‘ಹೆಣ್ಣಿನ ನೋವು’ ಕವನ – ಚನ್ನಕೇಶವ ಜಿ ಲಾಳನಕಟ್ಟೆ



ಸಾವಿರ ಕನಸು ಕಾಣುವ ಹೊತ್ತಲಿ…ನೀರಿನ ಸೆಲೆಯು … ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಸುಂದರ ಕವನ ಓದುಗರಿಗಾಗಿ, ಮುಂದೆ ಓದಿ….

ಸೀರೆಯ ಸೆರಗಲಿ ಕಣ್ಣೀರ ಧಾರೆಯು
ಹೆಣ್ಣಿನ ಬಾಳಿಗೆ ಶಾಪವು
ಕೋಡಿಯಾಗಿಹುದು ನೋವಿನ ನೆತ್ತರು
ಕನಸಲು ಕಾಣುವ ಕೂಪವು

ಹೆಣ್ಣಿನಾಳದಲಿ ಭಾವದೋಕುಳಿಯು
ದುಃಖದ ಬೀಜವ ಬಿತ್ತಿದೆ
ಮೇಕೆಯ ಬಾಯಿಗೆ ಚಿಗುರಲೆ ಸಿಕ್ಕರೆ
ಬೆಳೆಯುವ ಮುನ್ನವೆ ಬತ್ತಿದೆ

ಆಸೆಯ ಪರಿದಿಯು ಕಾಣದೆ ಸೊರಗುತ
ನೋವಿನ ಆಳದಿ ಹುದುಗಿದೆ
ಕಾಣದೆ ಕಂಡವು ಅಬಲೆಯ ಬಾಳಲಿ
ಶಪಿಸುತ ಮನವನೆ ಕದಡಿದೆ

ಸಾವಿರ ಕನಸು ಕಾಣುವ ಹೊತ್ತಲಿ
ನೀರಿನ ಸೆಲೆಯು ಉಕ್ಕಲಿ
ಜನುಮವ ನೀಡುವ ಪ್ರಕೃತಿ ಮಾತೆಯು
ಹಸಿರನು ಉಸಿರಲಿ ತುಂಬಲಿ.


  • ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading