ಹಿಟ್ಲರ್ ನ ಸಹೋದರಿ ಪೌಲಾ ವೂಲ್ಫ್ ಬಗ್ಗೆ ರೋಚಕ ವಿಷಯಗಳು

ಅಡಾಲ್ಫ್ ಹಿಟ್ಲರ್ ಸಹೋದರಿಯ ಹೆಸರು ಪೌಲಾ ವೂಲ್ಫ್.  ಸ್ವಭಾವದಲ್ಲಿ ಹಿಟ್ಲರ್ ಸ್ವಭಾವದ ವಿರುದ್ಧ ದಿಕ್ಕಾಗಿದ್ದಳು.  ಪೌಲಾಳ ಶಾಂತಿಯುತವಾದ ಜೀವನ. ಮತ್ತು ತನ್ನ ಅಣ್ಣ ಅಡಾಲ್ಫ್ ಹಿಟ್ಲರ್ ನ ಕ್ರೂರತೆಯಿಂದ ಇತಿಯಾಸ ಪುಟದಲ್ಲಿ ಚಿರಸ್ಮರಣೀಯರಾದರು.

ಅಣ್ಣನ ಕ್ರೂರತೆಯ ವಿರುದ್ಧ ಮುಖದಂತಿದ್ದ “ಪೌಲಾ ವೋಲ್ಫ್” ಉರುಫ್ “ಪೌಲಾ ಹಿಟ್ಲರ್” ಹುಟ್ಟಿದ್ದು ಜನವರಿ ೨೧, ೧೮೯೬. ಅಲೋಯಿಸ್ ಹಿಟ್ಲರ್ ನ ಮೂರನೇ ಪತ್ನಿಯ ಮಗಳೇ ಪೌಲಾ ವೋಲ್ಫ್. ಈಕೆಯ ಅಣ್ಣ ಅಡಾಲ್ಫ್ ಹಿಟ್ಲರ್. ಇತನಿಗಿಂತ ಏಳು ವರ್ಷ ಚಿಕ್ಕವಳಾಗಿದ್ದಳು ಪೌಲಾ. ತಾನು ಆರು ವರ್ಷದವಳಿದ್ದಾಗ ತನ್ನ ತಂದೆಯನ್ನು ಹಾಗೂ ಹನ್ನೊಂದು ವರ್ಷದವಳಿದ್ದಾಗ ತಾಯಿಯನ್ನು ಕಳೆದುಕೊಂಡಳು. ಆಗ  ಕುಟುಂಬದ ಹೊಣೆಯನ್ನು ಅಣ್ಣ ಅಡಾಲ್ಫ್ ಹೊತ್ತಿದ್ದ. ಅದೇ ಇತಿಹಾಸದ ಪುಟದಲ್ಲಿನ ಹಿಟ್ಲರ್. ಪೌಲಾ  ಪ್ರೌಢಾವಸ್ಥೆಯಲ್ಲಿದ್ದಾಗ  ಶ್ರೀಮಂತರ ಮನೆಯಲ್ಲಿ ಕೆಲಸದವಳಾಗಿ, ಅವರ ಮಕ್ಕಳ ಲಾಲನೆ- ಪಾಲನೆ ಮಾಡುತ್ತಾ ಅಣ್ಣನಿಗೆ ಸಹಾಯಕಳಾಗಿ ಕೆಲಸ ಮಾಡುತ್ತಿದ್ದಳು. ಮತ್ತು ಕೈಗೆ ಸಿಕ್ಕ ಅಲ್ಪ ಹಣವನ್ನು ಅಣ್ಣನ ಕೈಲಿ ಕೊಡುತ್ತಿದ್ದಳು. ಹೀಗೆ ಅಣ್ಣ -ತಂಗಿ ಒಬ್ಬರಿಗೊಬ್ಬರು ಆಸರೆಯಾಗಿ ಬೆಳೆದರು.

hitler3

ಫೋಟೋ ಕೃಪೆ : mourning the Ancient

ಪೌಲಾ ಮತ್ತು ಅಡಾಲ್ಫ್ ತಮ್ಮ ಮುಂದಿನ ಜೀವನದ ಕನಸ್ಸುಗಳನ್ನು ಹೊತ್ತು ಆಸ್ಟ್ರೇಲಿಯಾದ ವಿಯೆನ್ನಾ ನಗರಕ್ಕೆ ಬಂದರು. ಅಣ್ಣ ಚಿತ್ರಕಲೆ ಮತ್ತು ರಾಜಕೀಯದಲ್ಲಿ ಬಹು ಎತ್ತರಕ್ಕೆ ಬೆಳೆಯಬೇಕೆಂದು ಕನಸ್ಸನ್ನು ಕಾಣತೊಡಗಿದರೆ, ಸರಳ ಜೀವನ ಹಾಗೂ ಜನರ ಸೇವೆ ಮಾಡುವುದು ತಂಗಿ ಪೌಲಾಳ ಕನಸಾಗಿತ್ತು. ಅಣ್ಣ ಕನಸ್ಸು ಕಂಡಂತೆ ರಾಜಕೀಯದಲ್ಲಿ ಹಂತ ಹಂತವಾಗಿ ಬೆಳೆಯ ತೊಡಗಿದ. ಮತ್ತು ಜಗತ್ತನ್ನೇ ಗೆಲ್ಲಬೇಕು ಹಾಗು ಸರ್ವಾಧಿಕಾರಿಯಾಗಬೇಕೆಂಬ ಹುಚ್ಚು “ಅಡಾಲ್ಫ್ ಹಿಟ್ಲರ್” ನ ಮನಸ್ಸಿನಲ್ಲಿ ಚಿಗುರೊಡೆಯಿತು.ಇತ್ತ ತಂಗಿ ಪೌಲಾ ‘ಯಹೂದಿ’ ಗಳ ವಸತಿ ನಿಲಯದಲ್ಲಿ ಸಹಾಯಕಿಯಾಗಿ ಜನರ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಳು. ಜನರ ಸೇವೆಯೇ ತನ್ನ ಮುಖ್ಯ ಧೈಯವಾಗಿಸಿಕೊಂಡಳು. ಅದರಂತೆ ಮಹಾಯುದ್ಧದ ಕೊನೆಯವರೆಗೂ ಮಿಲಿಟರಿ ಆಸ್ಪತ್ರೆಯಲ್ಲಿ ಸೇವಕಿಯಾಗಿ ಕೆಲಸವನ್ನು ಮಾಡಿದಳು.

ಆದರೆ ತನ್ನ ಅಣ್ಣ ಅಡಾಲ್ಫ್  ಯಾವ ಯಹೂದಿಗಳು ಪ್ರಪಂಚದಲ್ಲೇ ಇರಬಾರದೆಂದು ಅಂದುಕೊಂಡಿದ್ದನೋ, ಒಂದೇ ರಕ್ತ ಹಂಚಿಕೊಂಡು ಹುಟ್ಟಿದ್ದಪೌಲಾ ಅದೇ ಯಹೂದಿಗಳ ವಸತಿ ನಿಲಯದಲ್ಲಿ ಸೇವೆ ಸಲ್ಲಿಸುತ್ತಾ ಅಲ್ಲಿನವರ ಪ್ರೀತಿಗೆ ಪಾತ್ರಳಾದಳು.ಆಕೆ ಒಮ್ಮೆಯೂ ತನ್ನ ಅಣ್ಣನ ಸಿದ್ಧಾಂತಗಳನ್ನು ಬೆಂಬಲಿಸಲು ಮುಂದಾಗಲಿಲ್ಲ. ಆಕೆ ತನ್ನ ಅಣ್ಣ ಅಡಾಲ್ಫ್ ಹಿಟ್ಲರ್ ಕಟ್ಟಿದ “ನಾಜಿ” ಪಾರ್ಟಿಗೆ ಸೇರದೆ ಇದ್ದ ಒಂದೇ ಕಾರಣಕ್ಕೆ, ಜಗತ್ತು “ಅಡಾಲ್ಫ್ ಹಿಟ್ಲರ್” ಮರಣದ ನಂತರವೂ ಪೌಲಾಳನ್ನು ಬದುಕಲು ಬಿಟ್ಟಿತು.

paula-hitler
ಫೋಟೋ ಕೃಪೆ : Wiadomosci

ಬಡತನದಲ್ಲೇ ಹುಟ್ಟಿ ಬೆಳೆದ ಪೌಲಾ ತನ್ನ ಯವ್ವನಾವಸ್ಥೆಯಲ್ಲಿ “ಎರ್ವಿನ್ ಜೆಕೆಲಿಯಸ್” ನ ಪ್ರೇಮದಲ್ಲಿ ಬಿದ್ದಳು. ಈ ಎರ್ವಿನ್ ಒಬ್ಬ ನರರೋಗ ವೈದ್ಯನಾಗಿದ್ದ. ಹಿಟ್ಲರ್ ತನ್ನ ತಂಗಿ ಮತ್ತು ಎರ್ವಿನ್ ಮದುವೆಗೆ ಅನುಮತಿ ನೀಡಲಿಲ್ಲ. ಹೀಗಾಗಿ ಅವರ ಪ್ರೇಮಕ್ಕೆ ಇಂತಿಶ್ರೀ ಹೇಳಬೇಕಾಯಿತ್ತು.  ಮಹಾಯುದ್ಧದಲ್ಲಿ ಈ ವೈದ್ಯನೇ  ಅಡಾಲ್ಫ್ ಹಿಟ್ಲರ್ ನ  ಆಜ್ಞೆಯ ಮೇರೆಗೆ ನಾಲ್ಕು ಸಾವಿರ ಕಂದಮ್ಮಗಳ ಮಾರಣ ಹೋಮಕ್ಕೆ ಕಾರಣನಾದ. ಯುದ್ಧವೊಂದರಲ್ಲಿ “ಎರ್ವಿನ್” ಸೆರೆಯಾಗಿ ಶಿಕ್ಷಿಸಲ್ಪಟ್ಟನು. ಮತ್ತು ರಷ್ಯಾದ ಮಾಸ್ಕೋದ ಯುದ್ಧಾ ಪರಾದಿಗಳ ಶಿಬಿರದಲ್ಲಿ ಕೊನೆಯುಸಿರೆಳೆದನು.  ಒಂದೇ ವೇಳೆ ಶಾಂತರೂಪ ಪೌಲಾ ಅವನನ್ನು ಮದುವೆಯಾಗಿದ್ದರೇ ಜೀವನ ಪರಿಯಂತ ಪಚ್ಚಾತ್ತಾಪದಲ್ಲಿ ಮುಳುಗಿ ಹೋಗುತ್ತಿದ್ದಳು. ಮೂಲಗಳ ಪ್ರಕಾರ ಪೌಲಾಳು ಕೊನೆಯವರೆಗೂ ಅವಿವಾಹಿತೆಯಾಗಿಯೇ ಉಳಿದಳು ಎನ್ನಲಾಗುತ್ತದೆ.

ಯುದ್ಧದಲ್ಲಿ ಜರ್ಮನಿಯ ಪತನವಾಗುತ್ತದೆ. ಇತ್ತಕಡೆ ಅಡಾಲ್ಫ್ ಹಿಟ್ಲರ್ ಆತ್ಮಹತ್ಯೆ ಮಾಡಿಕೊಂಡನು. ಆಗ ಅಮೇರಿಕನ್ ಇಂಟೆಲಿಜೆನ್ಸ್  ಆಫೀಸರ್ ಗಳ ಕೈಗೆ ಪೌಲಾ ಸಿಕ್ಕಿ ಬೀಳುತ್ತಾಳೆ. ಪೌಲಾ ವಿಚಾರಣಾ ಸಂದರ್ಭದಲ್ಲಿ ಲಕ್ಷಾಂತರ ಅಮಾಯಕರ ಮಾರಣ ಹೋಮಕ್ಕೆ ತನ್ನ ಅಣ್ಣ ಅಡಾಲ್ಫ್ ಹಿಟ್ಲರ್ ಹಾಗು ಅವನ ಕ್ರೂರ ಸಿದ್ದಾಂತಗಳೇ ಕಾರಣ ಎಂದು ತಿಳಿದು ಬಹುವಾಗಿ ನೊಂದುಕೊಂಡಳು. ಮತ್ತು ಯಹೂದಿ ವಸತಿ ನಿಲಯದ ಜನರ ಅಭಿಪ್ರಾಯದ ಮೇರೆಗೆ ಅಮೆರಿಕನ್ನರು ಅವಳನ್ನು ಬಿಡುಗಡೆ ಮಾಡಿದರು.

hitler2

ಫೋಟೋ ಕೃಪೆ : google.com

ಬಿಡುಗಡೆಯಾದ ಬಳಿಕ ಪೌಲಾ ವಿಯೆನ್ನಾಗೆ ಹಿಂತಿರುಗಿ ಅಲ್ಲಿನ ಒಂದು ಕರಕುಶಲ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಳು. ಲಕ್ಷಾಂತರ ಜನರ ಮಾರಣ ಹೋಮದ ಕರಾಳತೆಯನ್ನು ನೆನಪಿಸುವ “ಹಿಟ್ಲರ್” ಎಂಬ ನಾಮಧೇಯ ಅವಳಿಗೆ ಬೇಡವಾಗಿತ್ತು. ಆ ಕಾರಣಕ್ಕೆ ತನ್ನ ಹೆಸರನ್ನು “ಪೌಲಾ ಹಿಟ್ಲರ್” ನಿಂದ “ಪೌಲಾ ವೂಲ್ಫ್” ಎಂದು ಬದಲಾಯಿಸಿಕೊಂಡಳು.

ಸಂದರ್ಶನವೊಂದರಲ್ಲಿ ತನ್ನ ಅಣ್ಣ “ಅಡಾಲ್ಫ್ ಹಿಟ್ಲರ್” ನ ಬಾಲ್ಯಾವಸ್ಥೆ ಹಾಗೂ  ಅವನಲ್ಲಿದ್ದ ತಂದೆಯಂತಹ ಪ್ರೀತಿ, ವಾತ್ಸಲ್ಯದ ಬಗ್ಗೆ ಮಾತ್ರ ಹೇಳುತ್ತಾಳೆ. ಮತ್ತು ತನಗಿದ್ದ ಒಬ್ಬ ಅಣ್ಣನನ್ನು ಬಾಲ್ಯದಲ್ಲೇ ಕಳೆದು ಕೊಂಡೆನೆಂದು ವಿಷಾದಿಸುತ್ತಾಳೆ.

ಎರಡನೇ ಮಹಾಯುದ್ಧದ ಒಂದು ಕರಾಳ ರಾತ್ರಿ ರೇಡಿಯೋ ವರದಿಗಳಲ್ಲಿ ಹಾಗಂತೆ- ಹೀಗಂತೆ ಸುದ್ದಿಗಳು ಹರಿದಾಡುತ್ತಿದ್ದವು. ಆಗ ಪೌಲಾ ತನ್ನ ಮುಂದಿನ ದಿನಗಳು ಹೇಗೆ ಎಂದು ಚಿಂತಾಗ್ರತಳಾಗಿದ್ದಳು. ಮುಂದೆ ಪೌಲಾಳು ತನ್ನ ಅರವತ್ತನಾಲ್ಕನೇಯ ವಯಸ್ಸಿನಲ್ಲಿ ೧೯೬೦ ರಲ್ಲಿ ತನ್ನ ಕೊನೆಯುಸಿರೆಳೆದಳು. ಹೀಗೆ ಹಿಟ್ಲರ್ ವಂಶದ ಕೊನೆಯ ಕೊಂಡಿ ಪ್ರಪಂಚದಿಂದ ಕೊನೆಯಾಯಿತು.

ಪ್ರೇರಣೆ : ಪೂರ್ಣಚಂದ್ರ ತೇಜಸ್ವಿ

ಮಾಹಿತಿ ಸಂಗ್ರಹ : ವಿಕಿಪೀಡಿಯ, ಮೀಡಿಯಂ.ಕಾಂ


  • ಚಂದ್ರಶೇಖರ ಕುಲಗಾಣ

kunigal

(ಖರೀದಿಸಿ: ಕನ್ನಡದ ಪುಸ್ತಕಗಳು, ಟಿ ಶರ್ಟ್ ಗಾಗಿ ಇಲ್ಲಿ ಸಂಪರ್ಕಿಸಿ).

 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW