ಮಾಲಿ ಗೌಡರ ಮನೆತನದ ಸುಂದರ ಮನೆ



ಗುಲ್ಬರ್ಗಾದಿಂದ ಸುಮಾರು ೨೫ ಕಿಮೀ ದೂರದಲ್ಲಿ ಜೇವರ್ಗಿ ಹೋಗೋ ರಸ್ತೆಯಲ್ಲಿ ಫಿರೋಜಾಬಾದ್ ಎನ್ನುವ ಪುಟ್ಟ ಹಳ್ಳಿಯಿದೆ. ಅಲ್ಲೊಂದು ಸುಂದರವಾದ ಹಳೆಯ ವಾಡೆಯಂತಹ ದೊಡ್ಡದಾದ ಕಲ್ಲಿನಿಂದ ಕಟ್ಟಿದ ಮನೆಯೊಂದಿದೆ. ಮುಂದೆ ಓದಿ…

ಮಾಲಿ ಗೌಡರ ಮನೆತನದ ಈ ಮನೆ ಸುಮಾರು ೨೦೦ ವರ್ಷಕ್ಕಿಂತ ಹಳೆಯದಾಗಿದ್ದು, ಈ ಮನೆಯ ವಿಶೇಷತೆಯೇನೆಂದರೆ ವಾಡೆಯಂತೆ ವಿಸ್ತಾರವಾಗಿದೆ. ಒಂದು ಎಕರೆಯಲ್ಲಿ ಈ ಮನೆ ನಿರ್ಮಾಣವಾಗಿದ್ದು, ಒಂದೊಂದು ಗೋಡೆ 3 ರಿಂದ 4 ಫೀಟ್ ಅಗಲವನ್ನು ಹೊಂದಿದೆ. ಈ ಮನೆಯಲ್ಲಿ 16 ಕೋಣೆಗಳಿವೆ. ಈ ಮನೆಯನ್ನು ಪೂರ್ತಿಯಾಗಿ ಕಲ್ಲಿನಿಂದಲೇ ಕಟ್ಟಲಾಗಿದೆ. ಆಗ ಸಿಮೆಂಟ್ ಇಲ್ಲದ ಕಾರಣ ಮಣ್ಣನ್ನು ಬಳಸಿ ಕಲ್ಲನ್ನು ಒಂದರಮೇಲೊಂದರಂತೆ ಸುಸಜ್ಜಿತವಾಗಿ ಜೋಡಿಸಲಾಗಿದೆ. ಮತ್ತೊಂದು ಕುತೂಹಲವೆಂದರೆ ಮೇಲ್ಚಾವಣಿ ಕೂಡಾ ಪಾಟಿಗಲ್ಲಿನಿಂದ ಜೋಡಿಸಲಾಗಿದೆ, ಅದು ಬೀಳದಂತೆ ಮೊದಲು ಮರದ ದಿಮ್ಮೆಯನ್ನಿಟ್ಟು ಮೇಲೆ ಪಾಟಿಗಲ್ಲನ್ನು ಇಡಲಾಗಿದೆ. ಇಲ್ಲಿಯವರೆಗೂ ಈ ಮನೆ ಸ್ವಲ್ಪವೂ ಹಾಳಾಗದಂತೆ ಈ ಮನೆತನವು ನೋಡಿಕೊಂಡು ಬಂದಿದೆ. ಮನೆಯ ಹಿಂದೆ ಇದ್ದ ಒಂದು ಎಕರೆ ಜಾಗವನ್ನು ಮಾಲಿಗೌಡರ ಹಿರಿಯರು ಶಾಲೆ ಕಟ್ಟಲು ಸರ್ಕಾರಕ್ಕೆ ಉಚಿತವಾಗಿ ದಾನ ಕೊಟ್ಟಿದ್ದಾರೆ.

ಈಡೀ ಫಿರೋಜಾಬಾದ್ ಹಳ್ಳಿಗೆ ಮಾಲಿ ಗೌಡರ ಮನೆತನವೆಂದರೆ ದೊಡ್ಡ ಕುಟುಂಬವಾಗಿದೆ. ಹನುಮಂತ ರಾವ್ ಪಾಟೀಲ್ ಅವರ ಮಗನನ್ನು ದತ್ತು ಪಡೆದ ಮಾಲಿ ಗೌಡರ ಮನೆತನದ ಸೊಸೆ ಸುಶೀಲಾಬಾಯಿ ರಾಘವೇಂದ್ರ ರಾವ್ ಪಾಟೀಲರು ಈ ಮನೆಯ ಒಡತಿಯಾಗಿದ್ದು, ಅವರ ದತ್ತು ಪುತ್ರ  ಪವನ ಫಿರೋಜಾಬಾದ್ ಅವರು ತಮ್ಮ ಮನೆಯ ಬಗ್ಗೆ ಸಂತೋಷದಿಂದ ಹಂಚಿಕೊಂಡಿದ್ದಾರೆ.

ಆ ಮನೆತನದ ಮನೆಯ ಸುಂದರ ಫೋಟೋಗಳು ಇಲ್ಲಿವೆ : 

 

This slideshow requires JavaScript.


  • ಶಾಲಿನಿ ಹೂಲಿ ಪ್ರದೀಪ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading