ವಿವಿಧತೆಯಲ್ಲಿ ಏಕತೆಯನ್ನು ಕಂಡಂತಹ ದೇಶ ನಮ್ಮದು, ‘ನನ್ನ ದೇಶ’ ವಿಭನ್ನ, ಸುಂದರ ಎನ್ನುವುದಕ್ಕೆ ಈ ಕವಿತೆ ಸಾಲುಗಳು ಸಾಕು… ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ಬರೆದ ಕವಿತೆಯಿದು, ಮುಂದೆ ಓದಿ…
ನನ್ನ ದೇಶವು ಹಲವು #ಭಾಷೆಯು
ವಿಧವಿಧವಿಲ್ಲಿ ನೂರಾರು
ಬಹಳ ಧರ್ಮಗಳು ಬಿಳಲು ಜಾತಿಗಳು
ವಿವಿಧತೆಯಲ್ಲಿ ತವರೂರು
ಕೋಟಿ ಜನಗಳು ಅವರ ಭಾವವು
ವೇಷಭೂಷಣವು ಹಲವಾರು
ಧರ್ಮಕರ್ಮಗಳು ಬೆರೆವ #ತ್ಯಾಗವು
ಒಂದಾಗುವರೆಲ್ಲ ನಮ್ಮವರು
ರಾಜ್ಯಗಳಲವು ವ್ಯಾಜ್ಯಗಳಿಹವು
ಸಂವಿಧಾನದಡಿ ಹಂಚಿಕೆಯು
ಹಳ್ಳಿಹಳ್ಳಿಯಲು ಗಲ್ಲಿಗಲ್ಲಿಯಲು
ತ್ರಿವರ್ಣ ಧ್ವಜವೆ ಏಕತೆಯು
ದ್ವೇಷವಿಲ್ಲದಲೆ ದೇಶಸೇವೆಯಲಿ
ಎಲ್ಲಾ ಧರ್ಮದ ಯುವಕರೂ
ಹಗಲಿರುಳೆನ್ನದೆ ಗಡಿಯನು ಕಾಯ್ವ
ಭಾರತಮಾತೆಯ ಪುತ್ರರೂ
ಹಗಲು ರಾತ್ರಿಯು ದುಡಿವ #ರೈತರೆ
ಹೆಮ್ಮೆಯ ನಾಡಿನ ಕೃಷಿಕರು
ಹಸಿದ ಹೊಟ್ಟೆಗೆ ಅನ್ನವಿಕ್ಕುತ
ದೇಶಕೆ ಬೆನ್ನಲುಬು ಆಗಿಹರು.
- ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು
.