ಅಜ್ಜ ಹೇಳಿದ ಕತೆ – ಪ್ರೊ.ರೂಪೇಶ್ ಪುತ್ತೂರು



ಪ್ರೊ.ರೂಪೇಶ್ ಪುತ್ತೂರು ಅವರು ಜೀವನಕ್ಕೆ ಸ್ಫೂರ್ತಿ ನೀಡುವಂತ ಕತೆಗಾರರು, ಅವರ ಕತೆಗಳು ಓದುವುದು ಓದುಗನಿಗೆ ಖುಷಿ ಕೊಡುವುದಷ್ಟೇ ಅಲ್ಲ, ಒಂದು ನೀತಿ ಪಾಠವನ್ನು ಹೇಳಿಕೊಡುತ್ತದೆ, ಅವರ ಅಜ್ಜ ಹೇಳಿದ ಕತೆಯನ್ನು ಅರ್ಥೈಸಿಕೊಂಡರೆ ಜೀವನ ಸುಖಮಯ, ಮುಂದೆ ಓದಿ…

ಅಂತರ್ಜಾಲದಲ್ಲಿ, ವಾಟ್ಸಾಪ್ ಶುರುವಾದ ಸಂದರ್ಭದಲ್ಲಿ, ನನಗೆ ಬೆಳಗಿನ ಶುಭ ಸಂದೇಶ ಕಳುಹಿಸುವವರ ಸಂಖ್ಯೆ ಮೊದಲು ಕಮ್ಮಿ ಇತ್ತು. ನಂತರದ ದಿನಗಳಲ್ಲಿ ಜಾಸ್ತಿ ಆಗತೊಡಗಿತು. ಮೊದ ಮೊದಲು ಎಲ್ಲರಿಗೂ ಪ್ರತಿಕ್ರೀಯೆ ಕೊಡುತ್ತಿದ್ದೆ, ನಂತರ ಅಸಾಧ್ಯವಾಗತೊಡಗಿತು.

ಪ್ರತಿಕ್ರೀಯೆ ಸಿಗದ ಕೆಲವರು ಕರೆ ಮಾಡಿ ಜರೆಯ ತೊಡಗಿದರು. ಅವರಿಗೆ ನನ್ನ ಅಸಹಾಯಕತೆ ವ್ಯಕ್ತ ಪಡಿಸಿದೆ. ಕೆಲವರು ಅರ್ಥಮಾಡಿಕೊಂಡರು, ಇನ್ನು ಕೆಲವರು ಬ್ಲಾಕ್ ಮಾಡಿದರು, ಮತ್ತು ಕೆಲವರು ಸಂಬಂಧವೇ ಕಳ್ಚಿದ್ರು.

ಆದರೆ ಯಾವುದೇ ತಕರಾರಿಲ್ಲದೆ , ಅಂದಿನಿಂದ ಇಂದಿನವರೆಗೆ, ನನ್ನ ಮರುತ್ತರ ಇಲ್ಲದಿದ್ದರೂ, ಪ್ರತೀದಿನ ಸಂದೇಶ ಕಳುಹಿಸುವವರು ಈಗಲೂ ಇದ್ದಾರೆ. ಅವರಿಂದ ಕಲಿಯಬೇಕಾದುದು ಮತ್ತೊಬ್ಬರನ್ನು ಅರ್ಥ ಮಾಡಿಕೊಳ್ಳುವ ಮೌಲ್ಯ.

ಅಪ್ಪ ಹೇಳಿದ ಒಂದು ಕಥೆ ನೆನಪಾಯಿತು.

ಫೋಟೋ ಕೃಪೆ : DNA India

ಒಂದೂರಲ್ಲಿ ಒಬ್ಬ ವೈದ್ಯನಿದ್ದ, ಅವನನ್ನು ಕಾಣಲು ರೋಗಿಗಳು ಸೂರ್ಯೋದಯದ ಮೊದಲೇ ಸರದಿಯ ಸಾಲಿನಲ್ಲಿ ನಿಲ್ಲುತ್ತಿದ್ದರು. ಒಂದು ದಿನ ಒಬ್ಬ 90+ಹರಯದ ಮುದುಮುದುಕ ಬೆಳ್ಳಂಬೆಳಗ್ಗೆ ಸುಮಾರು 5.00ಗಂಟೆಗೆ ವೈದ್ಯರ ಮನೆಯ ಮುಂದೆ ಬಂದು ನೋಡಿದಾಗ, ದೊಡ್ಡ ಸಾಲು ಕಂಡಿತು. ನಿಂತರೆ ಸುಮಾರು 11 ಗಂಟೆಗೆ ಮರಳಬಹುದು ಎಂದು ತನ್ನೊಳಗೆ ಇಂಗಿತವಿಟ್ಟ.
ತುಂಬಾ ವೇದನೆಯ‌ಮನಸ್ಸಿನೊಂದಿಗೆ, ಸರದಿಯ ಸಾಲಿನಲ್ಲಿ ನಿಂತವರಲ್ಲಿ “ಮಹಾನುಭಾವರೇ, ನನ್ನ ವೈದ್ಯರನ್ನು ಕಾಣಲು ದಯವಿಟ್ಟು ಮೊದಲು ಅವಕಾಶ ಕೊಡಿ, ನನಗೆ ಮನೆಗೆ ಮರಳಿ ಮಡದಿಯೊಂದಿಗೆ #ಜಾವತಿಂಡಿ ( ಬೆಳಗಿನ ತಿಂಡಿ/breakfast) ತಿನ್ನಬೇಕು.”

ಈ ಮುದಿ ವಯಸ್ಸಿನಲ್ಲಿ ಮುದುಕನ ಆಸೆ ನೋಡಿ, ಎಲ್ಲರೂ ಪುಸಕ್ ಎಂದು ನಗ ತೊಡಗಿದರು. ” ಈ ಪ್ರಾಯದಲ್ಲೂ ಎನಿತು ಪ್ರಣಯ” ಎನ್ನುತ್ತಾ ಸಾಲಿನಲ್ಲಿದ್ದ ಜನರು ಗುಸುಗುಸು ನುಡಿದರು.
ಆದರೆ ಅವರ ಸ್ಥಿತಿ ನೋಡಿ ,, ಸಾಲಿನಲ್ಲಿದ್ದ ಜನರು, ಅವರ ಇಚ್ಛೆಗೆ ಅನುವು ಮಾಡಿದರು.

ಫೋಟೋ ಕೃಪೆ : huffpost

ವೈದ್ಯರನ್ನು ಕಂಡಾಗ ಅವರು, ಕೊನೆಯ ರೋಗಿಯನ್ನು ನೋಡಿ, ಹೊರಗೆ ಬಂದು, ಕೈ‌ತೊಳೆದು ಸಾವಧಾನ ಕೊಠಡಿಯೊಳಗೆ ಬರುತ್ತಿದ್ದರು. ಅವರಲ್ಲಿ ಕೈ ಜೋಡಿಸುತ್ತಾ ಮುದುಕನೆಂದ
” ಸ್ವಾಮೀ,… ನನ್ನನ್ನು ಬೇಗ ಪರಿಶೋಧಿಸಿ ಕಳುಹಿಸಬೇಕು. ಕಾರಣ ನನಗೆ ಬೇಗ ಮನೆಗೆ ಮರಳಿ ಮಡದಿಯೊಂದಿಗೆ ಜಾವತಿಂಡಿ ಸೇವಿಸಬೇಕು”.

ವೈದ್ಯರು, ನಗು ತಡೆಯಲಾಗದೆ ತನ್ನ ಕುರ್ಚಿಯನ್ನು ಹಿಡಿಯುತ್ತಾ ಕುಳಿತುಕೊಂಡರು. ” ಅಲ್ಲಾ ಹಿರಿಯರೇ… ಎಲ್ಲಾ ದಿನ ಹೆಂಡತಿಯೊಂದಿಗೆ ತಿನ್ನಲ್ಲವೇ? ಈವತ್ತು ಒಂದು ದಿನ ಹೆಂಡತಿಯೊಂದಿಗೆ ತಿನ್ನದಿದ್ದರೆ ಏನು ಸಮಸ್ಯೆಯಾಗುವುದು?”

ಫೋಟೋ ಕೃಪೆ : westend61

ಮುದುಕ ” ಹಲವು ವರುಷದಿಂದ ನನ್ನ ಮಡದಿಗೆ ಅಲ್ಜಿಮರ್ಸ್ (alzheimer’s /ಯಾರನ್ನೂ ಗುರುತು ಹಿಡಿಯಲಾಗದ/ಶೂನ್ಯ ನೆನಪು) ಕಾಯಿಲೆ. ನನ್ನ ಕಂಡರೂ ಅವಳಿಗೆ ಯಾರೆಂದು ಗೊತ್ತಿಲ್ಲ”

ವೈದ್ಯರು ಸ್ವಲ್ಪ ಹೊತ್ತು ಸುಮ್ಮನಾಗಿ ” ನಿಮ್ಮನ್ನು ಕಂಡರೂ ಗುರುತು ಹಿಡಿಯ ಬಲ್ಲವರಲ್ಲ ಅಲ್ಲವೇ? ಯಾರಾದರೂ ತಿನ್ನಿಸಲಿ, ಯಾರೊಡನೆಯಾದರೂ ತಿನ್ನಲಿ ಅದಕ್ಕೇನು? ಗುರುತು ಹಿಡಿಯಲಾಗದ ಅವರೊಂದಿಗೆ ನೀವೇ ತಿಂಡಿ ತಿನ್ನಬೇಕೆಂಬ ಹಠ ನಿಮಗ್ಯಾಕೆ?”



ಮುದುಕ ನಮಸ್ಕರಿಸುತ್ತಾ ಹೇಳುತ್ತಾನೆ ” ನನ್ನ ಹೆಂಡತಿಗೆ ನನ್ನ, ಗುರುತು ಸಿಗದಿದ್ದರೂ , ನನಗೆ ನನ್ನ ಹೆಂಡತಿಯ ಗುರುತು ಇದೆ. ಅವಳಿಗೆ ಅವಳ ಗಂಡನ ಪರಿಚಯ ಸಿಗದಿದ್ದರೂ, ಇಲ್ಲಿಯ ತನಕ ನಾನು ನನ್ನ ಹೆಂಡತಿಯೆಂದು ಪರಿಚಾರಿಸಿ ಕೊಳ್ಳುತ್ತಿದ್ದೇನೆ.”

ಹೀಗೆ ಈ ಮುದುಕನಂತೆ , ಕೆಲವರು ನಾವರಿಯದೆ ನಮ್ಮನ್ನು ಪ್ರೀತಿಸುವವರು ಇದ್ದಾರೆ. ಅಂತಹವರ ಮಧ್ಯೆ ಅಲ್ಜಿಮರ್ಸ್ ಕಾಯಿಲೆಯಿರುವ….

ನಿಮ್ಮವ ನಲ್ಲ

*ರೂಪು*


  • ಪ್ರೊ.ರೂಪೇಶ್ ಪುತ್ತೂರು  (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು)

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW