ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವುದಕ್ಕೆ ಲೇಖಕರು ಅನಂತ ನಾರಾಯಣ ಕೋಲಾರ ಅವರು ನಾಲ್ಕು ಸಾಲಿನ ಸಣ್ಣ ಕತೆಯಲ್ಲಿ ಸುಂದರವಾಗಿ ವರ್ಣಿಸಿದ್ದಾರೆ, ತಪ್ಪದೆ ಓದಿ, ನಿಮ್ಮ ಅನುಭವವನ್ನು ಹಂಚಿಕೊಳ್ಳಿ, ಮುಂದೆ ಓದಿ…
ಬಜಾರದಲ್ಲಿ ದ್ರಾಕ್ಷಿ ಖರೀದಿಸಲಿಕ್ಕೆ ಹೋಗಿದ್ದೆ, ಒಂದು ಕಿಲೋ ಗೆ ₹80/- ಇತ್ತು!! ಪಕ್ಕದಲ್ಲಿಯೇ ಇದ್ದ ಇನ್ನೊಬ್ಬ ಮಾರುವಾತನಿಗೆ ಕೇಳಿದರೆ ₹30/-!!! ಯಾಕೆ ಈ ಕಡಿಮೆ ದರ ? ಏಕೆಂದರೆ ಕಡಿಮೆ ದರದವನ ಬಳಿ ಇದ್ದದ್ದು ಗೊಂಚಲಿನಿಂದ ಉದುರಿದ ದ್ರಾಕ್ಷಿಗಳು. ಇದೇ ಪರಿಸ್ಥಿತಿ ಬಾಳೆ ಹಣ್ಣಿ ನದೂ ಆಗಿತ್ತು!!! ಎಲ್ಲ ಒಂದೇ ತೆರನಾದ ಅಷ್ಟೇ ರುಚಿಯಾದ ಹಣ್ಣುಗಳು, ಆದರೆ ಬೆಲೆ ಬೇರೆ ಬೇರೆ.
ನಾವು ನಮ್ಮ ಪರಿವಾರ, ಬಂಧು, ಬಳಗ, ಗೆಳೆಯರೊಂದಿಗೆ ಹಣ್ಣಿನ ಗೊಂಚಲಿನಂತೆ ಒಂದಾಗಿ ಇದ್ದರೆ ಸಮಾಜದಲ್ಲಿ ಹೆಚ್ಚು ಬೆಲೆ !!! ಇಲ್ಲದಿದ್ದರೆ ಮಾತನಾಡಿಸುವದಿರಲಿ ಹೊರಳಿ ನೋಡುವವರೂ ಇರುವದಿಲ್ಲ!!!! ಇಂದಿನ ಬದುಕಿಗೆ ಎಷ್ಟು ಸೂಕ್ತ ಈ ಪಾಠ !!!!!
- ಅನಂತ ನಾರಾಯಣ ಕೋಲಾರ
