ಕುಂಬಾರನ ಮನೆಯ ಹೊಸ ಗಡಿಗೆ (ಮಡಿಕೆ ) ಯಲ್ಲಿ ಅನ್ನ ಬೇಯಿಸಿ ಕೈಯಲ್ಲಿ ಹಿಡಿದು ಮಸಣಕ್ಕೆ ಹೋಗುವ ಪದ್ದತಿಯ ಪರಿ ಇತ್ತು. ಮಾಯವಾಯಿತೇ. ಸುಡುಗಾಡುಗಳು ಲೇಔಟ್ ಗಳಾದವೇ?…ಡಾ. ಕೃಷ್ಣವೇಣಿ. ಆರ್. ಗೌಡ ಅವರ ಒಂದು ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…
ನಾಲ್ಕು ವರ್ಷ ದ ಅವಧಿಯಲ್ಲಿ ಖಾಲಿ ನಿವೇಶನ ದತ್ತ ಕಣ್ಣು ಹಾಯಿಸಿದಾಗ ಮನದಲ್ಲೇನೋ ಕಸಿವಿಸಿ ಕಾಡಲಾರಂಭಿಸಿತು. ಹಿಂದೆ ಸುಡುಗಾಡು ಆಗಿದ್ದ ಜಾಗಗಳು ಇಂದು ಖಾಲಿ ನಿವೇಶನಗಳಾಗಿ ಗೋಚರಿಸಿರುವುದು ಒಂದು ರೀತಿಯ ನಗೆಯ ಅಬ್ಬರವನ್ನುಂಟು ಮಾಡಿತು. ಇದಕ್ಕೆ ಕೋಟಿಗಟ್ಟಲೆಯ ಬಂಡವಾಳ, ಹಳೆಯ ಕಾಲದಲ್ಲಿ ಪೂರ್ವಿಕರು ಸತ್ತರೆ, ಹೊಲ ಗದ್ದೆಯಲ್ಲಿ ಮಣ್ಣು ಮಾಡುವ ಪರಿಧಿಯೊಂದಿತ್ತು. ರೀತಿ ರಿವಾಜುಗಳ ನಂಬಿಕೆಯಲಿ ಪ್ರತಿ ಅಮಾವಾಸ್ಯೆಗೆ ಕಾಯಿ ಒಡೆದು ಕರ್ಪೂರ ಹಚ್ಚಿ ಹಿರಿಯರನ್ನು ನೆನೆದು ನಮಸ್ಕಾರ ಮಾಡಿಕೊಂಡು ಬರುವ ಪದ್ಧತಿ ಇತ್ತು.

ಫೋಟೋ ಕೃಪೆ : google
ದೈವೀಕರಣದ ದೃಷ್ಟಿಯಲಿ ಮಾನವಾ ಮಣ್ಣಿನ ಮುಟ್ಟಿಗೆ ಮಣ್ಣಿಂದ ಹುಟ್ಟಿದ ಮಾನವ ಮತ್ತೆ ಮರಳಿ ಮಣ್ಣಿಗೆ ಎನ್ನುವ ಕಾಲ ಯುಗ ಇಂದು ಹೊಲ, ಗದ್ದೆಗಳು ಮಾರಾಟಗೊಂಡು sight ಗಳಾಗಿ ಪರಿವರ್ತನೆ ಸೋಜಿಗದಂತೆ ಸೂಚಿಸಿದೆ. ಬದಲಾವಣೆ ಕಪ್ಪು ನೆಲದ ಮೇಲೆ ಗರ್ಚ್ ಎಂಬ ಹರಳು ಉಸುಗು ದಿಬ್ಬವ ತೋರಿಸಿ ಸಹಸ್ರಾರು ಸ್ಕ್ವೇರ್ ಫೀಟ್ ಗಳ ನಿವೇಶನದ ಸಂತೆಗೆ ಜನ ನಾ ಮುಂದು ತಾ ಮುಂದು ಎಂದು ಮುಗಿ ಬಿದ್ದಿರುವುದು ಅಪರೂಪ ದ ಔಚಿತ್ತ್ಯ. ಮಾನವ ಮಲಗಿರುವ ನೆಲದ ಎದೆಯ ಮೇಲೆ ತಂತಿ ರಾಡುಗಳು ಏರಿರಿರುವ ಬಣ್ಣ ಬಣ್ಣದ 60*40 ರ ಬಿಲ್ಡಿಂಗ್ ಗಳು ಗಗನಯಾನದಿಂದ ನೋಡಿದಾಗ ಬೆಂಕಿ ಪೊಟ್ಟಣದ ಡಬ್ಬಿಯ ಹಾಗೇ ಕಣ್ಣ ಹಾಯಿಸುತ್ತವೆ. ಏನು ಮಾಡುವುದು ಮುಚ್ಚಲು ಮಣ್ಣಿಲ್ಲ, ಟೋಕನ್ ಗಳ ವಿತರಣೆಯಲಿ ಸತ್ತ ಹೆಣವನು ಒಂದಾದ ನಂತರ ಒಂದು ವಿದ್ಯುತ್ ಶಕ್ತಿಯ ಒಲೆಯೊಳಗಿಂದ ಭೂದಿಯಾಗಿ ಹೊರಬರುತ್ತಿದೆ.
ಇನ್ನೊಂದು ಆಶ್ಚರ್ಯವೆಂದರೆ ನಮ್ಮ ಲೇಔಟ್ ನಲ್ಲಿ ನಿನ್ನೆ ಒಬ್ಬ ವ್ಯಕ್ತಿಯ ಸಾವಾಗಿದೆ. ತಮಟೆ ಮೇಳದ ಸದ್ದಿಲ್ಲದೇ ಓಂ ಶಾಂತಿ ವ್ಯಾನಿನಲ್ಲಿ ಪಕ್ಕದ ಮನೆಗೂ ತಿಳಿಯದ ಹಾಗೇ ರಾತ್ರೋ ರಾತ್ರಿ ಸಾಗಿಸಿದರು. ಲೇ ಔಟ್ ಎಂದ್ರೆ ಸದ್ದು ಗದ್ದಲವಿಲ್ಲದ ಬಾಗಿಲೊಳಗೆ ಚಿಲಕ ಹಾಕಿಕೊಂಡು ಇರುವ ಮನೆಗಳಲ್ಲವೇ?. ಕುಲ ಜಾತಿಗೊಂದು ಕೆಲಸ ಎನ್ನುವ ಬಸವಣ್ಣನ ಯುಗದಲ್ಲಿ ಸತ್ತ ಹೆಣಕ್ಕೆ ಮೇಧಾರನ ಬಿದಿರು ಚಿದಿಗೆಯಾಗಬೇಕು, ಕುಂಬಾರನ ಮನೆಯ ಹೊಸ ಗಡಿಗೆ (ಮಡಿಕೆ ) ಯಲ್ಲಿ ಅನ್ನ ಬೇಯಿಸಿ ಕೈಯಲ್ಲಿ ಹಿಡಿದು ಮಸಣಕ್ಕೆ ಹೋಗುವ ಪದ್ದತಿಯ ಪರಿ ಇತ್ತು. ಮಾಯವಾಯಿತೇ. ಸಂಸ್ಕಾರ, ಸಂಪ್ರದಾಯಗಳು ಸತ್ತ ಸಂತಾಪದಡಿ ಎದೆಯ ಬತ್ತಳಿಕೆಯಿಂದ ಬಂದ ಕಣ್ಣೀರು ನೆನಪುಗಳ ಚಿತ್ತ ಭ್ರಮೆಗೆ ಮೌನದ ದೀಪ ಸಗಣಿಯ ಮೇಲೆ ಕಾಣುವ ಕಾಲವೊಂದರಲ್ಲಿ ಸದ್ದಿಲ್ಲದೇ ಸಾಗಿಸುವ ಹೊಸ ಟ್ರೆಂಡ್ ಹುಟ್ಟಿತೇನೋ ಎನ್ನುವ ಆಲೋಚನೆ ಹುಳುವಾಗಿ ಕಾಡಿತು.

ಫೋಟೋ ಕೃಪೆ : google
ಭಾರತದ ಸಂಸ್ಕಾರದ ಪ್ರಕಾರ ಹೂಳಬೇಕು ಇಲ್ಲ, ಸುಡಬೇಕು ಎಂದು ತಿಳಿದಿದ್ದೆ. ಪ್ರಭುದ್ಧತೆ ಕಣ್ತೆರೆದಾಗ ಶವದ ಪ್ರದರ್ಶನ ಮಾಡಬಾರದು ಎನ್ನುವುದು ಗೋಚರವಾಯಿತು. ಅದೇನೇ ಇರಲಿ ಮಸಣವೆಂಬ ರುದ್ರಭೂಮಿಯಲ್ಲಿ ಅದೆಷ್ಟು ಹೆಣಗಳು ಹೂತಿವೆಯೋ, ಸುಟ್ಟಿವೇಯೋ, ಬರೀ ಪ್ರಶ್ನೆಯ ಚಿನ್ನೆ?. 60 * 40 ರ ನೆಲಕ್ಕೆ ಅಬ್ಭಾ ಎಷ್ಟೊಂದು ಬೆಲೆ. ಪೂರ್ವ ದಿಕ್ಕಿಗೊಂದು ಬೆಲೆ, ಪಶ್ಚಿಮ ದಿಕ್ಕಿಗೊಂದು ಬೆಲೆ. ವೈಜ್ಞಾನಿಕ ಜಗದಡಿ ಮಾನವನ ಮೆದುಡ ಚಿಂತನೆಯ ಬಿಂದು ದಿಕ್ಕುಗಳ ಬೆನ್ನೇರಿ ಲೇ ಔಟ್ ಗಳ ಮುಖದತ್ತ ಸಾಗಿ, ಹೂತ ಎದೆಯ ನೆಲದ ಬಿಲ್ಡಿಂಗ್ ಗಳಿಗೆ ಮನಸು ಸೂರೆಗೊಂಡು ಹಪ ಹಪಿಸುವ ಯೋಜನೆ ಕೈಲಿ ಭೂತಾಯಿ ಹರಾಜಾಗುತ್ತಿದ್ದಾಳೋ ಎನ್ನುವ ಸಂಕೋಲೆ ಗೈದಿತು.
- ಡಾ. ಕೃಷ್ಣವೇಣಿ. ಆರ್. ಗೌಡ
