‘ಭಾವನೆಗಳಿಲ್ಲದವಳ ಭಾವತೀರಯಾನ’ ಕೃತಿ ಬಿಡುಗಡೆ



ಗಜಲ್ ಕವಿಯತ್ರಿ ಅಮೃತ ಎಂ ಡಿ ಅವರ ‘ಭಾವನೆಗಳಿಲ್ಲದವಳ ಭಾವತೀರಯಾನ’ ಕೃತಿ ಮೇ 15ನೇ ತಾರೀಕು ಗಾಂಧಿ ಸಾಹಿತ್ಯ ಸಂಘ ಆವರಣದಲ್ಲಿ ಮತ್ತೊಮ್ಮೆ ಅನಾವರಣ ಗೊಂಡಿತ್ತು. ಅದರ ವರದಿ ಇಲ್ಲಿದೆ, ಮುಂದೆ ಓದಿ…

ಬದುಕು ಬಂದ ದಾರಿಯಲ್ಲಿ ಸಾಗುವುದು ನೀರಸ ಎನಿಸಿದರೂ, ಬರುವ ಹಾದಿಯಲ್ಲಿ ಬಂದ ಅವಕಾಶಗಳ ಸದುಪಯೋಗ ಪಡಿಸಿಕೊಂಡು ಸ್ವಾಸ್ಥ್ಯ ಸಮಾಜಕ್ಕೆ ಏನಾದ್ರು ಕೊಡುಗೆ ನೀಡುವಲ್ಲಿ ನಮ್ಮ ಮನಸ್ಸು ಹಾತೊರೆಯುತ್ತಿದ್ದರೆ ಇಡೀ ಪ್ರಪಂಚದ ಶಕ್ತಿಯೆಲ್ಲ ಒಂದುಗೂಡಿ ನಮಗೆ ಅವಕಾಶ ಒದಗಿಸಲು ಕಾಯುತ್ತಲಿರುತ್ತವೆ. ಅದಕ್ಕೆ ನೆಪವೊಂದು ನೆನಪೊಂದು ಕೂಡಿಕೊಂಡಿರುತ್ತದೆ.

2020-21ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿಗೆ ನೀಡುವ ಪ್ರೋತ್ಸಾಹ ಧನವನ್ನು ನನ್ನ ಗಜಲ್ ಸಂಕಲವಾದ ‘ಭಾವನೆಗಳಿಲ್ಲದವಳ ಭಾವತೀರಯಾನ’ ಪಡೆದಿತ್ತು, 2022 ಜನವರಿ 07 ನೇ ತಾರೀಕು ನಯನ ರಂಗಮಂದಿರದಲ್ಲಿ ಲೋಕಾರ್ಪಣೆ ಸಹ ಆಗಿತ್ತು.

ಡಾ. ವಡ್ಡಗೆರೆ ನಾಗರಾಜಯ್ಯ ಅವರೊಂದಿಗೆ

ಮತ್ತದೆ ಪುಸ್ತಕ ಮೊನ್ನೆ ಮೊನ್ನೆ ಅಂದರೆ ಮೇ 15ನೇ ತಾರೀಕು ಗಾಂಧಿ ಸಾಹಿತ್ಯ ಸಂಘ ಆವರಣದಲ್ಲಿ ಮತ್ತೊಮ್ಮೆ ಅನಾವರಣ ಗೊಂಡಿತ್ತು. ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ ಪ್ರಕಾಶಮೂರ್ತಿ ಅವರಿಂದ ಬಿಡುಗಡೆ ಗೊಂಡಿತ್ತು.

ವಿಜಯ ಲಕ್ಷ್ಮಿ ಶಿಬರೂರು ಅವರೊಂದಿಗೆ

ಆ ಸಮಾರಂಭದಲ್ಲಿ ಪ್ರಸಿದ್ಧ ಕವಿ ಮನಗಳು, ಸಾಹಿತ್ಯದ ಊರಲ್ಲಿ ಸುತ್ತಿ ಮಿಂದೆದ್ದ ಮಹಾನು ಘಟಿಗಳ ಪರಿಚಯ ಮನಕ್ಕೆ ಬಹಳ ಮುದ ತಂದಿತ್ತು. ಅನುಭವಕ್ಕೆ ಬಂದರು ವ್ಯಕ್ತ ಪಡಿಸಲಾಗದ ಖುಷಿಯ ಅನುಭೂತಿಯನ್ನು ನೀಡಿತು..

ಸಮಾಜದ ಕೊಳೆ ತೆಗೆಯಲು ಬದುಕನ್ನೆ ಪಣಕ್ಕಿಟ್ಟು, ಸ್ವಾಸ್ಥ್ಯ ಸಮಾಜಕ್ಕೆ ಸ್ವಾತಿಕ ವಾತಾವರಣ ಕಲ್ಪಿಸಲು ಪ್ರಯತ್ನಿಸುತ್ತಿರುವ ವಿಜಯ ಟೈಮ್ಸ್ ನ ಮುಖ್ಯ ಸಂಪಾದಕರು ಅದ ವಿಜಯ ಲಕ್ಷ್ಮಿ ಶಿಬರೂರು ಹಾಜರಿದ್ದರು. ಅದೆಂತಹ ನಗು ಮೊಗ, ಕೇವಲ ಮುಖದಲ್ಲಿನ ನಗುವಿನಲ್ಲೆ ಪ್ರತಿಯೊಬ್ಬರನ್ನೂ ಆಕರ್ಷಿಸುವ ವ್ಯಕ್ತಿತ್ವ.. ಹೆಗಲ ಮೇಲೆ ಕೈಯಿಟ್ಟು ಮುಂದಿನ ಹಾದಿ ಸುಗಮವಾಗಲಿ ಎಂಬ ಹಾರೈಕೆಗೆ ಕ್ಷಣಕಾಲ ಮೂಕವಾಗಿದ್ದೆ.

ಬಿ ಎಂ ಶ್ರೀ ಪ್ರತಿಷ್ಠಾನದ ಅಧ್ಯಕ್ಷರು, ಖ್ಯಾತ ವಿಮರ್ಶಕರು ಡಾ ಭೈರ ಮಂಗಲ ರಾಮೇಗೌಡ ಅವರು ಸಹ ಹಾಜರಿದ್ದರು.

ಡಾ. ವಡ್ಡಗೆರೆ ನಾಗರಾಜಯ್ಯ ನಾಡು ಕಂಡ ಶ್ರೇಣಿ ಚಿಂತಕ, ಸಾಮಾಜಿಕ ಕಾರ್ಯಕರ್ತರು, ಸರಳತೆಯನ್ನು ಮೈಯೊದ್ದು ಕಿರಿಯ ಮನಸ್ಸಿನ ಸಾಹಿತಿಗಳನ್ನು ಪ್ರೋತ್ಸಾಹ ನೀಡುವ ಗುಣ ಮನಸ್ಸನ್ನು ಮುದಗೊಳಿಸಿತ್ತು. ಕರ್ನಾಟಕ ರಾಷ್ಟ್ರ ಸಮಿತಿಯ ಅಧ್ಯಕ್ಷರಾದ ರಘು ಜಾಣಗೆರೆಯವರು ಸಹ ಸಮಾರಂಭದಲ್ಲಿ ಹಾಜರಿದ್ದರು .

ಇದಕ್ಕೆಲ್ಲ ಅವಕಾಶ ಮಾಡಿಕೊಟ್ಟಂತಹ ಜನನಿ ಬಾಂಧವ್ಯ ಫೌಂಡೆಶನ್ ರೂವಾರಿಯಾದ ಜನನಿ ವತ್ಸಲ ಅವ್ರಿಗೆ, ತುಂಬು ಹೃದಯದ ಧನ್ಯವಾದಗಳು..

ಪ್ರತಿ ಕ್ಷಣ ಬದುಕಿಗೆ ಹೊಸ ಪದರುಗಳನ್ನು ತುಂಬುತ್ತಿರುವ ಕನ್ನಡ ಪದಗಳ ಸಂಗಡಕ್ಕೆ ನಾನೆಂದು ಅಬಾರಿ.. ಉಸಿರಿನ ಕೊನೆ ತನಕ ಕನ್ನಡವೆಂದರೆ ನನ್ನುಸಿರಿನ ಪ್ರತಿಬಿಂಬ.. ಇಂತಹ ಸಮಾರಂಭಗಳು, ಇಂತಹ ಅವಕಾಶಗಳು ಬರಲಿ, ಬರದೆ ಇರಲಿ, ಕನ್ನಡದ ಕಡೆಗಿನ ನನ್ನ ಪ್ರೀತಿ ಮಾತ್ರ ಸದಾ ಕಾಲ ಗಮ್ಯದೆಡೆಗೆ..

ಕನ್ನಡ ನಾಡು ನುಡಿ ಸದಾಕಾಲ ಜನಮಾನಸದಲ್ಲಿ ಮೆರೆಯಬೇಕು ಎಂದರೆ ಕನ್ನಡ ಪದಗಳ ಬಳಕೆ ಹೆಚ್ಚಾಗಬೇಕು.ಕನ್ನಡ ನಾಡಿನಲ್ಲಿ ಕನ್ನಡ ಸಾರ್ವಭೌಮವಾಗಿ ಉಳಿಯಬೇಕು ಎಂದರೆ ಕನ್ನಡ ಪುಸ್ತಕಗಳ ಓದು , ಬರಹ ಅಖಂಡದತ್ತ ಸಾಗಬೇಕು.


  • ಅಮೃತ ಎಂ ಡಿ (ಗಜಲ್ ಕವಿಯತ್ರಿ, ಲೇಖಕಿ, ಶಿಕ್ಷಕಿ)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW