ಮೊದ್ಲೆಲ್ಲ ಪೆನ್ನ ರೀಫಿಲ್ ಖಾಲಿ ಆದ್ರೆ ಮತ್ತೆ ಮತ್ತೆ ಬೇರೆ ಬೇರೆ ರೀಫಿಲ್ ಹಾಕಿ ತುಂಬುಸ್ತಿದ್ರು. ಹಿಂದಿನಿಂದಲೂ ಪೆನ್ನು ಎಷ್ಟೋ ಸಂಬಂಧಗಳನ್ನು ಬೆಸೆದಿದ್ದೇನೆ. ದೂರದ ಊರಿನಲ್ಲಿರುವ ತಂದೆ-ಮಕ್ಕಳ, ಬಂಧು- ಬಾಂಧವರ ಮನದ ಭಾವನೆಗೆ ಅಕ್ಷರದ ರೂಪ ನೀಡಿದೆ. ಪೆನ್ನಿನಿಂದ ಏನ್ ಬರೀತೀರಿ ಅನ್ನೋದು ತುಂಬಾ ಮುಖ್ಯ. ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ನಿಮ್ಮ ಪೆನ್ನು’ ತಪ್ಪದೆ ಮುಂದೆ ಓದಿ…
ನಾನಂತು ಎಲ್ಲರ್ಗು ಬೇಕು. ಎಷ್ಟೇ ಮೊಬೈಲ್, ಲ್ಯಾಪ್ ಟಾಪ್ ನಲ್ಲಿ ಟೈಪ್ ಮಾಡ್ತೀವಿ ಪೆನ್ ಬೇಡ ಅಂದೌರು ಸಹ ಒಂದಲ್ಲಾ ಒಂದ್ ಸಮ್ಯದಲ್ಲಿ ನನ್ನುನ್ನ ಖಂಡಿತ ಉಪಯೋಗ್ಸಿರ್ತಾರೆ. ಅಷ್ಟಕ್ಕೂ ಒಂದ್ ಮಾತ್ ಹೇಳ್ತೀನಿ ಕೇಳಿ . ಟೆಕ್ನಾಲಜಿ ಮುಂದ್ವರ್ದಿದೆ, ಇವಾಗ್ ನನ್ ಅವಶ್ಯಕತೆ ಇಲ್ಲ ಅಂತೀರಾ. ಅದೇ ನಿಮ್ ಟೆಕ್ನಾಲಜೀಲಿ ಒಂದ್ಸಲ ಮಿಸ್ಟೇಕ್ ಆಗಿ ಬೇರೆ ಬಟನ್ ಟಚ್ ಆಯ್ತೂಂದ್ರೆ ನೀವ್ ಬರ್ದಿದ್ದಷ್ಟು ಅಳ್ಸೋ ಛಾನ್ಸ್ ಇದೆ ಅಲ್ವಾ. ಆದ್ರೆ ನನ್ನಿಂದ ಬರ್ದಿಟ್ರೆ ವರ್ಷಗಟ್ಳೆ ಆದ್ರು ಸೇಫ್ ತಾನೆ.
ಮೊದ್ಲೆಲ್ಲ ನಾನು ಬರ್ದ್ ಖಾಲಿ ಆದ್ರೆ ಮತ್ತೆ ಮತ್ತೆ ಬೇರೆ ಬೇರೆ ರೀಫಿಲ್ ಹಾಕಿ ನನ್ಹೊಟ್ಟೆ ತುಂಬುಸ್ತಿದ್ರು. ನನ್ನುನ್ನ ತುಂಬ ಜೋಪಾನ ಮಾಡ್ತಿದ್ರು. ಆದ್ರೆ ಈಗ ಒಂದ್ಸಲ ನಾನ್ ಖಾಲಿ ಆದ್ರೆ ಹೆಚ್ಚಿನ್ ಜನ ತೆಗ್ದು ಬಿಸ್ಹಾಕಿ , ನನ್ ನೆಕ್ಸ್ಟ್ ಜನರೇಶನ್ ಅಂದ್ರೆ ನನ್ ಮುಂದಿನ್ ಪೀಳ್ಗೆ, ಅಯ್ಯೋ ಅದೇರಿ, ನಾನ್ ತಯಾರಾದ್ಮೇಲೆ ತಯಾರಾಗಿದ್ ಪೆನ್ಗಳು ಅಥ್ವಾ ನನ್ನುನ್ನ ಕೊಂಡ್ಕೊಂಡು ಉಪಯೋಗ್ಸಿದ್ಮೇಲೆ ಅವ್ರ್ ತಗಳೋ ಪೆನ್ಗಳು ಅಥ್ವಾ ನನ್ ತಲೆಮಾರಿನೌರೋ, ಒಟ್ನಲ್ಲಿ ನನ್ ಜಾಗನ ಅವ್ರಿಗ್ ಕೊಡ್ತಾರೆ. ಅವ್ರೂ ಅಲ್ಲೇನ್ ಪರ್ಮನೆಂಟ್ ಅಲ್ಲ ಬಿಡಿ.
ಚಿಕ್ ಮಕ್ಳು ನನ್ನುನ್ ಹಿಡ್ಕೊಂಡ್ರೆ ಹತ್ತಿ ತರ ಮೆತ್ ಮೆತ್ತುಗಾಗುತ್ತೆ. ಆಹಾ! ಎಂಥಾ ಹಿತವಾದ ಸ್ಪರ್ಶ. ಆಗಷ್ಟೇ ಅಕ್ಷರ ಕಲ್ತು ರಾಗವಾಗಿ ಹೇಳ್ಕೊಂಡು ಬರೀತಾ ಇದ್ರೆ, ಆ ಮಕ್ಳು ಜೊತೆ ನಂಗೂ ನಿದ್ದೆ ಬರುತ್ತೆ. ಅವ್ರು ಸರ್ಯಾಗ್ ಬರುದ್ರೆ ನಂಗ್ ಖುಷಿ ಆಗುತ್ತೆ . ತಪ್ಪು ಬರ್ದಾಗ ಹೇಳ್ತೀನಿ ಹೀಗಲ್ಲಪ್ಪ, ಇದು ತಪ್ಪೂ ಅಂತ. ಆದ್ರೆ ಅವ್ರಿಗ್ ಕೇಳ್ಸೋಲ್ವೆ. ಆಮೇಲೆ ಅಪ್ಪ-ಅಮ್ಮನೋ, ಟೀಚರ್ರೋ ಹೇಳಿದ್ರೆ ಮಾತ್ರ ಅವ್ರಿಗೆ ಗೊತ್ತಾಗದು. ಇನ್ನು ಕೆಲವು ಮಕ್ಳಿಗೆ ಬರ್ಯಕೆ ಇಷ್ಟ ಆಗ್ದೆ ಹಠ ಮಾಡ್ತ ಎಷ್ಟೋ ಸಲ ನನ್ನುನ್ನ ಬಿಸ್ಹಾಕಿದಾರೆ. ಆಗ ನಂಗೂ ಬೇಜಾರಾಗಿದೆ. ಈಗ ನಿಮ್ಗೆ ನನ್ ಬೆಲೆ ಗೊತ್ತಾಗಲ್ಲ, ಏನ್ಮಾಡದು ನಿಮ್ ವಯಸ್ಸೇ ಹಾಗಿದೆ ಅಂತ ನನುಗ್ ನಾನೆ ಸಮಾಧಾನ ಮಾಡ್ಕೊತೀನಿ.
ಇನ್ನು ಕೆಲೌರಿಗೆ ನನ್ ಮೇಲೆ ಅದೇನ್ ಪ್ರೀತಿನೊ ಏನೊ. ಎಷ್ಟು ವರ್ಷಗಳಾದ್ರು ನನ್ನುನ್ನ ತುಂಬ ಜೋಪಾನ ಮಾಡ್ತಾರೆ. ನನ್ ಮೇಲಿನ ಅಕ್ಕರೆಯೋ ಅಥ್ವಾ ಯಾರು ನನ್ನುನ್ನ ಕೊಟ್ಟಿರ್ತಾರೊ, ಅವ್ರ್ ಮೇಲಿನ ಭಾವನಾತ್ಮಕ ಸಂಬಂಧವೋ ಒಟ್ಟಿನಲ್ಲಿ ಅವ್ರ್ ಜೊತೆ ನಾನಂತು ತುಂಬ ಖುಷ್ಯಾಗಿದೀನಿ. ಇನ್ನು ಕೆಲೌರ್ ಮನೇಲಿ ನಂಗೆ ಬೇರೆ ರೀಫಿಲ್ಲು ಹಾಕಲ್ಲ, ನನ್ನ ಬಿಸಾಕದು ಇಲ್ಲ, ಪೂರ್ತಿ ಖಾಲಿ ಆಗೋ ತಂಕ ಉಪಯೋಗ್ಸದು ಇಲ್ಲ. ನನ್ ಜೊತೆ ನನ್ ಬಂಧು-ಬಳಗ ಎಲ್ಲಾರ್ನು ಸೇರ್ಸಿ ಗುಡ್ಡೆಹಾಕಿ ಒಂದ್ಕಡೆ ಇಟ್ಗೊಂಡಿರ್ತಾರೆ. ಮನೆ ಕ್ಲೀನ್ ಮಾಡುವಾಗ ಬಿಸ್ಹಾಕ್ಲಾ ಅಂತ ಯಾರಾದ್ರು ಕೇಳಿದ್ರೆ ಇಲ್ಲ, ಅದ್ರಲ್ಲಿನ್ನು ಇಂಕಿದೆ ಬೇಡ ಅಂತಾನೊ, ಅದಿನ್ನು ಬರೀತಾ ಇದೆ ಬೇಡ ಅಂತಾನೊ ಅಂತಾರೆ ಅಷ್ಟೆ. ಆದ್ರೆ ವರ್ಷದಲ್ಲಿ ಒಂದಿನಾನು ನನ್ ಕಡೆ ತಿರುಗ್ ನೋಡಲ್ಲ. ನನ್ ಮೇಲೆ ಧೂಳು ಕೂತ್ಗೊಂಡಾಗ ಉಸ್ರು ಕಟ್ದಂಗ್ ಆಗುತ್ತೆ. ನಂಗೂ ಕಾದು ಕಾದು ಬೇಜಾರಾಗುತ್ತೆ. ಆದ್ರೆ ನನ್ಜೊತೆಗಿನೌರೆಲ್ಲ ಇರ್ತಾರಲ್ಲ ಹಾಗಾಗಿ ಹೇಗೋ ಹೊತ್ತ್ಹೋಗುತ್ತೆ.

ಫೋಟೋ ಕೃಪೆ : ಅಂತರ್ಜಾಲ
ನನ್ನುನ್ನ ಬ್ಯಾಗಲ್ಲಿ, ಜಾಮಿಟ್ರಿ ಬಾಕ್ಸಲ್ಲಿ, ತರತರದ ಪೌಚ್ ಗಳಲ್ಲಿ, ಶರ್ಟಿನ್ ಜೇಬಲ್ಲಿ, ಪರ್ಸಲ್ಲಿ, ವ್ಯಾನಿಟಿ ಬ್ಯಾಗಲ್ಲಿ, ಚೆಂದ ಚೆಂದದ ಬಾಕ್ಸ್ ಗಳಲ್ಲಿ , ಪೆನ್ ಸ್ಟ್ಯಾಂಡ್ಗಳಲ್ಲಿ ಇಡೋದೇನೊ ಸರಿ , ಆದ್ರೆ ಇನ್ ಕೆಲೌರು ಕಿವಿಗೆ ಸಿಕ್ಕಿಸಿಯೋ, ಓದುವಾಗ, ಬರೆಯುವಾಗ ಮಧ್ಯದಲ್ಲಿ ಆಗಾಗ ಹಲ್ಲಲ್ಲಿ ಕಚ್ಚಿ ಇಟ್ಕೊಳ್ತಾರೆ. ನನ್ಗೋ, ಬಿಡುಸ್ಗಳಕು ಆಗಲ್ಲ. ನನ್ನ ಮುಚ್ಚುಳ ಅಂತೂ ಕಚ್ಚಿ ಕಚ್ಚಿ ಅದ್ರು ಆಕಾರನೆ ಕಳ್ಕೊಂಡಿರತ್ತೆ. ಕೈಯ್ಯಲ್ಲಿಟ್ಗೊಂಡು ಆಟ ಆಡೌರು ತುಂಬಾ ಜನ ಇದಾರೆ.
ಸ್ಕೂಲಲ್ಲಿ ಇನ್ನಿತರ ಸ್ಥಳಗಳಲ್ಲಿ ನನ್ನುನ್ನ ಕದಿತಾರೆ. ಆಗಂತು ನನ್ಗೆ ಅಳುನೆ ಬರುತ್ತೆ. ನನ್ಗೂ ಒಂದ್ ಬೆಲೆ, ಮರ್ಯಾದೆ ಅಂತ ಇದೆ ಕಣ್ರೋ . ದುಡ್ ಕೊಟ್ ತಗೊಳ್ರೋ ಇಲ್ಲಾಂದ್ರೆ ಅಟ್ ಲೀಸ್ಟ್ ಕೇಳಾದ್ರು ತಗೊಳ್ರೋ ಅನ್ನೋ ನನ್ ಒಳಗಿನ್ ಧನಿ ಹೊರ್ಗಡೆ ಬರೋದೆ ಇಲ್ಲ. ಬ್ಯಾಂಕು, ಪೋಸ್ಟ್ ಆಫೀಸ್ ಮುಂತಾದ ಸಾರ್ವಜನಿಕರು ಜಾಸ್ತಿ ಉಪಯೋಗಿಸೋ ಸ್ಥಳಗಳಲ್ಲಿ ನನ್ನುನ್ನ ಒಂದು ದಾರಕ್ಕೆ ಕಟ್ಟಿ ನೇತ್ಹಾಕಿರ್ತಾರೆ. ನೋಡಿ , ಈ ಮನುಷ್ಯನ್ ನೀಚ ಬುದ್ಧಿಂದ ನನ್ಗೆ ಎಂಥಾ ಪರಿಸ್ಥಿತಿ ಬಂತು ಅಂತ.
ನನ್ನಿಂದ ಎಕ್ಸಾಮ್ ಬರ್ದು ಪ್ರತಿ ವರ್ಷ ಕೋಟ್ಯಾಂತರ ಜನ ಪಾಸಾಗ್ತಾರೆ. ಆಗಂತೂ ನನ್ನುನ್ನ ಹಿಡ್ಯೌರೆ ಇಲ್ಲ. ಆಮೇಲೆ ಅವ್ರ್ಯಾರು ನನ್ನುನ್ನ ನೆನೆಪಿಸ್ಗೊಳ್ದೆ ಇರ್ಬೋದು. ಆದ್ರೆ ನಾನಂತು ಯಾರುನ್ನ ಮರ್ಯಲ್ಲಪ್ಪ. ಪರೀಕ್ಷೆಗೆ ಮುಂಚೆ ನನ್ನುನ್ನ ದೇವರ ಪಾದದ್ಹತ್ರ ಇಟ್ಟು ಪೂಜೆ ಮಾಡೌರು ಇದಾರೆ. ಅದೆಲ್ಲ ನನಗೂ ಖುಶೀನೆ. ದೇವರ ಪಾದ ಸ್ಪರ್ಶ ಸಿಗಕು ಅದೃಷ್ಟ ಮಾಡಿರ್ಬೇಕು ಅಂದ್ಕೊಂಡೌನು ನಾನು. ಇನ್ನು ದಿನಾ ಹೇಗ್ಹೇಗೋ ನನ್ನುನ್ನ ಇಡದು, ಉಪಯೋಗ್ಸೋದು ಮಾಡ್ತಿದ್ದೌರು ಸಹ ಆಯುಧ ಪೂಜೆ ದಿನ ನನ್ನುನ್ನ ಪೂಜೆ ಮಾಡ್ದಾಗ ಇವತ್ತು ನನ್ ಕಾಲ ಅಂದ್ಕೊಳ್ತೀನಿ.
ಕೆಲವರಿಗಂತೂ ನಾನು ಅಚ್ಚುಮೆಚ್ಚು. ನನ್ನುನ್ನ ಎಷ್ಟು ಚೆನ್ನಾಗ್ ನೋಡ್ಕೊಳ್ತಾರಂದ್ರೆ ನಿಜ್ವಾಗ್ಲು ನಾನ್ ಪುಣ್ಯ ಮಾಡಿದ್ದೆ ಅನ್ಸುತ್ತೆ. ನನಗೆ ತುಂಬಾ ಗೌರವ ಕೊಡ್ತಾರೆ. ನನ್ನುನ್ನ ಬೀಳ್ಸಲ್ಲ. ಅಪ್ಪಿತಪ್ಪಿ ಬಿದ್ರೂ ಕಣ್ಗೊತ್ಗಂತಾರೆ. ನನ್ನುನ್ನ ಬೇರೆ ಯಾರಿಗು ಕೊಡಲ್ಲ. ಯಾಕಂದ್ರೆ ಅವ್ರ್ ಹೃದಯದಲ್ಲಿ ನಂಗೆ ಜಾಗ ಕೊಟ್ಟಿರ್ತಾರೆ. ತುಂಬ ಪ್ರೀತಿಂದ ನೋಡ್ಕಳ್ತಾರೆ. ಅವ್ರಿಗೆ ಯಾವಾಗ್ಲು ನಾನೆ ಬೇಕು. ಹಿಂದೆ , ಇಂದು, ಮುಂದೆಯೂ ಅಷ್ಟೇ. ಸೈನ್ ಹಾಕಕೆ, ಒಂದಕ್ಷರ ಬರ್ಯದಾದ್ರು ಅಷ್ಟೆ, ಅಲ್ಲಿ ನಂಗೆ ಮಾತ್ರ ಅವಕಾಶ . ಅಬ್ಬಾ, ಇಂಥವರ ಒಡನಾಟ ಎಷ್ಟು ಚಂದ ಅಲ್ವಾ. ನಂಗೂ ಅವ್ರುನ್ನ ಬಿಟ್ಟಿರಕೆ ಆಗಲ್ಲ. ಒಂದಿನ ಅವ್ರೇನಾದ್ರು ನನ್ನುನ್ನ ಮುಟ್ಳಿಲ್ಲ ಅಂದ್ರೆ ಏನೋ ಕಳ್ಕೊಂಡoಗೆ ಅನ್ಸುತ್ತೆ.
ಕಲಿಯುವ ಅ ಆ ಇ ಈ ಇಂದ ಹಿಡಿದು ಎಷ್ಟೊಂದು ದೊಡ್ಡ ದೊಡ್ಡ ಗ್ರಂಥಗಳವರೆಗೆ ಏನೇನೆಲ್ಲ ಬರಿತಾರೆ ನನ್ನಿಂದ. ಅಬ್ಬಾ, ನಂಗೆ ಇಷ್ಟೊಂದು ಶಕ್ತಿ ಇದ್ಯಾ ಅಂತ ಎಷ್ಟೋ ಬಾರಿ ನಂಗೂ ಅನ್ಸಿದೆ. ಯಾಕಂದ್ರೆ , ಅವ್ರ ಮನ್ಸಲ್ಲಿ ಮೂಡಿದ್ದುನ್ನ ನನ್ನುನ್ನ ಉಪಯೋಗ್ಸಿ ಬರೀತಾ ಬರೀತಾ ಅವ್ರಿಗೇ ಗೊತ್ತಿಲ್ದಂಗೆ ಅವ್ರ್ ಬರವಣಿಗೆಗೆ ಸಾಥ್ ಕೊಟ್ಟು ಇನ್ನೂ ಹೆಚ್ಚಿನ ಭಾವನೆಗಳು ಬರೋ ಹಾಗೆ ಮಾಡಿದ್ದು ನನ್ನ ಹೆಗ್ಗಳಿಕೆ ಅಂದ್ರೆ ತಪ್ಪಾಗಲ್ಲ.

ಫೋಟೋ ಕೃಪೆ : ಅಂತರ್ಜಾಲ
ಕಾಲ ಎಷ್ಟೇ ಮುಂದುವರೆದ್ರು ಹಲವರಿಗೆ ನಾನಂತು ಬೇಕೇ ಬೇಕು. ದಿನಗಳೆದಂತೆ ಇನ್ನೂ ಹೆಚ್ಚಿನ ಗುಣಮಟ್ಟದಿಂದ ನನಗೆ ಹೆಚ್ಹೆಚ್ಚು ಮೆರುಗು ಬರುತ್ತೆ ಹೊರ್ತು ಸಾವಂತು ಖಂಡಿತಾ ಇಲ್ಲ. ಈ ಮಾತು ಯಾಕೆ ಹೇಳ್ತಿದೀನಿ ಅಂದ್ರೆ, ನಂಜೊತೆಗೇ ಹುಟ್ಟಿರೋ ಎಷ್ಟೋ ವಸ್ತುಗಳು ಇವತ್ತು ಕಣ್ಮರೆಯಾಗಿವೆ . ಅವುಗಳ ಜಾಗವನ್ನು ಹೊಸ ಹೊಸಾ ಆವಿಷ್ಕಾರದಿಂದ ಉಂಟಾದ ವಸ್ತುಗಳು ಆಕ್ರಮಿಸಿವೆ. ಮೊದಲೆಲ್ಲ ಮರದಿಂದ ನನ್ನುನ್ನ ತಯಾರಿಸ್ತಿದ್ರು. ಪ್ರತೀ ಬಾರಿಯೂ ಇಂಕು ತುಂಬಿಸ್ಕೊಂಡು ಉಪಯೋಗಿಸ್ಬೇಕಿತ್ತು. ಈಗ ರೀಫಿಲ್ ಗಳು ಇಂಕು ಚೆಲ್ಲಿ ರಂಪ ಆಗೋದುನ್ನ ತಪ್ಪಿಸಿವೆ. ಅಲ್ಲದೆ ಈಗ ನನ್ನ ಆಕಾರ, ಗಾತ್ರ , ಬಣ್ಣ, ಹೊಳಪು ಎಲ್ಲ ಬದಲಾಗಿದೆ. ಹೀಗೆ ಬೇರೆ ಬೇರೆ ಬಣ್ಣಗಳಲ್ಲಿರುವ ನನ್ನನ್ನು ಬರವಣಿಗೆಯಲ್ಲಿ ಬೇರೆ ಬೇರೆ ಉದ್ದೇಶಕ್ಕೆ ಬಳಸುತ್ತಾರೆ. ನನ್ನ ಆಕಾರ ದಪ್ಪ, ಸಣ್ಣ, ಉದ್ದ, ಗಿಡ್ಡ ಇತ್ಯಾದಿಯಾಗಿ ಬದಲಾಗಿದೆ. ನನ್ನ ಬೆಲೆಯೂ ಈಗ ಐದು ರೂಪಾಯಿಯಿಂದ ಹಿಡಿದು ಸಾವಿರಾರು ರೂಗಳವರೆಗೆ.
ಹಿಂದಿನಿಂದಲೂ ನಾನು ಎಷ್ಟೋ ಸಂಬಂಧಗಳನ್ನು ಬೆಸೆದಿದ್ದೇನೆ. ದೂರದ ಊರಿನಲ್ಲಿರುವ ತಂದೆ-ಮಕ್ಕಳ, ಬಂಧು- ಬಾಂಧವರ ಮನದ ಭಾವನೆಗೆ ಅಕ್ಷರದ ರೂಪ ನೀಡಿದ್ದೇನೆ. ಗಂಡು- ಹೆಣ್ಣುಗಳ ಮಧ್ಯೆ ಹೊಸ ಸಂಬಂಧಕ್ಕೆ ಕಾರಣನಾಗಿದ್ದೇನೆ. ಖುಷಿಯ ವಿಷಯ ಬರೆಯುವಾಗ ನಾನೂ ನಕ್ಕಿದ್ದೇನೆ. ದುಃಖದ ವಿಷಯ ಬರೆಯುವಾಗ ನನಗೂ ಬೇಸರವಾಗಿದೆ. ಪುಸ್ತಕದ ಒಳಗಡೆ ನನ್ನನ್ನು ಇಟ್ಟು ಮುಚ್ಚಿಟ್ಟಾಗ ಅಕ್ಷರಗಳ ಜೊತೆಗೆ ನನಗೆ ಬೆಚ್ಚನೆಯ ಭಾವ. ಬರೆದು ದಣಿದ ನನಗೆ ಆಗ ವಿಶ್ರಾಂತಿಯ ಸಮಯ.
ಕೆಲೌರು ತುಂಬಾ ಗುಂಡ್ಗುಂಡುಗೆ ಬರಿತಾರೆ. ಇನ್ನು ಕೆಲೌರು ಹೇಗೊ ಬರಿತಾರೆ. ಆದ್ರೆ ಬರೆಯುವುದು ಅರ್ಥವಾಗುವಂತಿದ್ದರೆ ಸಾಕು. ಇನ್ನೂ ಒಂದ್ವಿಷ್ಯ ಗೊತ್ತಾ..? ನನ್ನಿಂದ ಬರೆದ ಅಕ್ಷರ ನೋಡಿ ಬರೆದವರ ವ್ಯಕ್ತಿತ್ವ ಹೇಗೆ ಅಂತ ಹೇಳ್ತಾರಂತೆ. ಇನ್ನು ಸ್ಕೂಲು, ಕಾಲೇಜಲ್ಲಿ , ನನ್ನುನ್ನ ಒಬ್ರು ಇಟ್ಕೊಂಡು ಇನ್ನೊಬ್ರತ್ರ ಇರೋ ಪೆನ್ನಿಗೆ ಹೊಡಿತಾರೆ. ಅದೇನೊ ಪೆನ್ ಫೈಟ್ ಅಂತ ಈಗಿನ ಕಾಲದ ಮಕ್ಕಳ ಆಟ ಅಂತೆ. ಇಲ್ಲಿ ದಾಳನು ನಾನೆ, ಕಾಯು ನಾನೆ. ಈ ಮಕ್ಳಿಗೆ ಪಾಠ ಬೋರ್ ಆಯ್ತು ಅಂದ್ರೆ ಅವ್ರ್ ಕೈಯ್ಯಲ್ಲಿ ನಾನ್ ಆಟದ್ ಸಾಮಾನಾಗ್ತಿನಷ್ಟೆ.
ಹಿಂದೆಲ್ಲ ಎಷ್ಟೋ ಜನಕ್ಕೆ ನನ್ನುನ್ನ ತಗೊಳಕಾಗ್ತಿರ್ಲಿಲ್ಲ.
ಬರೀ ನನ್ನ ರೀಫಿಲ್ ಇಟ್ಗೊಂಡು ಬರ್ಯೌರು. ನನ್ನ ಬೆಲೆ ಕೇಳಿ ತಗೊಳಕಾಗ್ದೆ ಎಷ್ಟೋ ಮಕ್ಳು ಸಪ್ಪೆ ಮುಖ ಮಾಡ್ದಾಗ ಅಥ್ವಾ ಬೇರೆಯವ್ರ ಹತ್ರ ಇರೋ ನನ್ನುನ್ ನೋಡಿ ಆಸೆಪಟ್ಟಾಗ, ತಗೊಳಕಾಗ್ದೆ ಇರೋ ಅವ್ರ ಅಸಹಾಯಕತೆ ನೋಡಿ ಯಾಕಾದ್ರು ನನ್ನುನ್ನ ದುಡ್ಡಿಂದ ಅಳಿತಾರೊ ಅನ್ಸಿದ್ದಂತೂ ಸತ್ಯ. ಆದ್ರೆ ನಾನಾದ್ರು ಏನ್ ಮಾಡೋ ಹಾಗಿದ್ದೆ. ಈಗಂತೂ ಎಲ್ಲರೂ ನನ್ನುನ್ನ ಕೊಂಡ್ಕೊಳೋ ಸಾಮರ್ಥ್ಯ ಹೊಂದಿದಾರೆ. ಒಂದ್ವೇಳೆ ಅದು ಕಷ್ಟ ಆದ ಮಕ್ಕಳಿಗೂ ನನ್ನುನ್ನ ಕೊಡೋ ಅಂಥಾ ಉದಾರ ಮನಸ್ಸಿನ ಅನೇಕರಿದ್ದಾರೆ. ಹಾಗಾಗಿ ನಾನೀಗ ಎಲ್ಲರ ಕೈಯ್ಯಲ್ಲೂ ನಲಿದಾಡುತ್ತ ಅವರ ಅಕ್ಷರಕ್ಕೆ ಸಾಕ್ಷಿಯಾಗಿದ್ದೇನೆ.
ಇನ್ನೊಂದ್ ವಿಷ್ಯ ಹೇಳದೆ ಮರ್ತಿದ್ದೆ. ಒಂದ್ವೇಳೆ ನಿಮುಗ್ತಿಳ್ದಂಗೆ ಇನ್ನೂ ಎಲ್ಲಾದ್ರು ಯಾವ್ದಾದ್ರು ಮಕ್ಳು ನನ್ಗೋಸ್ಕರ ಹಪಹಪಿಸ್ತಿದ್ರೆ ಸಹೃದಯರ ಕೃಪಾಕಟಾಕ್ಷದಿಂದ ಆದಷ್ಟು ಬೇಗ, ಕೊನೇ ಪಕ್ಷ ಮಕ್ಕಳ ದಿನಾಚರಣೆ ಹೊತ್ತಿಗಾದ್ರು ನಾನು ಅವ್ರ್ ಕೈ ಸೇರೋ ಹಾಗಾಗ್ಲಿ ಅನ್ನೋದೆ ನನ್ನಾಸೆ. ನಿಮ್ಕೈಲಿ ಏನ್ ಕೊಡಕಾಗುತ್ತೊ , ಬಿಡುತ್ತೊ ನಂಗೊತ್ತಿಲ್ಲ. ಆದ್ರೆ ಬರೆಯುವ ಕೈಗಳಿಗೆ ಅದರಲ್ಲೂ ವಿದ್ಯಾರ್ಥಿಗಳು ಮಾತ್ರ ನನ್ನಿಂದ ವಂಚಿತರಾಗ್ದೆ ಇರೋ ಹಾಗೆ ನೋಡ್ಕೊಳಿ ಅನ್ನೋದೆ ನಿಮ್ಮೆಲ್ಲರಲ್ಲಿ ನನ್ನ ಕಳಕಳಿಯ ಮನವಿ.
ಇನ್ನೊಂದು ಮುಖ್ಯ ವಿಷಯ ಹೇಳ್ತೀನಿ ಕೇಳಿ. ನನಗೆ ನೀವು ಎಷ್ಟು ಹಣ ಕೊಟ್ಟು ಕೊಂಡ್ಕೊಳ್ತೀರಿ ಅನ್ನೋದು ಮುಖ್ಯ ಅಲ್ಲ. ನೀವು ನನ್ನಿಂದ ಏನ್ ಬರೀತೀರಿ ಅನ್ನೋದು ತುಂಬಾ ಮುಖ್ಯ. ನಿಮ್ಮ ಬರವಣಿಗೆ ಯಾವಾಗ್ಲು ಸಮಾಜಮುಖಿಯಾಗಿರ್ಲಿ ಅನ್ನೋದೇ ನನ್ನ ಆಶಯ . ಹಾ,ಇಷ್ಟೊತ್ತು ಬರ್ದೂ ಬರ್ದೂ ನಂಗೂ ಸಾಕಾಯ್ತು. ಇನ್ನೊಂದ್ಸಲ್ಪ ಹೊತ್ತು ವಿಶ್ರಾಂತಿ ಪಡಿತೀನಿ ಆಯ್ತಾ… ಮತ್ತೆ ಸಿಗ್ತೀನಿ… ಇಂತಿ ನಿಮ್ಮ ಪೆನ್ನು.
- ಸುತ್ತ ಮುತ್ತ – ಲೇಖನಗಳ ಸಂಕಲನದಿಂದ
- ಕೃಪೆ : ಸುತ್ತ ಮುತ್ತ ಲೇಖನಗಳ ಸಂಕಲನ
- ಹಿಂದಿನ ಸಂಚಿಕೆಗಳು :
- ಅಂಗೈಯಲ್ಲಿ ಪ್ರಪಂಚ (ಭಾಗ-೧)
- ಅಂಗೈಯಲ್ಲಿ ಪ್ರಪಂಚ (ಭಾಗ-೨)
- ಅಂಗೈಯಲ್ಲಿ ಪ್ರಪಂಚ ‘ಗಂಡು ಮಕ್ಕಳ ಮೇಲೆ ಉಂಟಾಗುವ ಲೈಂಗಿಕ ದೌರ್ಜನ್ಯ’ (ಭಾಗ-೩)
- ಅಂಗೈಯಲ್ಲಿ ಪ್ರಪಂಚ ‘ನಾನು… ನಿಮ್ಮ ದಿಂಬು’ (ಭಾಗ-೪)
- ಅಂಗೈಯಲ್ಲಿ ಪ್ರಪಂಚ ‘ಆಡಿಕೊಳ್ಳುವುದು’ (ಭಾಗ- ೫)
- ಅಂಗೈಯಲ್ಲಿ ಪ್ರಪಂಚ ‘ಕ್ರಿಯೆ ಇದ್ದ ಮೇಲೆ ಪ್ರತಿಕ್ರಿಯೆ’ (ಭಾಗ- ೬)
- ಅಂಗೈಯಲ್ಲಿ ಪ್ರಪಂಚ ‘ಹೈಸ್ಕೂಲ್, ಕಾಲೇಜು ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ವ್ಯಸನ’ (ಭಾಗ- ೭)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ ನಿಮ್ ದಾರಿ’ (ಭಾಗ- ೮)
- ಅಂಗೈಯಲ್ಲಿ ಪ್ರಪಂಚ ‘ಸಾಮಾಜಿಕ ಜವಾಬ್ದಾರಿ’ (ಭಾಗ- ೯)
- ಅಂಗೈಯಲ್ಲಿ ಪ್ರಪಂಚ ‘ಹರೆಯ ಉಕ್ಕಿ’ (ಭಾಗ- ೧೦)
- ಅಂಗೈಯಲ್ಲಿ ಪ್ರಪಂಚ ‘ಏನೇನೋ ಅಂದುಕೊಳ್ಳುವ ಮುನ್ನ’ (ಭಾಗ- ೧೧)
- ಅಂಗೈಯಲ್ಲಿ ಪ್ರಪಂಚ ‘ಮಗುವಿನ ಕಾಳಜಿ ಜೊತೆಗೆ ಜಾಗೃತಿ’ (ಭಾಗ- ೧೨)
- ಅಂಗೈಯಲ್ಲಿ ಪ್ರಪಂಚ ‘ವಯಸ್ಸಾದಂತೆ ಜೀವನ ಒಂದು ಬೋನಸ್ ’(ಭಾಗ- ೧೩)
- ಅಂಗೈಯಲ್ಲಿ ಪ್ರಪಂಚ ‘ವೃದ್ಧಾಶ್ರಮ ’ (ಭಾಗ- ೧೪)
- ಅಂಗೈಯಲ್ಲಿ ಪ್ರಪಂಚ ‘ಮಧ್ಯಮ ವರ್ಗದ ಬದುಕು’ (ಭಾಗ- ೧೫)
- ಅಂಗೈಯಲ್ಲಿ ಪ್ರಪಂಚ ‘ಕಣ್ಣೀರು’ (ಭಾಗ- ೧೬)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ…ನಿಮ್ ಮನೆ’ (ಭಾಗ- ೧೭)
- ಅಂಗೈಯಲ್ಲಿ ಪ್ರಪಂಚ ‘ರಸ್ತೆಯಲ್ಲಿ ವಾಹನದ ಮೇಲಿರಲಿ ಜವಾಬ್ದಾರಿ’ (ಭಾಗ- ೧೮)
- ಅಂಗೈಯಲ್ಲಿ ಪ್ರಪಂಚ ‘ವಿಘ್ನ ಸಂತೋಷಿಗಳುಶ್ರೀಲಕ್ಷ್ಮಿ ಬಹಳ ಮುದ್ದಾದ ಹುಡುಗಿ’ (ಭಾಗ- ೧೯)
- ಅಂಗೈಯಲ್ಲಿ ಪ್ರಪಂಚ ‘ಮನಸ್ಥಿತಿ’ (ಭಾಗ- ೨೦)
- ಅಂಗೈಯಲ್ಲಿ ಪ್ರಪಂಚ ‘ಮೂಡ್ ಇಲ್ಲ’ (ಭಾಗ- ೨೧)
- ಅಂಗೈಯಲ್ಲಿ ಪ್ರಪಂಚ ‘ಭಾವನಾತ್ಮಕ ಸಂಬಂಧ’ (ಭಾಗ- ೨೨)
- ಅಂಗೈಯಲ್ಲಿ ಪ್ರಪಂಚ ‘ನಗುವಿನ ಮಹತ್ವ’ (ಭಾಗ- ೨೩)
- ಅಂಗೈಯಲ್ಲಿ ಪ್ರಪಂಚ ಅಮ್ಮನೆಂಬ ಅಮೃತ (ಭಾಗ- ೨೪)
- ಅಂಗೈಯಲ್ಲಿ ಪ್ರಪಂಚ ‘ಕಾಡುವ ಶಾಪ’ (ಭಾಗ- ೨೬)
- ಅಂಗೈಯಲ್ಲಿ ಪ್ರಪಂಚ ‘ಇರಲಿ ನಿಮ್ಮ ಸ್ಪಂದನೆ’ (ಭಾಗ- ೨೭)
- ಅಂಗೈಯಲ್ಲಿ ಪ್ರಪಂಚ ‘ಬಾಲ್ಯ ಕಸಿಯುವ ಮುನ್ನ’’ (ಭಾಗ- ೨೮)
- ಅಂಗೈಯಲ್ಲಿ ಪ್ರಪಂಚ ‘ಆಯಮ್ಮನೆಂಬ ಅಮ್ಮ’ (ಭಾಗ- ೨೯)
- ಅಂಗೈಯಲ್ಲಿ ಪ್ರಪಂಚ (ಭಾಗ- ೩೦)
- ಅಂಗೈಯಲ್ಲಿ ಪ್ರಪಂಚ ‘ ಬಫೆ ಸಿಸ್ಟಮ್’ (ಭಾಗ- ೩೧)
- ಅಂಗೈಯಲ್ಲಿ ಪ್ರಪಂಚ ‘ ಸ್ನೇಹ ಸಂಬಂಧ’ (ಭಾಗ- ೩೨)
- ಅಂಗೈಯಲ್ಲಿ ಪ್ರಪಂಚ‘ಮಾತನಾಡುವುದೂ ಒಂದು ಕಲೆ’ (ಭಾಗ- ೩೩)
- ಅಂಗೈಯಲ್ಲಿ ಪ್ರಪಂಚ ‘ನೆರೆಹೊರೆಯ ಸಂಬಂಧ’ (ಭಾಗ- ೩೪)
- ಅಂಗೈಯಲ್ಲಿ ಪ್ರಪಂಚ ‘ಅನ್ನದಾತೋ ಸುಖೀಭವ’ (ಭಾಗ- ೩೫)
- ಅಂಗೈಯಲ್ಲಿ ಪ್ರಪಂಚ ‘ಸಂಬಂಧಗಳಲ್ಲಿ ಬಿರುಕು’ (ಭಾಗ- ೩೬)
- ಅಂಗೈಯಲ್ಲಿ ಪ್ರಪಂಚ ‘ನಾನು ಆಸ್ಪತ್ರೆ’ (ಭಾಗ- ೩೮)
- ಅಂಗೈಯಲ್ಲಿ ಪ್ರಪಂಚ ‘ಮಧ್ಯವರ್ತಿಗಳು’ (ಭಾಗ- ೩೯)
- ಅಂಗೈಯಲ್ಲಿ ಪ್ರಪಂಚ ‘ಸಂಬಂಧ’ (ಭಾಗ- ೪೦)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ…ನಿಮ್ ಬೆಂಗ್ಳೂರು’ (ಭಾಗ- ೪೧)
- ಅಂಗೈಯಲ್ಲಿ ಪ್ರಪಂಚ ‘ಮನೆಗೆ ಹೇಳದೆ ಬಂದ ಅತಿಥಿ’ (ಭಾಗ- ೪೩)
- ಅಂಗೈಯಲ್ಲಿ ಪ್ರಪಂಚ ‘ಸಂಬಂಧಗಳಲ್ಲಿ ಸ್ಥಾನಮಾನ’ (ಭಾಗ- ೪೪)
- ಹಿಂದಿನ ಸಂಚಿಕೆಗಳು :
- ಮಂಗಳ ಎಂ ನಾಡಿಗ್ – ಅಂಕಣಕಾರ್ತಿ, ಕವಿಗಳು, ಬೆಂಗಳೂರು.
