ಬಶೀರ್ ಅವರು ಒಬ್ಬ ಪ್ರೇಮ ಕವಿ ಜೊತೆಗೆ ಆಶುಕವಿಯೂ ಹೌದು. ‘ಪ್ರೀತಿಯ ಹುಡುಗ’ ಹೆಸರಿನಲ್ಲಿ ಸಾಕಷ್ಟು ಚುಟುಕು ಕವಿತೆಗಳನ್ನು ಬರೆದಿದ್ದಾರೆ. ಅವರೊಂದಿಗೆ ಹರಟುತ್ತಿದ್ದರೆ ಕವಿತೆಗಳ ಸಾಲುಗಳು ಹುಟ್ಟುತ್ತವೆ. ತಮ್ಮ ಮನದ ಖುಷಿಗೆ ಬರೆದ ಪ್ರೇಮದ ಚಟಾಕಿ ಈಗ ಓದುಗರ ಮುಂದಿದೆ…
ನಿನ್ನ ಸ್ನೇಹ
ಗೆಳೆತಿ…ನೀ ಕೇಳಿದೆ…
ನನ್ನ ಸ್ನೇಹ ಏಕೆ ನಿನಗೆಂದು….??
ಉತ್ತರ ಇರಲಿಲ್ಲ…
ಹೌದು ನಾ ಯಾರು…? ನಾ ನಿನಗೇನೂ..ಏನೂ ಅಲ್ಲವೇ…?
ಮತ್ತೇಕೆ, ನಿನ್ನ ಸ್ನೇಹ ನನಗೆ…
ಯೋಚಿಸಿದೆ…ಉತ್ತರ ಹುಡುಕಿದೆ …?
ಕೇಳು…
ನನಗೆ ನೀನೊಬ್ಬಳು ಅಮ್ಮನಂತೆ ಅಕ್ಕರೆ ತೋರುವವಳು …!!
ಅಪ್ಪನಂತೆ ಪೋಷಿಸುವವಳು…
ಅಕ್ಕಳಂತೆ ಧೈರ್ಯ ನೀಡುವವಳು…
ಮಗುವಿನಂತೆ ಮುದ್ಧಿಸುವವಳು…
ಪ್ರಿಯತಮೆಯಂತೆ ಪ್ರೀತಿಸುವವಳು….!!
ಗೆಳೆತಿ…ತಿಳಿಯಿತೇ ಕಾರಣ…
ನಿನ್ನ ಸ್ನೇಹ ಏಕೆ ನನಗೆಂದು…
***
ಪ್ರೀತಿಯೊಳಗಿನ ನೋವು
ಪ್ರೀತಿ ಬಯಸೋ ಮನಕ್ಕೆ ಸದಾ ಪ್ರೀತಿ
ಸಿಗಲಿ…
ಸ್ನೇಹ ಬಯಸೋ ಹೃದಯಕ್ಕೆ ಸದಾ ಸ್ನೇಹ
ಸಿಗಲಿ…
ಆದರೆ ಯಾವುದೂ ಸಿಗದ
ಮನಸ್ಸಿಗೆ,
ಯಾವತ್ತೂ ನೋವಾಗದಿರಲಿ…..
***
ಪ್ರೀತಿಯ ಬಯಕೆ
ಕಲೆಗಾರ ನಾನಲ್ಲ
ಕವಿಗಾರ ನಾನಲ್ಲ
ಭಾವನೆಗಳೊಂದಿಗೆ ಬದುಕುವುದು ಬಿಟ್ಟು,
ಬೇರೇನು ಗೊತ್ತಿಲ್ಲ
ಆಸ್ತಿಯೂ ನನಗಿಲ್ಲ
ಆಸೆಯೂ ನನಗಿಲ್ಲ
ನಿಮ್ಮ ಸ್ನೇಹ-ಪ್ರೀತಿ ಬಿಟ್ಟು,
ಬೇರೇನು ಬೇಕಿಲ್ಲ…
- ಪ್ರೀತಿಯ ಹುಡುಗ