ಅಂಗೈಯಲ್ಲಿ ಪ್ರಪಂಚ (ಭಾಗ- ೨೧)

ಎಲ್ಲರೂ ಒಂದಲ್ಲಾ ಒಂದು ಬಾರಿ ನನುಗ್ ಇವಾಗ್ ಮೂಡಿಲ್ಲ, ಆಮೇಲ್ ಮಾಡ್ತೀನಿ, ನಾಳೆ ಮಾಡ್ತೀನಿ ಅಂತಾರಲ್ಲ ಆ ಮೂಡ್ ಅನ್ನೋದು ದುಡ್ಡು ಕೊಟ್ಟು ಪಡೆಯೋದಾ? ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ಮೂಡ್ ಇಲ್ಲ’ ತಪ್ಪದೆ ಮುಂದೆ ಓದಿ…

ಯಾವಾಗ್ ನೋಡಿದ್ರು ಮೊಬೈಲ್ ಹಿಡ್ಕೊಂಡ್ ಸೋಫ್ಹಾದ್ಮೇಲ್ ಬಿದ್ಕೊಂಡಿರ್ತ್ಯಲ ಹೋಗ್ ಓದ್ಕೊ, ಎಕ್ಸಾಮ್ ಹತ್ರ ಬರ್ತಿದೆ ಎಂದು ರಮೇಶ ಮಗ ರಾಮ್ ಗೆ ಹೇಳುತ್ತಿದ್ದರೆ, ಏ, ಇವಾಗ್ ನಂಗ್ ಮೂಡಿಲ್ಲ, ಸುಮ್ನೆ ಗೇಮ್ಸ್ ಆಡಕ್ ಬಿಡು, ನಂಗೊತ್ತು ಓದ್ಕೊಳಕೆ ಎಂದು ಅಪ್ಪನ ಕಡೆ ತಿರುಗಿಯೂ ನೋಡದೆ ಉತ್ತರಿಸಿದ್ದ ರಾಮ್.

ರೀ, ನಾಳೆ ಎಲ್ಲಾದ್ರು ಹೊರ್ಗಡೆ ಹೋಗ್ಬರಣ, ಎಲ್ಲು ಹೋಗ್ದೆ ತುಂಬಾ ದಿನ ಆಯ್ತು ಎಂದು ಸುಧಾ ಹೇಳುತ್ತಿದ್ದರೆ ಸತೀಶ, ನಂಗ್ಮೂಡಿಲ್ಲ, ನೀನ್ಬೇಕಾದ್ರೆ ಹೋಗ್ಬಾ. ನಾನ್ ಅರಾಮಗ್ ಮನೇಲಿರ್ತೀನಿ. ದಿನಾ ಆ ಟ್ರಾಫ್ಹಿಕ್ಕು, ಧೂಳು, ಹೊಗೆ ಸಾಕಾಗ್ಹೋಗಿದೆ ಎಂದಾಗ ಸುಧಾಳ ಮುಖ ಬಾಡಿತ್ತು.

ಫೋಟೋ ಕೃಪೆ : ಅಂತರ್ಜಾಲ

ಇವತ್ತಾದ್ರು ರೂಮಲ್ ಕಿತ್ತ್ಹಾಕಿದ್ ಬಟ್ಟೆಗಳುನ್ನೆಲ್ಲ ಮಡ್ಸಿಟ್ಗ, ರಜ ಇದ್ಯಲ ಎಂದು ವತ್ಸಲಾ ಹೇಳುತ್ತಿದ್ದರೆ ಮಗಳು ಸಾನ್ವಿ ಹೋಗಮ್ಮ, ನಂಗ್ ಮೂಡಿಲ್ಲ , ಸಿಗದೆ ಒಂದ್ ಭಾನ್ವಾರ, ಅರಾಮಾಗಿರಕ್ ಬಿಡು ಎಂದು ಥಟ್ಟನೆ ಹೇಳಿದ್ದಳು. ಆಗ ವತ್ಸಲಾ ಅಯ್ಯೋ, ಈ ಮೂಡ್ ಅನ್ನೋದು ದುಡ್ ಕೊಟ್ರೆ ಸಿಗೋ ಹಂಗಿದ್ರೆ ಅದ್ಕೆ ಅದೆಷ್ಟ್ ದುಡ್ ಖರ್ಚ್ ಮಾಡ್ತಿದ್ವೋ ಏನೋ. ಅದೇನ್, ಏನ್ ಹೇಳಿದ್ರು ಮೂಡಿಲ್ಲ, ಮೂಡಿಲ್ಲ ಅಂತಿರ್ತಿರ, ನಮ್ಗಂತು ಹಿಂಗೆಲ್ಲ ಹೇಳೇ ಗೊತ್ತಿಲ್ಲ ಎನ್ನುವಷ್ಟರಲ್ಲೇ ಹೌದು, ನೀವೆಲ್ಲ ಹೇಳ್ತಿರ್ಲಿಲ್ಲ, ನಾವ್ ಹೇಳ್ತಿವಷ್ಟೇ ಎಂದ ಸಾನ್ವಿಯ ಮಾತು ವತ್ಸಲಾಳಿಗೆ ಒಮ್ಮೆ ಯೋಚಿಸುವಂತೆ ಮಾಡಿತ್ತು . ಹೌದು, ಅವತ್ತು ತಿಂಗಳ ಮೂರು ದಿನದ ರಜೆಯಲ್ಲಿ ವಿಪರೀತ ಸ್ರಾವ, ಕಿಬ್ಬೊಟ್ಟೆ, ಸೊಂಟ ಎಲ್ಲ ನೋವು,ನಿಲ್ಲುವುದಕ್ಕೂ ಕಷ್ಟವಾಗುತ್ತಿತ್ತು . ಆದರೂ ನಡೆಯಲಾಗದ ಅತ್ತೆಯನ್ನು ಕೈಹಿಡಿದು ಬಾತ್ರೂಮಿಗೆ ಕರೆದುಕೊಂಡು ಹೋಗುವುದರಿಂದ ಹಿಡಿದು ಮಧ್ಯಾಹ್ನದ ಊಟಕ್ಕೆ ಮುದ್ದೆ,ರಾತ್ರಿಗೆ ಚಪಾತಿ ಬೇಕೇ ಬೇಕು ಎಂಬ ಅವರ ಅಧಿಕಾರದ ಧೋರಣೆಗೆ ಜೊತೆಗೆ ಗಂಡನಾದವನು ಹೆಂಡತಿಯ ಕಷ್ಟ -ಸುಖ ಕೇಳದೇ ತಾಯಿಗೇ ಒತ್ತಾಸೆಯಾಗಿ ನಿಂತಾಗ ಕಷ್ಟವಾದರೂ ಮಾಡಿ ಬಡಿಸಿದ್ದಳು. ಹೌದು, ಆಗ ನಾನಿದ್ದ ಪರಿಸ್ಥಿತಿಗೆ ಹೋಗಿ ಮಲಗಿದ್ದರೆ ಸಾಕಾಗಿತ್ತು. ಅಡಿಗೆ ಮಾಡುವ ಮನಸ್ಸಂತೂ ಖಂಡಿತಾ ಇರಲಿಲ್ಲ. ಆದರೆ, ಅರ್ಥ ಮಾಡಿಕೊಳ್ಳುವವರು ಯಾರು? ನೆನೆಸಿಕೊಂಡು ವತ್ಸಲಾಳ ಕಣ್ಣಲ್ಲಿ ನೀರು ಜಿನುಗಿತು.

ಎಲ್ಲರೂ ಒಂದಲ್ಲಾ ಒಂದು ಬಾರಿ ನನುಗ್ ಇವಾಗ್ ಮೂಡಿಲ್ಲ, ಆಮೇಲ್ ಮಾಡ್ತೀನಿ, ನಾಳೆ ಮಾಡ್ತೀನಿ ಎಂದು ಕೆಲವು ಕೆಲಸಗಳನ್ನೋ, ಎಲ್ಲಿಗಾದರೂ ಹೋಗುವುದನ್ನೋ ಮುಂದೂಡುವವರೇ. ಇದು ಎಲ್ಲರ ಮನೆಯ ಕಥೆಯೂ ಹೌದು. ಸಮಯ, ಸಂದರ್ಭಗಳು ಬೇರೆಯಷ್ಟೆ. ಪ್ರತಿಯೊಬ್ಬರಿಗೂ ಒಮ್ಮೆಯಾದರೂ ಇವತ್ತು ಯಾಕೋ ನಂಗ್ ಮೂಡಿಲ್ಲ ಅನ್ನಿಸುವುದು ಸಹಜ.

ಕಾರಣಗಳು :

  • ನಿದ್ರಾಹೀನತೆ : ಸರಿಯಾಗಿ ನಿದ್ರೆ ಆಗದಿದ್ದಾಗ ಮರುದಿನ ಯಾವ ಕೆಲಸವನ್ನೂ ಮಾಡಲು ಮನಸ್ಸು ಬರುವುದಿಲ್ಲ.
  • ಆಹಾರ: ಕೆಲವೊಮ್ಮೆ ಆಹಾರ ತಿಂದ ಬಳಿಕ ಹೊಟ್ಟೆಭಾರ ಆಗುವುದರಿಂದ ಸುಮ್ಮನೇ ಹೋಗಿ ಮಲಗಬೇಕೆನಿಸುತ್ತದೆ. ಚಟುವಟಿಕೆಯಿಂದಿರಲು ಸಾಧ್ಯವಾಗುವುದಿಲ್ಲ.
  • ಪರಿಸರ: ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಬರೀ ಋಣಾತ್ಮಕ ಅಂಶಗಳೇ ತುಂಬಿಕೊಂಡಿದ್ದರೆ ನಮಗೂ ಯಾವುದಕ್ಕೂ ಮನಸ್ಸು ಬರುವುದಿಲ್ಲ. ಕುಗ್ಗಿಸುವವರಿದ್ದರಂತೂ ಇನ್ನೂ ಕಷ್ಟ.
  • ಆರೋಗ್ಯ: ಆರೋಗ್ಯ ಸಮಸ್ಯೆಯೂ ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುವುದರಿಂದ ಮಾನಸಿಕವಾಗಿ ಉಲ್ಲಸಿತರಾಗಿರಲು ಸಾಧ್ಯವಾಗುವುದಿಲ್ಲ.
  • ಹವಾಮಾನ: ವಿಪರೀತ ಬಿಸಿಲಿನ ಧಗೆಯಿಂದ ಹೆಚ್ಚಿನ ಆಯಾಸ ಉಂಟಾಗುತ್ತದೆ. ಆಗಲೂ ಏನೂ ಮಾಡುವುದು ಬೇಡ ಎನಿಸಿಬಿಡುತ್ತದೆ. ಇದೇ ರೀತಿ ವಿಪರೀತ ಚಳಿಯಲ್ಲೂ ಬೆಚ್ಚಗೆ ಹೊದೆದು ಮಲಗಲಷ್ಟೇ ಮನಸ್ಸು ಬರುವುದು. ಇನ್ನು ಅತಿಯಾದ ಮಳೆಯಿಂದ ಹೊರಗಿನ ಕೆಲಸಗಳಿಗೆ ಹೊರಡಲು ಮನಸ್ಸು ಬರುವುದಿಲ್ಲ. ಹಾಗಾಗೇ ಎಷ್ಟೋ ಕೆಲಸಗಳು ಉಳಿದು ಬಿಡುತ್ತವೆ.
  • ಒತ್ತಡ: ಬಿಡುವಿಲ್ಲದ ಕೆಲಸ, ಬೇರೆಯವರಿಂದ ಮಾನಸಿಕವಾಗಿ ಉಂಟಾಗುವ ಕಿರುಕುಳ, ಇಲ್ಲಸಲ್ಲದ ಆರೋಪಗಳು, ಅವಮಾನ,ಸೋಲು, ಬೈಗುಳ ಇವೆಲ್ಲವುಗಳಿಂದ ಮನಸ್ಸಿನ ಮೇಲೆ ಒತ್ತಡ ಉಂಟಾಗುತ್ತದೆ. ಆಗ ಬೇರೆ ಯಾವುದಕ್ಕೂ ಮೂಡಿರುವುದಿಲ್ಲ.
  • ಏಕತಾನತೆ: ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಜಗತ್ತಿನಿಂದ ಯಾವಾಗಲೂ ಓದು,ಬರಿ, ಪರೀಕ್ಷೆ ಇಷ್ಟೆ. ಬೇರೆ ಯಾವುದಕ್ಕೂ ಸಮಯವಿರುವುದಿಲ್ಲ. ಇನ್ನು ದುಡಿಯುವವರದ್ದು ಯಾಂತ್ರಿಕ ಬದುಕು. ಬೆಳಿಗ್ಗೆ ಏಳು,ತಯಾರಾಗು, ಕೆಲಸಕ್ಕೆ ಹೋಗು, ಸುಸ್ತಾಗಿ ಬಾ, ಊಟ, ನಿದ್ದೆ , ಇಷ್ಟೆ.

ಫೋಟೋ ಕೃಪೆ : ಅಂತರ್ಜಾಲ

ಪರಿಹಾರ


  • ಮಂಗಳ ಎಂ ನಾಡಿಗ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading