ಪಂಢರಪುರ ದ್ವಾರಕಾಧೀಶ ಸನ್ನಿಧಿ



ಪಂಢರಪುರಕ್ಕೆ ಹೋದರೆ,ಶ್ರೀ ವಿಠ್ಠಲನ ದರ್ಶನದೊಂದಿಗೆ ಈ ಶ್ರೀ #ದ್ವಾರಕಾಧೀಶನ ಮಂದಿರಕ್ಕೆ ಭೇಟಿ ನೀಡಿರಿ. ಇದು ತನ್ನದೇಯಾದ ವಿಶಿಷ್ಟ ವಾಸ್ತುಶೈಲಿಯಿಂದ ಎಲ್ಲರ ಗಮನ ಸೆಳೆಯುವ ಹಳೆಯ ದೇವಾಲಯವಾಗಿದೆ. – ರಾಜಶೇಖರ ಎಸ್.ಬಿರಾದಾರ, ಮುಂದೆ ಓದಿ…

ಇದರ ಚರಿತ್ರೆಯನ್ನು ಗಮನಿಸಿದಾಗ, ಹಲವು ರೋಚಕ ಸಂಗತಿಗಳು ಅರಿವಿಗೆ ಬರುತ್ತವೆ. ಆಗ ಈ ರಾಷ್ಟ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ ಧೀಮಂತ ರಾಜಮನೆತನಗಳಲ್ಲಿ ಉತ್ತರ ಭಾರತದ “ಗ್ವಾಲಿಯರ್ ಸಿಂಧೆ ಸಂಸ್ಥಾನವು ಒಂದು.ಈಗ ಪಂಢರಪುರದಲ್ಲಿರುವ ಶ್ರೀ ದ್ವಾರಕಾಧೀಶ ಮಂದಿರವು “ಸಿಂಧೆ” ಮಹಾರಾಜರ ಸುಪರ್ದಿಗೆ ಒಳಪಟ್ಟ ದೇವಾಲಯವಾಗಿದೆ.

ಫೋಟೋ ಕೃಪೆ : yatra dairy

ಅದು “ಚಂದ್ರಭಾಗಾ” ನದಿಯಿಂದ ಸ್ನಾನ ಮಾಡಿಕೊಂಡು “ಶ್ರಿ ವಿಠ್ಠಲ”ನ ದರ್ಶನಕ್ಕೆ ಬರುವಾಗ ನದಿಯ ತೀರದಲ್ಲಿಯೇ ಎಡಗಡೆ ” ಶ್ರೀ ದ್ವಾರಕಾಧೀಶ”ನ ಮಂದಿರವಿದೆ. ಈ ದೇವಳದ ಮೇಲೆಯೇ ಇದು “ಗ್ವಾಲಿಯರ್ (“ಸಿಂಧೆ ಸರ್ಕಾರ ಟ್ರಸ್ಟ್”) ಮಹಾರಾಜರ ಸ್ವಾಧೀನಕೊಳಪಟ್ಟಿದೆ” ಎಂದು ಬೋರ್ಡ ಇದೆ. ಅಲ್ಲದೇ,ಒಳಗಡೆ ದೇವಾಲಯದ ಪ್ರಾಂಗಣದ ಗೋಡೆಗಳ ಮೇಲೆ ಗ್ವಾಲಿಯರ್ ಅರಸೊತ್ತಿಗೆಯ ಹಿಂದಿನ ತಲೆಮಾರುಗಳ ಮಹಾರಾಜರ ಭಾವಚಿತ್ರಗಳು ನೇತು ಹಾಕಿದ್ದಾರೆ.

ಫೋಟೋ ಕೃಪೆ : yatra dairy

ಇವರ ಇತಿಹಾಸ ನೋಡುತ್ತಾ ಹೋದಾಗ ಇವರು ಮೂಲತ: ಮಹಾರಾಷ್ಟ್ರದವರು ಹಾಗೂ ಮರಾಠಿಗರು. ಇವರು ಸ್ವ-ಪರಿಶ್ರಮದಿಂದ ಮಧ್ಯಪ್ರದೇಶದಲ್ಲಿ ತಮ್ಮದೆ ಆದ “ಸಿಂಧೆ ರಾಜಮನೆತನ”ವನ್ನು ಸಂಸ್ಥಾಪಿಸಿ ಸ್ವಾತಂತ್ರ್ಯ ಭಾರತದೊಳಗೆ ಸಂಸ್ಥಾನಗಳು ವಿಲೀನವಾಗುವವರೆಗೂ ಆಳ್ವಿಕೆ ನಡೆಸಿದರು.ಈ “ದ್ವಾರಕಾಧೀಶ ಮಂದಿರ” ಬೃಹತ್ತಾದ ಕಟ್ಟಡವನ್ನು ಹೊಂದಿದೆ. ಒಳಗಡೆ ವಿಶಾಲವಾದ ಪ್ರಾಂಗಣವಿದೆ. ಸುಂದರವಾದ ಶ್ರೀ ಕೃಷ್ಣನ ಮೂರ್ತಿ ಭಕ್ತಾಧಿಗಳನ್ನು ಕೈ ಬೀಸಿ ಕರೆಯುವಂತಿದೆ. ತಾವು ಯಾರಾದರು ಪಂಢರಪುರ ದರ್ಶನಕ್ಕೆ ಹೋದರೆ ನೋಡಿ ಬರಬಹುದಾಗಿದೆ. ಅಲ್ಲದೇ ಇನ್ನು ಹೆಚ್ಚಿನ ಐತಿಹಾಸಿಕ ಮಾಹಿತಿ ಸಂಗ್ರಹಿಸಬಹುದಾಗಿದೆ.


  • ರಾಜಶೇಖರ ಎಸ್.ಬಿರಾದಾರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading