ಮೊದಲ ಸಾಲಿನಲ್ಲೇ ಇರಬೇಕೆಂಬ ಪೈಪೋಟಿ, ಎಲ್ಲರೂ ತನ್ನನ್ನು ಗುರುತಿಸಬೇಕು, ಹೇಗಾದರೂ ಮಾಡಿ ಹೆಸರುಗಳಿಸಬೇಕು ಹೀಗೆ ಅನೇಕ ವಿಷಯಗಳ ಸರಮಾಲೆಯಡಿಯಲ್ಲಿ ಅವಲಂಬನೆಗಿಂತ ಅಡಿಯಾಳಾಗಿ ಬದುಕುತಿದ್ದಾರೆ. ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣದಲ್ಲಿ ‘ಬಸವನ ಬವಣೆ’ ಕುರಿತಾಗಿದ್ದು ತಪ್ಪದೆ ಮುಂದೆ ಓದಿ…
ಹುಟ್ಟಿಸಿದ ದೇವರು ಹುಲ್ಲು ಮೇಯಿಸದೇ ಇರುತ್ತಾನೆಯೇ ಎಂಬ ಗಾದೆ ಮಾತಿದೆ. ಹುಟ್ಟಿಗೂ, ಹುಲ್ಲಿಗೂ ಬಹಳ ನಂಟು. (ನಾವು ಹುಲ್ಲಿನ ಬದಲು ಅನ್ನ ಅನ್ನಬಹುದು). ಹೀಗೆ ಬೆಳಬೆಳಗ್ಗೆ ಕೋಲೆ ಬಸವನ್ನ ಎಳೆದುಕೊಂಡು, ಕಂಕುಳಲ್ಲಿ ಒಂದು ಮಗೂನ ಕಟ್ಕಂಡು ಒಬ್ಬ ಹೆಂಗಸಿನ ದಿನಚರಿ ಸಾಮಾನ್ಯವಾಗಿ ಎಲ್ಲಾ ಊರು ಕೇರಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ದೃಶ್ಯ.
ಬಸವನ ಹಿಂದೆ ಬಾಲ ಅಂತಾರಲ್ಲ ಹಾಗೆ ಅವಳ ಹಿಂದೆ ಬಸವ, ಬಸವನ ಮುಂದೆ ಅವಳು. ಒಬ್ಬರಿಗೊಬ್ಬರು ಆಸರೆ, ಆಧಾರ. ಬಸವ ಏನೋ ಹುಲ್ಲು ತಿಂತಾನೆ, ಹಾಗಂತ ಗಾದೆ ಮಾತಿನಂತೆ ಮನುಷ್ಯ ಹುಲ್ಲು ತಿನ್ನಕ್ಕಾಗಲ್ಲ, ಅದರ ಬದಲಿಗೆ ಊಟ ಎನ್ನಬಹುದು. ಸ್ವಾಮಿ ಕಾರ್ಯ ಸ್ವಕಾರ್ಯ ಅನ್ನೋಹಾಗೆ, ಬಸವನಿಗೆ ಬಾಳೆಹಣ್ಣು, ಇವಳ ಜೋಳಿಗೆಗೆ ಅಕ್ಕಿ, ಬೆಲ್ಲ, ಕಾಸು, ನೋಟು ಎಲ್ಲಾ.

ಫೋಟೋ ಕೃಪೆ : google
ಅವಲಂಬನೆ ಹೀಗೆ, ಒಬ್ಬರಿಗೊಬ್ಬರು…..ಬಸವನಿಗೆ ಬಾಳೆಹಣ್ಣು ತಿನ್ನಿಸಿ ಸಾಕು ಅದಕ್ಕೆ ಎಂದು ಮಿಕ್ಕಿದ್ದನ್ನು ಅವಳು ತನ್ನ ಜೋಳಿಗೆ ತುಂಬಿಸಿಕೊಳ್ಳುವಾಗ, ಅಯ್ಯೋ ಪಾಪ ಮೂಕ ಪ್ರಾಣಿಗೆ ಸ್ವಲ್ಪವೇ ಹಣ್ಣು ತಿನ್ನಿಸಿ ತಾನು ಮಿಕ್ಕಿದ್ದೆಲ್ಲಾ ತಗೋತಾಳೆ ಅಂದುಕೊಳ್ಳುವ ನಾವು, ಅವಳ ಹೊಟ್ಟೆ ಪಾಡು ನೋಡಬೇಕಲ್ಲ. ಕಂಕುಳಲ್ಲಿ ಇರುವ ಕೂಸಿಗೂ ಸಹ ಹೊಟ್ಟೆ ತುಂಬ ಬೇಕಲ್ಲಾ.
ಹೀಗೆ ಆಹಾರ ಸರಪಳಿ ಸುತ್ತಿಕೊಂಡಿರುವುದು. ಕೊನೆಗೆ ಒಂದು ತುತ್ತು ಅನ್ನಕ್ಕಾಗಿ ಹೋರಾಟ, ಹಿಡಿ ಮಣ್ಣಿಗಾಗಿ ಜೀವನ ಪರ್ಯಂತ ಸೆಣೆಸಾಟ. ದೇವರು, ಪೂಜಾರಿಯ ಮೇಲೆ ಅವಲಂಬಿತ, ಭಕ್ತರು ಪೂಜಾರಿಯ ಮೇಲೆ ಅವಲಂಬಿತರು, ದೇವರು ಭಕ್ತಾದೀನ…..ಹೀಗೆ ಒಂದಕ್ಕೊಂದು ಕೊಂಡಿ ಬೆಸೆದಿರುವುದು, ನಡೆದುಕೊಂಡು ಬರುತ್ತಿರುವುದು.
ಒಬ್ಬರಿಗೊಬ್ಬರು ಎಂದು ಹೀಗೆ ಅಲ್ಲವೇ…..ಮಾನವರು ನಾವು. ಬಸವನ ಬವಣೆ ಒಂದೇ ಅಲ್ಲ ಮನುಜನ ಬವಣೆಯೂ ಇದೆ.
ಒಬ್ಬರಿಗೊಬ್ಬರು ಅವಲಂಬಿತರಾಗಿಯೇ ಬದುಕಬೇಕು. ಮೂಕಪ್ರಾಣಿಯಾಗಲಿ, ಪಕ್ಷಿಗಳಾಗಲಿ, ಮನುಷ್ಯನಾಗಲಿ, ಸಕಲ ಜೀವ ರಾಶಿಗಳದ್ದೂ ಅವಲಂಬನೆಯ ಬದುಕು. ಬದುಕು ತಾಂತ್ರಿಕವಾದರೂ ಅವರ ಜೀವನ ಅವರು ನೋಡಿಕೊಂಡಿದ್ದರೂ ಅವಲಂಬಿತ ಬದುಕೇ ಎಲ್ಲರದು.
ಜೀವನ ನಡೆಸಲು ಹೋರಾಟ, ಮೊದಲ ಸಾಲಿನಲ್ಲೇ ಇರಬೇಕೆಂಬ ಪೈಪೋಟಿ, ಎಲ್ಲರೂ ತನ್ನನ್ನು ಗುರುತಿಸಬೇಕು, ಹೇಗಾದರೂ ಮಾಡಿ ಹೆಸರುಗಳಿಸಬೇಕು ಹೀಗೆ ಅನೇಕ ವಿಷಯಗಳ ಸರಮಾಲೆಯಡಿಯಲ್ಲಿ ಅವಲಂಬನೆಗಿಂತ ಅಡಿಯಾಳಾಗಿ ಬದುಕುತಿದ್ದಾರೆ ಅನ್ನುವಂತೆ ತೋರುತ್ತದೆ ಕೆಲವೊಮ್ಮೆ, ಕೆಲವರ ನಡಾವಳಿಕೆ.

ಫೋಟೋ ಕೃಪೆ : google
ಒಂದು ಹಿಡಿ ಅನ್ನಕ್ಕಾಗಿ ದುಡಿತ, ಹಂಗು, ಅವಮಾನ, ದುಃಖ, ಗುಲಾಮಗಿರಿ ಇದೆಲ್ಲವೂ ಸಹ ಅವಲಂಬನೆಯ ಬದುಕಿಗೆ ಬುನಾದಿ. ಅವಲಂಬನೆಯ ಬದುಕಿಗೆ ಶ್ರೀಮಂತ, ಬಡವ ಅನ್ನುವ ಭೇದಭಾವ ಇಲ್ಲ. ಅವರವರ ಯೋಗ್ಯತಾನುಸಾರ ಅವಲಂಬಿತರಾಗಲೇ ಬೇಕು.
ಕೋಪ, ದ್ವೇಷ, ಖಿನ್ನತೆ, ದುಃಖ, ಸಂತೋಷ, ಭಯ ಎಲ್ಲವೂ ಅವಲಂಬಿತರಾಗಿದ್ದಾಗ ಕಾಣುವ, ಕಾಡುವ ಮಾನಸಿಕ ಅಸಮತೋಲನ. ಕೋಲೆ ಬಸವನ ಹಿಡಿದು ಬರುವವಳಿಗೆ ಬಸವನಿಗೆ ಹುಷಾರು ತಪ್ಪಿದರೆ ಅವಳಿಗೆ ಅವಳ ಸಂಸಾರಕ್ಕೆ ಅನ್ನ ಆಹಾರವಿಲ್ಲ. ಬಸವನಿಗೆ ಆಹಾರವಿಲ್ಲ ಹೀಗೆ ಜೀವನ ಅಸ್ತವ್ಯಸ್ತಗೊಂಡು ಮಾನಸಿಕ ಅಸಮತೋಲನವಾಗುತ್ತದೆ.
ಅವಲಂಬನೆಯಾಗಲಿ, ಸ್ವಾವಲಂಬನೆಯಾಗಲಿ ಪರಾವಲಂಬನೆಯಾಗಲಿ ಎಲ್ಲರೂ ಬದುಕಲೇ ಬೇಕು. ಒಬ್ಬರಿಗೊಬ್ಬರು ಆಗಲೇ ಬೇಕು. ಇದನ್ನು ಅರಿತರೆ ನಾನೇ, ನಂದಿಂದಲೇ ಅನ್ನುವ ಅಹಂ ಅನ್ನು ದೂರ ಮಾಡಬಹುದು. ಎಲ್ಲರಂತೆ ನಾನು, ಎಲ್ಲರೊಂದಿಗೆ ನಾನು ಎಂದು ಅರಿತಾಗ ಜೀವನ ಸಾರ್ಥಕವೆನಿಸುತ್ತದೆ.
ಮಾನಸ….ಇದು ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು:
- ಚಂಪಾ ಚಿನಿವಾರ್ (ಆಪ್ತ ಸಮಾಲೋಚಕಿ) ಪರಿಚಯ
- ಮಾನಸ….ಇದು ಮನಸಿನ ಮಾತು (ಭಾಗ-೧)
- ಮಾನಸ….ಇದು ಮನಸಿನ ಮಾತು (ಭಾಗ-೨)
- ಮಾನಸ….ಇದು ಮನಸಿನ ಮಾತು (ಭಾಗ-೩)
- ಮಾನಸ….ಇದು ಮನಸಿನ ಮಾತು (ಭಾಗ-೪)
- ಮಾನಸ….ಇದು ಮನಸಿನ ಮಾತು (ಭಾಗ-೫)
- ಮಾನಸ….ಇದು ಮನಸಿನ ಮಾತು (ಭಾಗ-೬)
- ಮಾನಸ….ಇದು ಮನಸಿನ ಮಾತು (ಭಾಗ-೭)
- ಮಾನಸ….ಇದು ಮನಸಿನ ಮಾತು (ಭಾಗ-೮)
- ಮಾನಸ….ಇದು ಮನಸಿನ ಮಾತು (ಭಾಗ-೧೦)
- ಮಾನಸ….ಇದು ಮನಸಿನ ಮಾತು (ಭಾಗ-೧೧)
- ಮಾನಸ….ಇದು ಮನಸಿನ ಮಾತು (ಭಾಗ-೧೨)
- ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ
