ಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮಾಗಳ ಹೃದಯ ಭಾಗದಲ್ಲಿನ ಜಾಲಾಂದ್ರ ಹೊಂದಿರುವ ಹಾಗೂ ಮೆದು ಕಲ್ಲಿನಿಂದ ನಿರ್ಮಾಣಗೊಂಡಿರುವ ಪ್ರಸಿದ್ಧ ಸೂರ್ಯನಾರಾಯಣ ದೇವಾಲಯವಿದು ಇದರ ಬಗ್ಗೆ ಲೇಖಕರು ಚಂದ್ರು ಕೊಂಚಿಗೇರಿ ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ, ಮುಂದೆ ಓದಿ…
ಈ ದೇಗುಲದಲ್ಲಿ ಗೋಪಾಲಕೃಷ್ಣ, ನಂದಿ ಈಶ್ವರ ದೇವರು ಸೇರಿದಂತೆ ಸಪ್ತಮಾತೃಕೆಯರು ಇದ್ದಾರೆ. #ಕಲ್ಯಾಣಿ_ಚಾಲುಕ್ಯರ ಅರಸ ತ್ರಿಭುನವ ಮಲ್ಲ ಎಂಬ ಅರಸನ ಕಾಲದಲ್ಲಿ ನಿರ್ಮಾಣವಾಗಿದೆ. ವಿಶ್ವ ವಿಖ್ಯಾತ ಹಂಪಿಯ ಕಲೆಯನ್ನು ಮೀರಿಸುವಂತಹ ಕಲೆ ಶ್ರೀಮಂತಿಕೆ ಹೊಂದಿದೆ. ದೇಗುಲು ಮುಂಭಾಗದಲ್ಲಿ ಜಾಲಾಂದ್ರದಿಂದ ನಿರ್ಮಾಣವಾಗಿದೆ. ದೇಗುಲ ಸುತ್ತಲೂ ಸುಂದರವಾಗಿ ಶಿಲ್ಲ ಕಲಾಕೃತಿ ರಚನೆ ಮಾಡಲಾಗಿದೆ. ದೇಗುಲ ಪಕ್ಕದಲ್ಲೆ ಒಂದು ದೊಡ್ಡ ತೆಗ್ಗು ಪ್ರದೇಶವಿದೆ. ಇಂದನ್ನು ಈಗಲೂ ಕೋಟೆ ಪ್ರದೇಶ ಎಂದು ಕರೆಯುತ್ತಾರೆ. ಅದಕ್ಕೆ ಸುತ್ತಲೂ ಕಲ್ಲಿನ ಕಟ್ಟಡ ಕಟ್ಟಿಸಿದ್ದಾರೆ. ಅವನತಿ ಅಂಚಿನಲ್ಲಿರುವ ಈ ದೇಗುಲವನ್ನು ಪುರಾತತ್ವ ಇಲಾಖೆ ಮರುನಿರ್ಮಾಣ ಮಾಡಿದ್ದಾರೆ.
ಒಮ್ಮೆ ಬನ್ನಿ ಭೇಟಿ ನೀಡಿ..ಹೂವಿನ ಹಡಗಲಿಯಿಂದ 16 ಕಿಮೀ ದೂರದಲ್ಲಿದೆ.
- ಚಂದ್ರು ಕೊಂಚಿಗೇರಿ (ಕನ್ನಡ ಪ್ರಭಾ ವರದಿಗಾರರು), ಹಡಗಲಿ