‘ಕರ್ಮಯೋಗಿ’ ಕವನ – ಚನ್ನಕೇಶವ ಜಿ ಲಾಳನಕಟ್ಟೆ



”ಕಾಯಕ ಯೋಗಿ ಜಗದೊಳು ಭೋಗಿ”…ಸುಂದರ ಸಾಲುಗಳು ಚನ್ನಕೇಶವ ಜಿ ಲಾಳನಕಟ್ಟೆ ಅವರು ಬರೆದಿರುವ ಕಾಯಕ ಯೋಗಿ ಕವನ ಓದುಗರ ಮುಂದಿದೆ, ಓದಿ…

ಊರುಗಳಲೆದು ಕೇರಿಗಳಿಳಿದು
ಸುತ್ತಿ ದುಡಿಯುವೆನು
ಸುಡುವ ನೆತ್ತಿ ಹೊಟ್ಟೆಗೆ #ಬುತ್ತಿ
ಕೂಗುತ ನಡೆಯುವೆನು

ಬಗೆಬಗೆ ವಸ್ತು ಮನೆಬಳಿ ಕೊಳ್ಳಿ
ಎನ್ನುತ ಸಾರುವೆನು
ಎಲ್ಲರಿಗೆಟಕುವ ದರವನು ಮಾಡಿ
ನಗೆಯನು ಬೀರುವೆನು

ಓಡುವ ಗಾಡಿ #ಮೈಕನು ಕಟ್ಟಿ
ಕೂಗುತ ಕರೆಯುವೆನು
ಚೌಕಸಿ ಮಾಡಿ ಹಾಸ್ಯವ ಮಾಡಿ
ಜನರಲಿ ಬೆರೆಯುವೆನು

#ಕಾಯಕ_ಯೋಗಿ ಜಗದೊಳು ಭೋಗಿ
ಎನ್ನುತ ಹಾಡುವೆನು
ದಿನವಿಡಿ ದುಡಿದು ದಣಿಯದೆ ಮಿಡಿದು
ನಾಳೆಯ ನೆನೆಯುವೆನು.


  • ಚನ್ನಕೇಶವ ಜಿ ಲಾಳನಕಟ್ಟೆ  (ಕವಿಗಳು, ಲೇಖಕರು) ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading