ಅದೆಷ್ಟೊ ಮಕ್ಕಳು ಹಸಿವಿನಿಂದಲಿ ಬಳಲುತ್ತಿವೆ ಸಾಕಿನ್ನೂ ಈ ಯುದ್ಧ, ಸಾಕಿನ್ನೂ ಈ ಹಿಂಸೆ….ಮುಂದೆ ಓದಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಬಂದ ಬಂದ ಕವಿತೆ ಸಾಲುಗಳು…
ಮೊಳಗಿಹುದು ಕಹಳೆ #ಯುದ್ದೋನ್ಮಾದ ಸದ್ದು
ಜನಜೀವನವು ನೋವಲಿ ಚೀತ್ಕರಿಸುತಿದೆ ಬಿದ್ದು
ಸಿಡಿಗುಂಡು ಸಿಡಿದು ಧರೆಗುರುಳಿವೆ ಕಟ್ಟಡಗಳು
ಅಟ್ಟಹಾಸದಿ ನಗುತಲಿದೆ ಅಮಾನವೀಯತೆ ಎದ್ದು
ಸಾಮಾನ್ಯರ ಬದುಕು ಮೂರಬಟ್ಟೆ ಆಗಿಹುದು
ಸೈನಿಕರ ಶವಗಳ ಕಂಡು ಬೀಗುತಿಹರು ಗೆದ್ದು
ಪ್ರಾಣಿಗಳ ವೇದನೆಯು ಮುಗಿಲು ಮುಟ್ಟಿಹುದು
ಹೃದಯವು ಮಡುಗಟ್ಟಿಹುದು ರೋಧಿಸುತ ಕುದ್ದು
ಎಲ್ಲೆಡೆಯು ಚೆಲ್ಲಾಡಿ ತುಪಾಕಿಗಳೆ ಭೋರ್ಗರೆದಿವೆ
ವಿಚಿತ್ರ ರಕ್ತದಾಹಕ್ಕೆ ಅಬ್ಬರಿಸಿದೆ ಲೋಹದ ಹದ್ದು
ರಣಾರ್ಭಟಕ್ಕೆ ಜನರು ಜರಿದಿಹರು ದುರುಳರನ್ನು
ಮೆಳ್ಳಗಣ್ಣಿನಲಿ ಹಲವರು ನೋಡುತಿಹರು #ಕದ್ದು
ಅದೆಷ್ಟೊ ಮಕ್ಕಳು ಹಸಿವಿನಿಂದಲಿ ಬಳಲಿವೆಯಂತೆ
ಭೀಭತ್ಸ ಘಟನೆಗಿರಲಿ ಚೆನ್ನನ ಮಾತಿನ ಗುದ್ದು
- ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು
