ಎತ್ತಣ ಮಾಮರ, ಎತ್ತಣ ಕೋಗಿಲೆ



ಡಾ.ಅರುಣ ಇನಾಂದಾರ ಅವರು ಏಷ್ಯಾ ಖಂಡದ ಖ್ಯಾತ ಚರ್ಮ ರೋಗ ತಜ್ಞ ವೈದ್ಯರಲ್ಲಿ ಅವರು ಓರ್ವರು. ಇತ್ತೀಚಿಗೆ ಅವರ ಹೊಸ ಅನುವಾದಿತ ಕೃತಿಯೊಂದು ಬಿಡುಗಡೆಗೊಂಡಿತು. ಬಹುತೇಕ ದಕ್ಷಿಣ ಭಾರತದ ಪ್ರಸಿದ್ಧ ಚರ್ಮ ರೋಗ ತಜ್ಞರಲ್ಲಿ ಇವರು ಓರ್ವ ವೈದ್ಯರೆಂದು ಗುರುತಿಸಲ್ಪಟ್ಟವರು. ಅವರ ಬಗ್ಗೆ ಮತ್ತು ಕೃತಿ ಪರಿಚಯ, ಮುಂದೆ ಓದಿ…

ಅಂತರರಾಷ್ಟ್ರೀಯ ವೈದ್ಯ ಸಮ್ಮೇಳನಗಳಲ್ಲಿ ಹಲವಾರು ವೈದ್ಯಕೀಯ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ ಗೌರವ ಇವರಿಗೆ ಸಲ್ಲುತ್ತದೆ.ಇವರು ಹಣ ಗಳಿಕೆಗಾಗಿ ಮನಸ್ಸು ಮಾಡಿದ್ದರೇ… ದೂರದ ಮುಂಬಯಿ, ದೆಹಲಿಗಳಂಥ ಮಹಾನಗರಗಳಲ್ಲಿ ವೃತ್ತಿಯೊಂದಿಗೆ ನೆಲೆ ಕಾಣಬಹುದಾಗಿತ್ತು. ಆದರೆ ಡಾ.ಅರುಣ ಅವರು ಶರಣರ ಆದರ್ಶದ ಬದುಕನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರ ಫಲ ಇಲ್ಲೇ ನೆಲೆಯೂರಿದ್ದಾರೆ.ಕಾರಣ ಸ್ಥಳೀಯ ರೋಗಿಗಳಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ತಾವು ಹುಟ್ಟಿದ ಜಿಲ್ಲೆಯಲ್ಲಿಯೇ ಖಾಯಂ ರಹವಾಸಿಗಳಾಗಿದ್ದಾರೆ.

ಶ್ರೀಯುತರು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದವರು. ಅಲ್ಲಿನ ಪ್ರತಿಷ್ಠಿತ ವತನಕೀ ಮನೆತನವಾದ ಇನಾಮದಾರ (ಜಾಹಗೀರದಾರ) ಕುಟುಂಬದಿಂದ ಬಂದವರು. ಅಲ್ಲದೆ,ಮಾಜಿ ಸಂಸದರಾದ ದಿವಂಗತ ಶ್ರೀ ಬಿ.ಕೆ.ಗುಡದಿನ್ನಿಯವರ ಅಳಿಯಂದಿರು ಕೂಡಾ ಆಗಿದ್ದಾರೆ.ಇವರು ನಮಗೆ ನಾಲ್ಕು ತಲೆಮಾರಿನ ಬೀಗರು ಆಗಿದ್ದಾರೆ.ಹೀಗಾಗಿ,ಬಹುತೇಕ ನಮಗೆಲ್ಲರಿಗೂ ಸೋದರ ಮಾವನವರಾಗಿದ್ದಾರೆ.ಏನೇ ಇರಲಿ ಈಗ ನಾನು ಮುಖ್ಯ ವಿಷಯದ ಕಡೆ ಬರುವೆ.”ಎತ್ತಣ… ಮಾಮರ, ಎತ್ತಣ… ಕೋಗಿಲೆ” ಎಂಬ ನುಡಿಯಂತೆ ವೈದ್ಯಲೋಕಕ್ಕೂ…!!! ಮತ್ತು ವಚನ ಸಾಹಿತ್ಯಕ್ಕೂ…!!! ಎಲ್ಲಿಯ ಸಂಬಂಧ ಎಂಬ ಬಹುತೇಕರ ಪ್ರಶ್ನೆಗೆ ನಮ್ಮ ಮಾವನವರಾದ ಡಾ.ಅರುಣ ಇನಾಂದಾರ ಅವರು ಉತ್ತರ ನೀಡಿದ್ದಾರೆ. ಹೌದು,ಇತ್ತೀಚಿಗೆ ಅಲ್ಲಮ ಪ್ರಭುಗಳ ಕ್ಲಿಷ್ಟ ವಚನಗಳನ್ನು ಕನ್ನಡದಿಂದ ಇಂಗ್ಲಿಷಿಗೆ ಅನುವಾದಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಅದೀಗ ಪರಿಸಮಾಪ್ತಿಗೊಂಡು ಕೃತಿಯ ರೂಪದಲ್ಲಿ ಹೊರಬಂದಿದೆ.

ಫೋಟೋ ಕೃಪೆ : fathermuller.edu.in

ಈ ಪುಸ್ತಕದ ಶೀರ್ಷಿಕೆಯ ಹೆಸರು “Radiance of Vachanas”.ಅಂದರೆ,”ವಚನಗಳ ಕಾಂತಿ” ಎಂದು ಅರ್ಥೈಸಬಹುದಾಗಿದೆ.ಇಂಥ ಅಮೂಲ್ಯವಾದ ಹಾಗೂ ಸಂಗ್ರಹಯೋಗ್ಯವಾದ ಗ್ರಂಥವು ಇತ್ತೀಚಿಗೆ ಸರಳವಾಗಿ ಬಿಡುಗಡೆಗೊಂಡಿತು.1 2 ನೇ ಶತಮಾನದಲ್ಲಿ ಬಯಲಲ್ಲೇ ಬಯಲನ್ನು ಹುಡುಕಿದ ಅಲ್ಲಮ ಪ್ರಭುಗಳ ವಚನಗಳನ್ನು ಇಂಗ್ಲೀಷಿಗೆ ತರ್ಜುಮೆ ಮಾಡಿದ್ದು ನಿಜಕ್ಕೂ ಒಂದು ಸ್ತುತ್ಯಾರ್ಹ ಕೈಂಕರ್ಯವಾಗಿದೆ.ಈ ಸುಸಂದರ್ಭದಲ್ಲಿ ವೈದ್ಯರಾದ ಡಾ.ಅರುಣ ಇನಾಂದಾರ ಮಾಮಾರಿಗೆ ಶುಭಾಭಿನಂದನೆಗಳನ್ನು ಸಲ್ಲಿಸುತ್ತಾ…ಅವರಿಂದ ಇನ್ನೂ ಮೌಲಿಕವಾದ ಹಲವು ಗ್ರಂಥಗಳು ಹೊರಬರಲಿ ಎಂದು ಆಶಿಸುತ್ತೇನೆ.


  • ರಾಜಶೇಖರ ಎಸ್.ಬಿರಾದಾರ,(ಬಬಲೇಶ್ವರ).
5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW