ಮಲೆನಾಡಿನ ಸೌಂದರ್ಯವನ್ನು ಕವಯತ್ರಿ ಕಲ್ಪಾ ಸಿ.ಎನ್ ಅವರು ಕವನದ ರೂಪದಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.
ಗುಬ್ಬಿ ಮತ್ತು ಮಗಳ ಜೋಡು
ಅಲ್ಲೊಂದು ಸೋಗೆ ಮಾಡು…
ಅದರಡಿಯಲ್ಲಿ ಒಂದಿಷ್ಟು ಗುಬ್ಬಿಗೂಡು…
ಮಗಳಿಗೆ, ಅದರೊಳಗೆ ಕೆದಕಿ ನೋಡುವ ದೌಡು…
ಪತ್ತೆ ಮಾಡಿ ಅದರ ಜಾಡು…
ಪುಟ್ಟ ಅಂಗೈಯಲ್ಲಿ ಹಿಡಿದು ದಾರಿ ತೋರೆಂದು ಹಾಡಿದು…
ಸರಿ ದಾರಿ ತೋರಿದಾಗ ಮನವೆಲ್ಲಾ ಕೌತುಕದ ಬೀಡು…
ಹೀಗಿತ್ತು ಗುಬ್ಬಿ ಮತ್ತು ಮಗಳ ಗೆಳೆತನದ ಜೋಡು…
ನಮ್ಮನೆ :
ಸಿಂಗರಿಸಿದರೆ ಈಗಲೂ ಮದುವಣಗಿತ್ತಿ …
ನಮ್ಮನೆಯೆಂಬ ೭೫ ರ ಹರೆಯದ ಯುವತಿ…
ಮಲೆನಾಡಿನ ಸುಂದರ ಕಂಬಗಳ ಒಡತಿ…
ರುಧ್ರಭಯಂಕರ ಮಳೆಗಾಳಿಯ ತಡೆಯುವ ಗಟ್ಟಿಗಿತ್ತಿ…
ನಮ್ಮೆಲ್ಲರ ಆಟ ಪಾಠ ಕನಸುಗಳಿಗೆ ಸಾಕ್ಷಿಯಾದ ಗೆಳತಿ…
ನಿನ್ನ ನೆನಪಾದೊಡನೆ ಉಕ್ಕುವುದು ತವರ ಪ್ರೀತಿ…
- ಕಲ್ಪಾ ಸಿ.ಎನ್