‘ನಿನ್ನ ರಾಧೆಯ ಪ್ರೀತಿಗೆ ಪ್ರೇಮದ ಪರಿಯ ಅರಿಯಲಾಗದೂ…..ಓಹ್ ಮಾಧವ’… ತಪ್ಪದೆ ಮುಂದೆ ಓದಿ ಸುಮಾ ಭಟ್ ಅವರ ಲೇಖನಿಯಲ್ಲಿ ಅರಳಿದ ಮಾಧವನ ಪ್ರೀತಿ….
ಮಾಧವ ಪ್ರೀತಿಯ ಮಾತಿಗೆ ನೀ ತಾನೇ ರಾಯಭಾರಿ….
ಪ್ರೇಮವೆಂಬ ಭಾವಕ್ಕೆ ನಿನ್ನದೇನೋ ಹೊಸ ಪರಿ….
ಕವನವೆಂದರೆ ನಿನ್ನದೇ ನೆನಪು ಎನಗೆ ಮುರಾರಿ….
ಮುಕುಂದ ನಿನ್ನ ಹೆಸರ ಬರೆಯುವೆ ಪ್ರತಿಬಾರಿ….
ನಿನ್ನ ಅಂದದ ಮೊಗದಿ ಅರುಳುವ ನಗೆಯ ಹೂರಣ….
ಸಂಭ್ರಮಿಸಲು ನೀಡುತಲಿದೆ ನೂತನವಾದ ಕಾರಣ….
ಪ್ರೀತಿಯೆಂಬ ಭಾವಾತಿರೇಕಕೆ ನೀ ತಾನೆ ಪ್ರೇರಣಾ…. ಬಿಡದು ನಿನ್ನ ಮಾಯೆಯ ಮೋಡಿಯ ತೋರಣ….
ನೀ ಕೊಳಲನೂದಿ ಕರೆದೆ ಗೋಕುಲದಾ ಸಮಸ್ತ ಗೋವುಗಳ ಸಮೂಹವಾ…..
ನಲಿಯುತ್ತಾ ಬಂದ ಗೋವುಗಳು ಹರಿಸಿದೆ ಕ್ಷೀರದಾ ಸಾಗರವಾ…..
ಸಮಸ್ತ ಮಾನವರಲ್ಲಿ ಬಿತ್ತಿದೆ ಪ್ರೇಮ, ಪ್ರಣಯದಾ ಪರಿಭಾಷ್ಯವಾ…..
ನೀನಿಲ್ಲದ ಜಗತ್ತಿನ ಪರಿಕಲ್ಪನೆ ತಂದಿದೆ ಶೂನ್ಯದ ಭಾವವಾ…..
ಮುರುಳಿಯ ನಾದಕೆ ಮರುಳಾಗಿಹರೆಲ್ಲಾ ಗೋಪಿಕೆಯರು…..
ಗೋಪಿಕೆಯರ ಹಿಂಡಿನಲ್ಲಿ ಎಲ್ಲರು ನಿನ್ನನೇ ಅರುಸುವರು…..
ಅರಸಿದವರೆಲ್ಲಾ ನಿನ್ನ ಮಾಯೆಯನು ಅರಿಯಲಾರರು…..
ಅರಿತುಕೊಂಡವರು ನಿನ್ನ ಯಾವ ವಿಧದಲ್ಲೂ ಹುಡುಕಲಾರರು…..
ನಿನ್ನ ರಾಧೆಯ ಪ್ರೀತಿಗೆ ಪ್ರೇಮದ ಪರಿಯ ಅರಿಯಲಾಗದೂ…..
ಅದಕ್ಕೊಂದು ಚೌಕಟ್ಟನ್ನು ಯಾರಿಗೂ ಸಹಾ ಇಡಲಾಗದೂ…..
ಇಟ್ಟರೂ ಅದೇನೆಂದು ಎಂಥವರಿಗೂ ತಿಳಿಯಲಾಗದು…..
ತಿಳಿದುಕೊಂಡು ಅನುಸರಿಸ ಹೋದರೂ ಅರ್ಥೈಸಲಾರದು…..
ರುಕ್ಮಿಣಿ ದೇವಿಯ ಭಕ್ತಿಯ ಪರಾಕಾಷ್ಟತೆಗೆ ನೀನೊಲಿದೆ…..
ನೀ ಮಾಡಿದ ಕೊಳಲಿನಾ ಮೋಡಿಗೆ ಲೋಕವೇ ತಲೆಬಾಗಿದೆ…..
ನಿನ್ನ ಭಕ್ತರನು ಪೊರೆದು ಸಲಹುವ ವಿಷಯವದು ಮನೆಮಾತಾಗಿದೆ…..
ನೀ ನೀಡಿದ ಧರ್ಮದ ಭೋಧನೆ ಇಡೀ ವಿಶ್ವದ ಉನ್ನತಿಗೆ ಹಾದಿಯಾಗಿದೆ…..
- ಸುಮಾ ಭಟ್