೨೦ ವರ್ಷದ ಖ್ಯಾತ ಯೂಟ್ಯೂಬರ್ : ಇಶಾನ್ ಶರ್ಮಾ



ಈತ ಓದುತ್ತಿದ್ದದ್ದು BITS ನಲ್ಲಿ ಇಂಜಿನಿಯರಿಂಗ್, ಸ್ವಲ್ಪ ವರ್ಷದಲ್ಲಿ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೈ ತುಂಬಾ ಸಂಬಳ ಬರುವ ಕೆಲಸವನ್ನು ಗಿಟ್ಟಿಸಿಕೊಳ್ಳುತ್ತಿದ್ದ. ಆದರೆ ಅವನ ನಿರ್ಧಾರವೇ ಬೇರೆಯೇ ಆಗಿತ್ತು, ಓದು ನಿಲ್ಲಿಸಿ ಯೂಟ್ಯೂಬರ್ ಆದ, ಆ ಹುಡುಗನ ಹೆಸರೇ ಇಶಾನ್ ಶರ್ಮಾ. ಅವನ ಸಾಧನೆಯ ಕತೆಯನ್ನು ಲೇಖಕಿ ಮಾಲತಿ ಗಣೇಶ್ ಭಟ್ ಅವರು ಓದುಗರ ಮುಂದೆ ತಂದಿದ್ದಾರೆ, ತಪ್ಪದೆ ಎಲ್ಲರೂ ಓದಿ…

ಅಯ್ಯೋ ದೇವ್ರೇ ಇಂಜಿನಿಯರಿಂಗ್ ಓದನ್ನೇ ಬಿಟ್ಟಬಿಟ್ಟನಲ್ಲಾ ಈ ಹುಡುಗ… Ohh God…!!!

‘ಇಶಾನ್ ಶರ್ಮಾ ‘ a youtuber… “Birla Institute of technology and Science (BITS) ” ಅನ್ನೋ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಇಂಜಿನಿಯರಿಂಗ್ ಮಾಡ್ತಿದ್ದ ಹುಡುಗ. ಸೈಡ್ ಬೈ ಸೈಡ್ ಒಂದು ಯೂಟ್ಯೂಬ್ ಚಾನೆಲ್ ಕೂಡ ಮಾಡ್ಕೊಂಡಿದ್ದ. ಈಗೊಂದು ವಾರದ ಹಿಂದೆ ” I quit ” BITS ಅಂತ ಅನೌನ್ಸ್ ಮಾಡೇಬಿಟ್ಟಿದ್ದಾನೆ. ಯಾಕಾಗಿ ಅಂದ್ರೆ ಅವನ youtube ಚಾನೆಲ್ಗಾಗಿ, ಅವನ content ಡೆವಲಪ್ಮೆಂಟ್ ಗಾಗಿ, ಅವನ own ಪ್ರಾಡಕ್ಟ್ ಗಾಗಿ ಅಂತ ಒಂದು vedio ನೇ ಮಾಡಿದ್ದಾನೆ.

ಅಬ್ಬಾ… ಇವನ ಧೈರ್ಯವೇ, ಇವನ ಆತ್ಮವಿಶ್ವಾಸವೇ..!! ಒಳ್ಳೆಯದಾಗಲಿ ಎಂಬ ಹಾರೈಕೆ.

2021ನೇ ಇಸವಿಯ ಮೊದಲ ಕೋವಿಡ್ ಲಾಕ್ಡೌನ್ ಆದಾಗ,  ಯೂಟ್ಯೂಬ್ ನಲ್ಲಿ  ನನ್ನ ಮಕ್ಕಳ ಸಲುವಾಗಿ ‘coding’ classes ಹುಡುಕುವಾಗ ಈ ಇಶಾನ್ ಶರ್ಮಾ ಹೆಸ್ರು ಬಂತು ಯೂಟ್ಯೂಬ್ ನಲ್ಲಿ, ಸಣ್ಣ ಹುಡುಗ ಒಂದು ಪ್ರೋತ್ಸಾಹಕ್ಕೆ ಅಂತ ಅವನ ಚಾನೆಲ್ ನ subscribe ಮಾಡಿದ್ದು. ಆಮೇಲೆ ಅವನ vedios ನೋಡಿದಮೇಲೆ,  ಅವನು JEE (ಮೈನ್ಸ್ ) ನಲ್ಲಿ ಪಾಸಾಗಿ JEE (ಅಡ್ವಾನ್ಸ್ ) ನಲ್ಲಿ ಒಳ್ಳೇ ಫಲಿತಾಂಶ ಸಿಗದೇ IIT ಕಾಲೇಜಿನಲ್ಲಿ ಅಡ್ಮಿಶನ್ ಸಿಗದೇ, ಕೊನೆಯಲ್ಲಿ ‘ಬಿರ್ಲಾ ಇನ್ಸ್ಟಿಟ್ಯೂಟ್ ‘ ನಲ್ಲಿ ಅವಕಾಶ ಪಡೆದು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮಾಡ್ತಾ ಇದ್ದ ಹುಡುಗ  ಅಂತ ತಿಳೀತು. Coding ಕ್ಲಾಸ್ ಆಮೇಲೆ ಕಾರಣಾಂತರಗಳಿಂದ ನನ್ನ ಮಕ್ಕಳು ಮಾಡಿಲ್ಲ, ನಾನು ಅಪರೂಪಕ್ಕೆ ಇವನ ಚಾನೆಲ್ ನೋಡ್ತಿದ್ದೆ…

ವೀಡಿಯೋ ಎಡಿಟಿಂಗ್ ಯಿಂದ ಹಿಡಿದು, “ಆಡು ಮುಟ್ಟದ ಸೊಪ್ಪಿಲ್ಲ” ಅಂತಾರಲ್ಲ…  ಈಗಿನ ಎಲ್ಲಾ ತರಹದ ಟ್ರೆಂಡಿಂಗ್ ಸಬ್ಜೆಕ್ಟ್ ಮೇಲೆ content ಮಾಡ್ತಾನೆ. unacademy ಯಲ್ಲಿ teach ಮಾಡ್ತಾನೆ. ಒಂದು ಪುಸ್ತಕನೂ ಬರ್ದಿದ್ದಾನೆ “crush it on linkedin” ಅಂತ ಹೆಸರು…. 20ರ ವಯಸ್ಸಿನ ಈ ಹುಡುಗ ಮಾತಾಡುವ ರೀತಿ ನೋಡಬೇಕು, ಎಂಥ confidence… Great… ಯೂಟ್ಯೂಬ್ ಗೆ ಹೋಗಿ ಇಶಾನ್ ಶರ್ಮಾ ಅಂತ ಟೈಪಿಸಿದರೆ ಗೊತ್ತಾಗುತ್ತೆ ಅವನ success story. ಅವನಿಗೆ ಯಾವ್ದು  ರಾತ್ರಿ ಬೆಳಗಾಗುವವರೆಗೆ ಸಿಕ್ಕ ಯಶಸ್ಸಲ್ಲ. ಕೋವಿಡ್ ಲಾಕಡೌನ್  ಸಂಪೂರ್ಣ ವರವಾಗಿ ಉಪಯೋಗಿಸಿದ ಫಲ ಅಂತಾನೇ ಹೇಳಬಹುದು..

ಎಲ್ಲವನ್ನೂ ತಾನು ಕಲಿತು, ಎಲ್ಲರಿಗೂ ಕಲಿಸುವ ಕೆಲಸ ಮಾಡಿದ್ದಾನೆ. ‘ವರ್ಲ್ಡ್ ಆಫ್ ಇಂಟರ್ನೆಟ್’  ಎಷ್ಟು ಧನಾತ್ಮಕವಾಗಿ ಉಪಯೋಗಿಸಬಹುದು, ಒಂದು ನಯಾಪೈಸೆ ಖರ್ಚು ಮಾಡದೇ ಏನೆಲ್ಲಾ ಕಲಿಯಬಹುದು. ಕಲಿತಿದ್ದನ್ನು ಬಳಸಿಕೊಂಡು ಹೇಗೆ ಸಂಪಾದಿಸಬಹುದು… ಎಲ್ಲ.. ಎಲ್ಲವನ್ನೂ ಹೇಳ್ತಾನೆ ಇಶಾನ್ ತನ್ನ vedio ಗಳಲ್ಲಿ…

ಎಲ್ಲಾ ಸರಿ..,ಒಮ್ಮೆ ಪೂರ್ಣ ಪ್ರಮಾಣದಲ್ಲಿ ಕಾಲೇಜು ಪ್ರಾರಂಭ ಆದ್ರೆ ಇದೆಲ್ಲ ಬದಿಗಿಡಲೇಬೇಕು. ಅದ್ರಲ್ಲೂ ಅಷ್ಟು ಒಳ್ಳೇ ಕಾಲೇಜು.. ಒಳ್ಳೇ ಕೋರ್ಸ್, ಎಲ್ಲಾ ಇದೆ.. ಇನ್ನೊಂದು ಸ್ವಲ್ಪ ದಿನಕ್ಕೆ ಹೇಳ್ತಾನೆ “ನಾನು ಸ್ವಲ್ಪ ದಿನ ಬಿಡುವು ತಗೋತೀನಿ ” ಅಂತ ನನ್ನ ತಲೆಯಲ್ಲಿ.. ನನ್ನ ಹಾಗೇ ಅವನ ಚಾನೆಲ್ ನೋಡುವ ಹೆಚ್ಚಿನವರ ತಲೆಯಲ್ಲಿ ಹೀಗೇ ಇತ್ತು. ಆದ್ರೆ ಈಗೊಂದು ವಾರದ ಹಿಂದೆ ಅವನ ಘೋಷಣೆ ಕೇಳಿ ಎಲ್ರಿಗೂ ತಲೆಮೇಲೆ ಹೊಡೆದ ಹಾಗೇ ಆಯ್ತು… ಒಂದು ಹೊಸ ಪ್ರಾಡಕ್ಟ್  ಮಾಡ್ಲಿಕ್ಕೆ, ಪೂರ್ಣ ಪ್ರಮಾಣದಲ್ಲಿ ನನ್ನ “ಕಂಟೆಂಟ್ ಡೆವಲಪ್ಮೆಂಟ್ ” ಕೆಲಸಕ್ಕೆ ನ್ಯಾಯ ಒದಗಿಸಲು,  ನಾನು ಕಾಲೇಜು ಶಿಕ್ಷಣವನ್ನು ಇಲ್ಲಿಗೇ ನಿಲ್ಲಿಸ್ತಾ ಇದ್ದೇನೆ”!!!! ಅಂದುಬಿಟ್ಟು!!!

ತನ್ನ ಮಾತನಾಡುವ ಕೌಶಲ್ಯವನ್ನು ಸುಧಾರಿಸಿಕೊಳ್ಳಲು ಪ್ರಾರಂಭಿಸಿದ ಯೂಟ್ಯೂಬ್ ಚಾನೆಲ್,ಒಂದು ಚಿಕ್ಕ ಪ್ರಯತ್ನ, ಆಮೇಲಿನ ಅವನ ಒಂದು ಸೋಲು, ಅದರ ನಂತರ ಶರ್ಮಾ, ತನ್ನನ್ನು ತಾನು ಪಳಗಿಸಿದ ರೀತಿ ಶ್ಲಾಘನೀಯ. 20 ನೇ ವಯಸ್ಸಿಗೆ ಒಳ್ಳೇ ಸಂಪಾದನೆ ಮಾಡುವ, ಒಳ್ಳೇ ವಿಷಯಾಧಾರಿತ ವೀಡಿಯೋಗಳುಳ್ಳ, ಒಳ್ಳೇ ಮಾರ್ಗದರ್ಶನ ಕೊಡುವ, ಒಳ್ಳೇ ಹೆಸರುಗಳಿಸಿರುವ ಇಶಾನ್ ಶರ್ಮಾ ಇಂದಿನ ಪೀಳಿಗೆಯ ಮಕ್ಕಳಿಗೆ ಮಾದರಿ..

ಈ ರೀತಿ ಕಾಲೇಜು ಬಿಟ್ಟು ಎಲ್ಲರೂ ಸಾಧಿಸಬೇಕೆಂದಲ್ಲ… ಆದರೆ ಕನಿಷ್ಠ ತಮ್ಮ ಬಿಡುವಿನ ಸಮಯವನ್ನಾದರೂ ಸಮಂಜಸವಾಗಿ, ಫಲದಾಯಕವಾಗಿ, ಸಕಾರಾತ್ಮಕವಾಗಿ ಉಪಯೋಗಿಸಿಕೊಂಡಲ್ಲಿ ಗೆಲುವು ನಿಶ್ಚಿತ.

ಅವನ ಈ ನಿರ್ಧಾರ ಜೀವನದುದ್ದಕ್ಕೂ ಅವನನ್ನ ಗೆಲ್ಲಿಸಲಿ.ಇದಕ್ಕೆ ಬೆಂಬಲವಾಗಿ ನಿಂತ ಅವನ ಪೋಷಕರ ಕನಸು ಈಡೇರಲಿ. ಮಕ್ಕಳು ಸೋತಾಗ ಪೋಷಕರ ಬೆಂಬಲ ಅತೀ ಅವಶ್ಯಕ. ಸೋಲನ್ನು ಈ ತೆರನಾಗಿ ಮೆಟ್ಟಿನಿಂತು ಸಾಧಿಸುವ ಹಂಬಲ ಎಲ್ಲ ಯುವ ಪೀಳಿಗೆಯೂ ರೂಢಿಸಿಕೊಳ್ಳಲಿ.



ಈ IIT ಗಳಲ್ಲಿ ಓದಿದ ಹಲವರು ಚಿಕ್ಕ ವಯಸ್ಸಿಗೇ ಸನ್ಯಾಸ ಸ್ವೀಕಾರ ಮಾಡಿದವರಿದ್ದಾರೆ.. ಹೀಗೇ ಈ BITS ನಲ್ಲಿ ಓದಿದ ಹಲವರು ಚಿಕ್ಕ ವಯಸ್ಸಿಗೇ “ಯುಟ್ಯೂಬರ್” ಗಳಾಗಿದ್ದಾರಂತೆ. ಅಲ್ಲಿ ಅಟೆಂಡೆನ್ಸ್ ಕಂಪಲ್ಸರಿ ಇಲ್ವಂತೆ.ಅದ್ಕೇ ಈ ತರ ಅಕ್ಕ ಪಕ್ಕ, ಚಿಕ್ಕ ಪುಟ್ಟ, ಎಕ್ಸ್ಟ್ರಾ ಫಿಟ್ಟಿಂಗ್ ಇಟ್ಕೋಬಹುದಂತೆ….ಆದ್ರೆ ಈ ಲೆವೆಲ್ ಗೆ ಕಾಲೇಜೇ ಬಿಟ್ಟವರು ಇರ್ಲಿಲ್ಲ… ಇನ್ನು ಮೇಲೆ ಇವ್ರು
ಅಟೆಂಡೆನ್ಸ್ ಕಂಪಲ್ಸರಿ ಮಾಡಬಹುದು…

ಶುಭವಾಗಲಿ ಇಶಾನ್ ಶರ್ಮಾ….


  • ಮಾಲತಿ ಗಣೇಶ್ ಭಟ್ (ಲೇಖಕಿ, ಗೃಹಿಣಿ) ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading