ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರಿಗೆ ಈ ಕವಿತೆ ಪ್ರಶಸ್ತಿಯನ್ನು ತಂದು ಕೊಟ್ಟಿದ್ದು, ಸಾಕಷ್ಟು ಜನರ ಪ್ರೀತಿಗೆ ಪಾತ್ರವಾದ ಕವಿತೆ. ಮುಂದೆ ಓದಿ…
ಇಳೆಯಂಗಳ ಬೆಳದಿಂಗಳ
ಬೆಳಕಿಳಿಸುವ #ನಲ್ಲೆ
ಮನೆಯಂಗಳ ಮನದಂಗಳ
ಹೊಳಪಿಳಿಸುವ ಮಲ್ಲೆ
ತಿಳಿಮುಗಿಲಲಿ ತೇಲ್ತೇಲುವ
ಮಿನುಗೇಳುವ ತಾರೆ
ನಳನಳಿಸುವ ನೈಯ್ದಿಲೆಯ
ನಿನ್ನಂದದಾ ಮೋರೆ
ಒಂದಿರುಳಲಿ ಮುಂಗುರಳಲಿ
ಸುಳಿದಾಡಿದ ನೀರೆ
ಮನತೋಯ್ದಿತು ನಲಿದಾಡಿತು
ಬಳಿಸೇರಲು ಬಾರೆ
ಸುಳಿಗಾಳಿಯು ತಿಳಿಕಣ್ಗಳು
ಕುಡಿ ನೋಟದ ಆಟ
ಮಳೆ ವೇಳೆಯ ಹದಮಾಡಿಹ
ಹೊಳೆ ಬಳಿಯಲಿ ತೋಟ.
- ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು
