‘ಕಾಶ್ಮೀರ ಫೈಲ್ಸ್’ ಸಿನಿಮಾವನ್ನು ಪ್ರತಿಯೊಬ್ಬ ಭಾರತೀಯರು ತಪ್ಪದೆ ನೋಡಲೇ ಬೇಕು. ಕೇವಲ ಕಾಶ್ಮೀರದ ರಕ್ತಸಿಕ್ತ ಇತಿಹಾಸಕ್ಕಲ್ಲ, ಬದಲಿಗೆ ನಮ್ಮಿಂದ ಮುಚ್ಚಿಡಲಾಗಿದ್ದ ಇತಿಹಾಸದ ಸತ್ಯ ಅರಿಯಲು – ಅನಂತ ನಾರಾಯಣ ಕೋಲಾರ, ಮುಂದೆ ಓದಿ…
ಈ ಸಿನೆಮಾ ನೋಡಿದ ಮೇಲೆ ಕೆಲವು ಗಂಟೆಗಳ ಕಾಲ ಮನಸ್ಸು ಅಕ್ಷರಶಃ ಸ್ತಬ್ಧ!, ಇಡೀ ಸಿನೆಮಾ ಹಾಲ್ ಸ್ತಬ್ಧ, ಎಲ್ಲರ ಕಣ್ಣುಗಳು ಒದ್ದೆ, ಮನಸ್ಸು ವಿಚಿತ್ರವಾದ ನೋವಿನಲ್ಲಿ ಹಿಂಡುತ್ತಿತ್ತು.
ಸಿನೆಮಾ ಮುಗಿದರೂ ಸೀಟು ಬಿಟ್ಟು ಮೇಲೇಳಲೂ ಆಗದಂತಹ ಬಳಲಿಕೆ. ಅಯ್ಯೋ ನಮ್ಮದೇ ದೇಶದ ಕಾಶ್ಮೀರಿ ಪಂಡಿತ್ ರ ಜೊತೆಗೆ ಇದೆಂತಹ ಘನಘೋರ ಅನ್ಯಾಯ ನಡೆದು ಹೋಗಿದೆ ಎಂಬ ಚಡಪಡಿಕೆ. ಅದರ ಜೊತೆಗೆ #JNU ನಂತಹ ಸೋ ಕಾಲ್ಡ್ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ನಮ್ಮ ಯುವ ಜನರನ್ನ ಹೇಗೆಲ್ಲಾ ಬಡಾವಣೆ ಮಾಡಿ ನಮ್ಮ ತಾಯ್ನಾಡಿನ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ ಎಂಬ ಕೋಪ, ಹತಾಶೆ ಹೀಗೇ ಸಾಗುತ್ತಿತ್ತು ಸಿನಿಮಾ.

ಫೋಟೋ ಕೃಪೆ : tfipost
ಅನುಪಮ್ ಖೇರ್ ಅವರ ಅದ್ಭುತ ನಟನೆಯನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳುವ ಸೌಭಾಗ್ಯದ ಜೊತೆಗೆ ಎದೆ ಬಿರಿಯುವ ನೋವು. ಕಾಶ್ಮೀರದಿಂದ ಓಡಿಸಲ್ಪಟ್ಟ ಪಂಡಿತರ ರೆಫ್ಯೂಜಿ ಕ್ಯಾಂಪಿನಲ್ಲಿ ಅನುಪಮ್ ಖೇರ್ ಅವರು ಹಸಿವು ಎಂದ ಮೊಮ್ಮಗನಿಗೆ ತಮ್ಮ ಊಟ ಬಿಟ್ಟು ಹೊರಗೆ ಬಂದು ಡಬ್ಬಿಯಲ್ಲಿದ್ದ ಬಾಕಿಯುಳಿದ ಒಂದೇ ಬಿಸ್ಕೆಟ್ ತಿನ್ನಲು ಪ್ರಯತ್ನಿಸುವ ಸೀನ್ ಇದೆಯಲ್ಲಾ… ಅಬ್ಬಾ… ಇದನ್ನು ಬರೆಯುವಾಗಲೂ ಕಣ್ಣುಗಳು ಮಂಜಾಗುತ್ತಿವೆ.
ಈ ಸೀನ್ ನಡೆಯುವಾಗ ಬ್ಯಾಕ್ ಗ್ರೌಂಡ್ ನಲ್ಲಿ ತಾಯ್ನೆಲ ತೊರೆದ ಹೆಣ್ಮಗಳೊಬ್ಬಳು ಮತ್ತೆ ಹುಟ್ಟಿದ ಮಣ್ಣಿಗೆ ಹೋಗುವ ಬಯಕೆಯನ್ನು ಗದ್ಗದ ಕಂಠದಲ್ಲಿ ಹಾಡುತ್ತಾ ಹಾಗೇ ಸಾಯುವ ದೃಶ್ಯವಿದೆಯಲ್ಲಾ… ಅಬ್ಬಾ ಮೈ ಜುಂ ಎನಿಸುತ್ತದೆ. ಹಾಗೇ ನಮ್ಮ ದೇಶದ ಸ್ವರ್ಗವನ್ನು ಹಾಳು ಮಾಡಿದ್ದರ ಬಗ್ಗೆ ಸಿನೆಮಾದ ಕೊನೆಯಲ್ಲಿರುವ ಸ್ಪೀಚ್ ಕೂಡಾ ಮನಸ್ಸಿಗೆ ಮುಟ್ಟುವಂತಿದೆ. ಈ ಎರಡು ಸೀನ್ ಗಾಗಿ ಮತ್ತೊಮ್ಮೆ ಸಿನೆಮಾ ನೋಡುತ್ತೇನೆ.

Hats off to the entire crew of the movie, especially to the director of the movie Vivek Agnihotri thanks and proud of you to be brave enough to make such movie. One should have super guts to make and act in this movie!!!!
ಎಲ್ಲರೂ ನೋಡಲೇಬೇಕಾದ ಸಿನೆಮಾ.. ಕೇವಲ ಕಾಶ್ಮೀರದ. ರಕ್ತಸಿಕ್ತ ಇತಿಹಾಸಕ್ಕಲ್ಲ.. ಬದಲಿಗೆ ನಮ್ಮಿಂದ ಮುಚ್ಚಿಡಲಾಗಿದ್ದ ಇತಿಹಾಸದ ಸತ್ಯಗಳನ್ನು ತಿಳಿದುಕೊಳ್ಳಲು ಮತ್ತು ಭವಿಷ್ಯವನ್ನು ಉತ್ತಮವಾಗಿ ಕಟ್ಟಿಕೊಳ್ಳಲು. ಹಿಂದಿನದ್ದು ಸರಿಯಾಗಿ ತಿಳಿದಿದ್ದರೇ ತಾನೇ ಮುಂದಿನದ್ದು ನೆಟ್ಟಗಿರುವುದು.
- ಅನಂತ ನಾರಾಯಣ ಕೋಲಾರ
