಶುರುವಾಯ್ತು.

 

This slideshow requires JavaScript.

Godrej ಗೆ kitchen, wardrobe order ಕೊಡೋ final ಹಂತದಲ್ಲಿ ಬಂತಲ್ಲಾ ರೆಹಮಾನ್ ಭಾಯ್ ದು ಫೋನು .. Sir, ಅಸ್ಸಾಂ ಹೋಗಿದ್ದೆ, ಈಗ ಬಂದಿದ್ದೀನಿ, ಯಾರು ನೀವು ಅಂದ. Cot order ಕೊಡಬೇಕಿತ್ತು ಅಂದ್ವಿ. “ಚಲೋ ಸಾಬ್, ಚುಂಚಘಟ್ಟ ದಲ್ಲಿ workshop, cum showroom ಮಾಡಿದೀನಿ, ಅಲ್ಲಿಗೇ ಬನ್ನಿ ಅಂದ. ಆಯ್ತಲ್ಲಾ ಇಬ್ರಿಗೂ ಖುಷಿಯೋ ಖುಷಿ…,ಆವತ್ತೇ ಸಂಜೆ google map ಹಾಕಿದ್ದು ಹೊರಟಿದ್ದೇ. ಅಲ್ಲಿ ಹೋಗಿ ನೋಡಿದ್ರೆ, ಬಿದಿರು ತನ್ನೆಲ್ಲ ಅವತಾರದಲ್ಲೂ ದರ್ಶನ ಕೊಡ್ತಾ ಇತ್ತು. ರೆಹಮಾನ್ ಭಾಯ್ ಕುಳಿತುಕೊಂಡ chair ಇಂದ ಹಿಡಿದು ಅವನ office space ನ ಎಲ್ಲಾ ವಸ್ತುಗಳೂ ಬಂಬೂಮಯ.. ಅಷ್ಟು ವರ್ಷಗಳ ನಂತರ ಸಿಕ್ಕಿದ್ರೂ ಅವನಿಗೆ ನಮ್ಮ ಪರಿಚಯ ಆಯ್ತು. ಅವನಿಗೂ full ಖುಷಿ. ನನ್ನನ್ನ ಹುಡುಕಿಕೊಂಡು ಬಂದಿದ್ದಾರಲ್ಲ ಅಂತ. ಅವನ ಬಿದಿರಿನ ಪೀಠೋಪಕರಣಗಳ ಬಗ್ಗೆ ಸಂಪೂರ್ಣ ವಿವರಣೆ ಕೊಟ್ಟ. ಕೈಯಲ್ಲಿ ಮಾಡುವ ಜೊತೆಗೆ ಈಗ ಮಷೀನ್ ಕೂಡ ಉಪಯೋಗಿಸಿ ಬಿದಿರಿನದೇ board ಮಾಡಿ ಅದರಿಂದ ಬೇರೆ ಬೇರೆ ಆಕಾರ ಕೊಡ್ತೀವಿ ಅಂತ ಅವನ ಆಫೀಸಿನ, ಬಿದಿರಿನ ಹಲವು ಮುಖಗಳ ಪರಿಚಯ ಮಾಡಿದ. ನಾವು ಎಲ್ಲಾ ನೋಡಿ, ನಮ್ಮ ಅವಶ್ಯಕತೆಗಳನ್ನು ವಿವರಿಸ್ತಾ ಇದ್ವಿ, sudden ಆಗಿ ಅವನು offer ಕೊಟ್ಟೇ ಬಿಟ್ಟ. “Saab, sirf cot ಯಾಕೆ? ಪೂರಾ ಘರ್ bamboo ಕಾ ಬನಾ ದೆಂಗೆ ” ಅಂದ.. ಹಾಂ… ಇಬ್ಬರೂ ಮುಖ ಮುಖ ನೋಡ್ಕೊಂಡು ಏನೂ ನಿರ್ಧಾರ ಮಾಡದೇ ವಾಪಾಸ್ ಬಂದ್ವಿ. ಇಲ್ಲಿ Godrej ಇಂದ next ದಿನ ಬೆಳಿಗ್ಗೆ ಫೋನು, “Sir, order form ತುಂಬಿ token advance ಮಾಡಿದ್ರೆ ಕೆಲಸ ಶುರು ಮಾಡಬಹುದು, ಬನ್ನಿ office ಗೆ ಅಂತ.. ರೆಹಮಾನ್ ಗೆ call ಮಾಡಿದ್ವಿ, ಪೂರಾ ಮನೆ ಏನೂ ಬೇಡ, cot ಅಷ್ಟೇ ಸಾಕು, ಅಂದ್ವಿ. ಅವನು ಬಿಡಲಿಕ್ಕೆ ಇಲ್ಲಾ.. ಏಕ್ ಬಾರ್ ಬನ್ನಿ office ಗೆ ಮಾತಾಡೋಣ ಅಂದ. ಸರಿಯಪ್ಪ ಅಂತ ಈ ಸಲ ಯಜಮಾನ್ರು ಒಬ್ರೇ ಹೋಗಿದ್ದು. ಅವನು ಎಲ್ಲಾ explain ಮಾಡಿ,ಇಡೀ ಮನೆಗೆ ಅವನ ರೇಟ್ ಹೇಳ್ದ.. Oh my god… ಒಂದು ಕಡೆ ನೋಡ್ಲಿಕ್ಕೆ ಇಷ್ಟು ಚಂದ, ಇನ್ನೊಂದು ಕಡೆ ಒಳ್ಳೇ ಬಾಳಿಕೆ, ಮತ್ತೊಂದು ಕಡೆ ಪರಿಸರ ಪ್ರೇಮಿಗಳಾದ ನಮಗೆ ಬಿದಿರಿನ ಬಗ್ಗೆ ಒಲವು,,, ohh ಇದೆಲ್ಲದರ ಹೊರತಾಗಿ ಈ ಮಟ್ಟಕ್ಕೆ badget friendly ನಾ!!!… ಮತ್ತಿನ್ನೇನು ಎರಡನೇ ಯೋಚ್ನೆ ಮಾಡದೇ ಅವನಿಗೆ ಅಸ್ತು ಅಂದೇ ಬಿಟ್ವಿ… Godrejನವನು ಸ್ವಲ್ಪ ಬೇಜಾರ್ ಮಾಡ್ಕೊಂಡ.. ಇರ್ಲಿ ಏನ್ಮಾಡೋದು…

ಹೀಗೆ ಶುರುವಾಯ್ತು bamboo ಮನೆ ತಯಾರಿ. ಗೃಹಪ್ರವೇಶಕ್ಕೆ ಮೊದಲು ಅಡುಗೆಮನೆ ತಯಾರಾಯ್ತು. ಬಿದಿರನ್ನು ಎಳೆ ಎಳೆಯಾಗಿ ಸಿಗಿದು ಅದನ್ನ ಮತ್ತೆ board ರೀತಿ ಅಂಟು ಹಾಕಿ ಜೋಡಿಸಿ ಮತ್ತೆ ನಮಗೆ ಬೇಕಾದ ಆಕಾರಕ್ಕೆ ಕಟ್ ಮಾಡಿ cabinet ಮಾಡಿದ್ದು.. ಈ ಕೆಲಸ ತುಂಬಾ ಕಷ್ಟದ್ದಾಗಿತ್ತು. ಅಸ್ಸಾಂ ಕಡೆಯ ನಾಲ್ಕು ಹುಡುಗರು ಹಗಲು ರಾತ್ರಿ,ಶ್ರಮಪಟ್ಟು, ಅತೀ ಕಾಳಜಿಯಿಂದ ಕೆಲಸ ಮಾಡಿದ್ದಾರೆ. ಅವರಿಗೆ ನಾವು ಎರಡು ಹೊತ್ತು ಊಟದ ವ್ಯವಸ್ಥೆ ಮಾಡ್ತಿದ್ವಿ.ಅದೇ ಖುಷಿ ಅವ್ರಿಗೆ.ತುಂಬಾ ಒಳ್ಳೆಯ, ಮೈ ಮುರಿದು ದುಡಿಯುವ, ಏನೇ ಹೇಳಿದ್ರೂ ಮಾಡುವ ಮನಸ್ಥಿತಿಯ ಹುಡುಗರಾಗಿದ್ದರು.ಅವರುಗಳಿಗೆ ಜೊತೆ ನನ್ನ ತಂದೆಯವರು. ಹಗಲು ಹೊತ್ತಲ್ಲಿ ದೇಕರೇಕೆ ಅಪ್ಪನದು. ಅಪ್ಪಾ, ಆಯೀ ಪೂರಾ ಎರಡು ತಿಂಗಳು ಇಲ್ಲಿಯೇ ಇದ್ದು ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಗೃಹಪ್ರವೇಶದ ಹೊತ್ತಿಗೆ ಅಡುಗೇಮನೆ ಮತ್ತು bamboo curtain ತಯಾರಾಯ್ತು… ನಾವು ಹೇಳಿದ ತರ ಅಲ್ಲದಿದ್ರೂ ದಪ್ಪ ದಪ್ಪ ಬಿದಿರಿನ ‘ಗಳ’ ಗಳನ್ನ ceiling ಗೆ fix ಮಾಡ್ಸಿ curtain ರೆಡಿಯಾಗಿತ್ತು. ಗೃಹಪ್ರವೇಶಕ್ಕೆ ಬಂದವರು ‘ಗಳ’ ದ ಪೆಟ್ಟು ತಿಂದಿದ್ದು ಆಯ್ತು. Hall ಮತ್ತು roomಅನ್ನು ಬೇರ್ಪಡಿಸಲು ಈ curtain ಕೂಡ urgent ಅವಶ್ಯಕತೆಗಳಲ್ಲೊಂದಾಗಿತ್ತು. ಅರ್ಜೆಂಟಿಗೆ ಮಾಡಿದ್ದು ಈಗ ಪರ್ಮನೆಂಟ್ ಆಗಿದೆ. ಗೃಹಪ್ರವೇಶಕ್ಕೆ ಮೂರು ದಿನ ಬಿಡುವು ಕೆಲಸಕ್ಕೆ. ಆಮೇಲೆ ಮತ್ತೆ ಶುರು. ಸುಮಾರು ಒಂದು ತಿಂಗಳೊಳಗಾಗಿ ಇಡೀ ಮನೆ ರೆಡಿಯಾಯ್ತು. Tv unit ಮುಂಬೈ ನಲ್ಲಿ ಯಾರಿಗೋ ಮಾಡಿ ಕೊಟ್ಟಿದ್ದನಂತೆ. ಸುಮಾರು ಅದೇ ರೀತಿ ಮಾಡಿಸ್ಕೊಂಡ್ವಿ.. ಆಮೇಲಿನದೆಲ್ಲ ನಮ್ಮದೇ idea and design.. ಕೆಲಸ ಮಾತ್ರ ಅವರದ್ದು. Six seater foldable dining table ನಿಂದ ಶುರುವಾದ ಕೆಲಸ, bathroom ನಲ್ಲಿ ಸಜ್ಜೆ ವರೆಗೂ ಬಿದಿರಿನ ಗಳದ್ದೇ. ಬಟ್ಟೆ ಒಣಗಿಸಲು ಕೂಡ ಬಿದಿರೇ. Ceiling ಗೆ fix ಮಾಡ್ಸಿದ್ದೀವಿ. ಅದನ್ನ ಹಗ್ಗದಿಂದ ಇಳಿಸಿ ಬಟ್ಟೆ ಹಾಕಿ ಮತ್ತೆ ಮೇಲೇರಿಸುವ ಬಹಳ ಪ್ರಯತ್ನ ನಡೆಯಿತು. ಆ ‘ಗಳ’ಗಳ ಭಾರ ತಡೆಯುವ “ಗಡಗಡೆ ” ಸಿಗಲೇ ಇಲ್ಲ. ಅದಕ್ಕೆ ಬೇರೆ ಉಪಾಯ ಮಾಡಿದ್ದಾಗಿದೆ ಈಗ. Bedroom ನಲ್ಲಿ ಕನ್ನಡಿ ಇರಬೇಕು ಆದ್ರೆ ಅದು ಕಾಣಬಾರದು ಹಾಗೂ dressing table ಬೇಕು ಆದ್ರೆ ಜಾಗ waste ಆಗಬಾರದು… So ಅದೇ ರೀತಿ ರೆಡಿಯಾಯ್ತು ಕನ್ನಡಿ ಕಪಾಟು .

(ಕನ್ನಡಿ ಕಪಾಟು )

ಮಕ್ಕಳ study table with dragging laptop holder ಆಗಬೇಕು ಅಂತ idea ಕೊಟ್ವಿ… ಅದು ರೆಡಿಯಾಗಿ ಬಂದಾಗ ಆಶ್ಚರ್ಯಚಕಿತರಾದ್ವಿ. ನಮ್ಮ ಯೋಚನೆಗೂ ಮೀರಿ ಕೈ ಕೆಲಸ ಮಾಡಿ ತಯಾರಾಗಿತ್ತು study table. Inverter ನಮ್ಮ ಮನೆಯ entrance ಗೇ ಇಡಬೇಕು. So ಆ ಜಾಗ waste ಆಗಬಾರದಲ್ಲ ಅಂತ, inverter cover ಆಗ್ಬೇಕು, ಅದರ ಮೇಲೆ ಕುಳಿತುಕೊಳ್ಳಬೇಕು. ಒಂಥರಾ chair cum cover cum ಅದರ ಮೇಲೆ ಹತ್ತಿ ceiling clean ಮಾಡೋ ತರ ಇರಬೇಕು ಅಂದಿದ್ದೇ ಎರಡು ದಿನದಲ್ಲಿ ಗೂಡ್ಸ್ ರಿಕ್ಷಾ ದಲ್ಲಿ ತಯಾರಾಗಿ ಬಂತು “”ರಾಜಾ ಸೀಟ್””.. Finally ಸುಮಾರಾಗಿ ಎಲ್ಲಾ ತಯಾರಾಯ್ತು.. Cot, dining table, wardrobe, ಕಿಟಕಿ curtain, shoe rack… ಈ shoe rack ಕಥೆನೇ ಮಜವಾಗಿದೆ. Shoe rack ಇಷ್ಟು ಚಂದವಾಗಿ, ಮಜಾಬೂತಾಗಿ ಮಾಡ್ಕೊಂಡು ಬಂದ್ರು ಅಂದ್ರೆ ಅದನ್ನು ಹೊರಗಡೆ ಇಡೋಕೆ ಮನಸ್ಸಾಗದೇ ಈಗ ಅಡುಗೆ ಮನೆಯಲ್ಲಿ cupboard ಆಗಿದೆ…ಆಯ್ತಲ್ಲ “ಬಿದಿರು ಮನೆ”… ನಮ್ಮ ಮನಸ್ಸಿಗೆ ಬೇಕಾದಂತೆ ಆ ಹುಡುಗರ ಕೈ ಕೆಲಸ ಮಾಡಿತ್ತು….Yes, ಇನ್ನೇನು ಎಲ್ಲಾ ಲೆಕ್ಕಾಚಾರ ಮಾಡಿ ರೆಹಮಾನ್ ಭಾಯ್ ಜೊತೆ ವ್ಯವಹಾರ ಮುಗಿಸೋ ಸಮಯ ಬಂದಾಯ್ತು. ಅವನ ಜೊತೆ ಮಾತಾಡಿ ಈ ಬಿದಿರಿನ maintanance ಎಲ್ಲಾ ತಿಳಿದುಕೊಂಡಿದ್ದಾಯ್ತು. Last ನಲ್ಲಿ ಮನೆಯ hall ಗೆ ಒಂದು ಚಂಡಿಲಿಯರ್(chandelier) ಬೇಡ್ವೇ.. ಅಪಾರ್ಟ್ಮೆಂಟ್ ನವರೇ ಒಳ್ಳೇ false ceiling ಮಾಡಿಟ್ಟಿದ್ದರು. Showroomಗಳಿಗೆ ತಿರುಗಿ ಸುಮಾರು ಗಾಜಿನ ಮಿಣಿಮಿಣಿಗಳ ದರ್ಶಿಸಿದ್ದಾಯ್ತು. ಛೇ, ಯಾಕೋ ಒಮ್ಮೆ ರೆಹಮಾನ್ ಭಾಯ್ ಕೇಳೇ ಬಿಡೋಣ ಅಂತ ಕೇಳಿದ್ರೆ..”ಕ್ಯಾ saab, ಕೋನ್ಸಾ design ಬೇಕು ಹೇಳಿ, ರೆಡಿ ಮಾಡ್ತೀವಿ ಅಂದ. So,, ಆದ್ದರಿಂದ ಕಡೆಯಲ್ಲಿ ನಮ್ಮ ಮನೆಯ ಚಂಡಿಲಿಯರ್ ಕೂಡ ಬಿದಿರಿನದೇ.



ಇದೇ ನಮ್ಮ ಬಿದಿರು ಮನೆಯ ಕಥೆ. ದೇವರ ಕೋಣೆಯಲ್ಲಿ ಮಾತ್ರ ಬಿದಿರಿಲ್ಲ, ವಾಸ್ತು ಪ್ರಕಾರ. ಆದರೆ ದೇವರು ಕಣ್ ಬಿಟ್ಟರೆ ಕಾಣುವುದೆಲ್ಲ ಬಿದಿರೇ. ದೇವರಿಗಾಗಿ glass house. ಅವನು ಇಡೀ ದಿನ ನಮ್ಮನ್ನು ನೋಡ್ತಾ ಇರ್ಲಿ ಅಂತ ಗಾಜಿನಿಂದ ಮಾಡ್ಸಿದ್ವಿ. ಈಗ ಅಪಾರ್ಟ್ಮೆಂಟ್ ಜನರೆಲ್ಲಾ ಸೇರಿ ಅದಕ್ಕೆ curtain ಹಾಕಿಸಿದ್ದಾರೆ. ಅದೇನೋ ದೇವರನ್ನು ಎಲ್ಲರೂ(ಮನೆಗೆ ಬರೋವ್ರೆಲ್ಲ) ಎಲ್ಲಾ ಸಮಯದಲ್ಲೂ ನೋಡಬಾರದಂತೆ.

ನಮ್ಮ ರೆಹಮಾನ್ ಭಾಯ್ ಮಾತ್ರ ಬೆಂಗಳೂರು ಬಿಟ್ಟು ವಾಪಾಸ್ ಅಸ್ಸಾಂ ಸೇರಿದ್ದಾನೆ. ಹಮೇಶಾ ಹಮೇಶಾ ಕೆ ಲಿಯೇ… ಬೆಂಗಳೂರು airport, ಬನ್ನೇರಘಟ್ಟ national park, ಹೀಗೆ ಸುಮಾರ್ ಕಡೆ ಗವರ್ನಮೆಂಟ್ ಪ್ರಾಜೆಕ್ಟ್ ಸಿಕ್ತು.. ಅದ್ರಲ್ಲಿ ದೊಡ್ಡ ಪ್ರಮಾಣದಲ್ಲಿ ಮೋಸ ಹೋದ. ಈಗಲೂ ಅವನ ಕೈ ಚಳಕಗಳನ್ನು watsapp ಮಾಡ್ತಿರ್ತಾನೆ.

ಮೊದಲಿನಿಂದಲೂ ನಮಗೆ ಈ ಬಯಲುಸೀಮೆ ಕಡೆ “ವಾಡ್ಯಾ” style ಮನೆ ಅಂದ್ರೆ ತುಂಬಾ ಇಷ್ಟ… ಇಲ್ಲಾ ಮಲೆನಾಡಿನ ಮನೆಗಳ ತರ ಒಂದು ಮೂಲೆಯಲ್ಲಿ ಒಲೆಯ ಮೇಲೆ ಬಿಸಿನೀರು ಕಾಯ್ತಾ ಇರಬೇಕು ಅಥವಾ ಬಯಲುಸೀಮೆ ಮನೆ ತರ ಮನೆ ಮಧ್ಯದಲ್ಲಿ ಮಳೆ ನೀರು ಸುರಿತಾ ಇರಬೇಕು… ಗಾಜಿನರಮನೆಗಳು, ಮೆಟ್ಟಿಲಿನ ಅಂತಸ್ತುಗಳು ಯಾವತ್ತೂ ಆಕರ್ಷಿಸಿದ್ದಿಲ್ಲ. ಬೆಂಗಳೂರೆಂಬ ಮಹಾನಗರದಲ್ಲಿ ಈ “ಬಿದಿರು ಮನೆ” ಮನಸ್ಸಿನ ಸಂತೃಪ್ತಿ. ಅಷ್ಟರಮಟ್ಟಿಗೆ ಪರಿಸರಕ್ಕೆ ಕೃತಜ್ಞತೆ ಸಲ್ಲಿಸಿದ ಆನಂದ..


  • ಮಾಲತಿ ಗಣೇಶ್ ಭಟ್ (ಲೇಖಕಿ, ಗೃಹಿಣಿ) ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading