ಲೇಖಕರು ರಾಜಶೇಖರ ಎಸ್.ಬಿರಾದಾರ ಅವರು ಮೂರು ವರ್ಷಗಳ ಹಿಂದೆ ಶೈವ ಕ್ಷೇತ್ರ ಶ್ರೀಶೈಲಕ್ಕೆ ಪಾದಯಾತ್ರೆ ಹೋಗಿದ್ದ ಸಂದರ್ಭದಲ್ಲಿ ತಗೆದಂತಹ ಫೋಟೋಗಳನ್ನು ಓದುಗರೊಂದಿಗೆ ಹಂಚಿಕೊಡಿದ್ದಾರೆ, ಮುಂದೆ ಓದಿ…
ಈ ಅಕ್ಕಮಹಾದೇವಿ ಗುಹೆಗಳು ನಲ್ಲಮಲೈ ಬೆಟ್ಟಗಳ ಶ್ರೇಣಿಯಲ್ಲಿವೆ. ಇಲ್ಲಿ ಹೋಗಬೇಕಾದರೆ ಕೃಷ್ಣಾ ನದಿಯನ್ನು ದಾಟಲೇಬೇಕು.ಅದು ಅನಿವಾರ್ಯವು ಕೂಡಾ. ಈ ಸ್ಥಳ ಪಾತಾಳಗಂಗೆಯಿಂದ ಸುಮಾರು ಹತ್ತು ಕಿ.ಮೀ.ದೂರದಲ್ಲಿದೆ. ಅಂದು 12 ನೇಯ ಶತಮಾನದ ಮಹಾ ಶಿವಶರಣೆ ಅಕ್ಕಮಹಾದೇವಿ ಈ ಗುಹೆಗಳಲ್ಲಿ ತಪಸ್ಸು ಮಾಡುತ್ತಿದ್ದಳಂತೆ. ಹೀಗಾಗಿ, ಈ ಗುಹೆಗಳಿಗೆ “ಅಕ್ಕನ ಗುಹೆ” ಎಂಬ ಹೆಸರು ಬಂದಿದೆ ಎನ್ನಲಾಗುತ್ತಿದೆ. ಈ ಗುಹೆಗಳು ನೈಸರ್ಗಿಕವಾಗಿ ರೂಪುಗೊಂಡಿವೆ.
ಮುಖ್ಯ ಗುಹೆಯು ಪ್ರಾಕೃತಿಕವಾಗಿ ರೂಪುಗೊಂಡ ಬೃಹತ್ತಾದ ಕಮಾನನ್ನು ಹೊಂದಿದೆ. ಇದಕ್ಕೆ ಯಾವುದೇ ಆಧಾರ ಸ್ತಂಭಗಳಿಲ್ಲ. ((ಅಂದಾಜು 200×16×4 ಫೀಟ್ ಅಳತೆಯದಾಗಿದೆ.) ಅಖಂಡವಾಗಿ ನಿಂತ ಈ ದೊಡ್ಡ ಕಮಾನು ಅಕ್ಕನ ಭಕ್ತರನ್ನು ಸ್ವಾಗತಿಸುತ್ತದೆ. ಗುಹೆಯ ಒಳಗೆ ಪ್ರಕೃತಿದತ್ತವಾಗಿ ಉದ್ಭವಗೊಂಡ ಶಿವಲಿಂಗವಿದೆ. ಶಿವಮೊಗ್ಗಾ ಜಿಲ್ಲೆಯ ಶಿಕಾರಿಪುರ ಸಮೀಪವಿರುವ ಉಡುತಡಿಯಿಂದ ಬೀದರ್ ಜಿಲ್ಲೆಯ ಬಸವಕಲ್ಯಾಣದ ಮಾರ್ಗವಾಗಿ ಅಂದು ಶ್ರೀಶೈಲವನ್ನು ಅಕ್ಕ ತಲುಪಿದ್ದಳು. ಆದರೆ ಇಪ್ಪತೊಂದನೆಯ ಶತಮಾನದಲ್ಲಿರುವ ನಮಗೆ ಅದೇನು ದೊಡ್ಡ ಸಂಗತಿ ಎಂದೆನ್ನಿಸದಿರಬಹುದು. ಆದರೆ…12ನೇಯ ಶತಮಾನದಲ್ಲಿ ಇಪ್ಪತ್ತರ ವಯೋಮಾನದ ತರುಣಿಯೊಬ್ಬಳು ಸಹಸ್ರಾರು ಕಿ.ಮೀ. ಕಾಲ್ನಡಿಗೆಯಲ್ಲಿ ಅದು ದಟ್ಟವಾದ ಕಾನನವನ್ನು ಕ್ರಮಿಸಿದ್ದು ಮಾತ್ರ ನಿಜಕ್ಕೂ ಅಚ್ಛರಿ ಸಂಗತಿ.
ತಾನು ಮೆಚ್ಚಿದ, ನೆಚ್ಚಿದ ಮಲ್ಲಿಕಾರ್ಜುನನ್ನು ಕೂಡಲೇಬೇಕೆಂಬ ಅವಳ ದೃಢ ಮನೋ ಸಂಕಲ್ಪವೇ ಇದಕ್ಕೆಲ್ಲ ಕಾರಣವಾಗಿರಬಹುದು ಅಲ್ಲವೇ…??
- ರಾಜಶೇಖರ ಎಸ್.ಬಿರಾದಾರ ( ಲೇಖಕರು )ಬಬಲೇಶ್ವರ.