ಖಿನ್ನತೆ ಈ ಪದ ಕೇಳಿದರೇನೆ ಮನಸಿಗೆ ಬೇಸರವಾಗುತ್ತದೆ. ಮನುಷ್ಯ ಏತಕ್ಕಾಗಿ ಬಲಹೀನನಾಗುತ್ತಾನೆ? ಏತಕ್ಕಾಗಿ ಜೀವ ಕಳೆದು ಕೊಳ್ಳುತ್ತಾನೆ? ಕಾರಣ ಖಿನ್ನತೆ. ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣದಲ್ಲಿ ‘ಖಿನ್ನತೆ… ಏಕೆ ಹೀಗೆ?’ ತಪ್ಪದೆ ಮುಂದೆ ಓದಿ…
ಸಮಾಜದಲ್ಲಿ ಹೆಸರು ಮಾಡಿದ, ಸಮಾಜ ಸುಧಾರಣೆಗಾಗಿ ತಮ್ಮ ಜೀವನ ಮುಡಿಪಾಗಿಟ್ಟು ಸಮಾಜಕ್ಕೆ ಮಾದರಿಯಾಗುವ ಬದಲು ತಾವೇ ತಪ್ಪು ಮಾಡಿ ಆತ್ಮಹತ್ಯೆ ಮಾಡಿಕೊಂಡು ಜೀವ ಕಳೆದುಕೊಳ್ಳುತ್ತಿರುವ, ಕಳೆದುಕೊಂಡಿರುವ ಎಷ್ಟೋ ಧಾರುಣ ಘಟನೆಗಳು ನಡೆಯುತ್ತಿದೆ. ಮನುಷ್ಯ ಏತಕ್ಕಾಗಿ ಬಲಹೀನನಾಗುತ್ತಾನೆ? ಏತಕ್ಕಾಗಿ ಜೀವ ಕಳೆದು ಕೊಳ್ಳುತ್ತಾನೆ?
ಕಾರಣ ಖಿನ್ನತೆ…….
ಖಿನ್ನತೆ ಈ ಪದ ಕೇಳಿದರೇನೆ ಮನಸಿಗೆ ಬೇಸರವಾಗುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರೆಲ್ಲರಿಗೂ ಖಿನ್ನತೆ ಕಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಶಾಲೆ, ಕಾಲೇಜಿಗೆ ಹೋಗುವ ಮಕ್ಕಳಲ್ಲಿ ಶೇಕಡ 40 ಭಾಗದ ಮಕ್ಕಳಲ್ಲಿ ಖಿನ್ನತೆ ಕಾಣಬಹುದು. ಮೊದಲಿಗೆ ಅವರ ಮನೆಯ ವಾತಾವರಣ. ತಂದೆ ತಾಯಿ ಅವರ ಮೇಲೆ ಎಷ್ಟು ಪ್ರೀತಿ ಮಾಡುತ್ತಾರೆ ಎಂಬುದು. ಗಂಡು ಮಕ್ಕಳು ಹಾಗು ಹೆಣ್ಣು ಮಕ್ಕಳಲ್ಲಿ ಬೇದಭಾವ ತೋರುವುದು. ಮಕ್ಕಳ ಬಣ್ಣದ ಮೇಲೂ ಹೋಲಿಕೆ ಮಾಡಿ ಮೂದಲಿಸುವುದು, ಆಟಪಾಠಗಳಲ್ಲಿಯೂ ಸಹ ಅಕ್ಕ ಪಕ್ಕದ ಮನೆಯ ಮಕ್ಕಳೊಂದಿಗೆ ಅಥವ ಸಂಬಂಧಿಕರ ಮಕ್ಕಳ ಜೊತೆ ಹೋಲಿಸಿ ಮೂದಲಿಸುವುದು, ಲೈಂಗಿಕ ದೌರ್ಜನ್ಯ ಖಿನ್ನತೆಗೆ ಕಾರಣವಾಗುತ್ತದೆ.

ಫೋಟೋ ಕೃಪೆ : google
ಇಂದಿನ ಪೀಳಿಗೆಯವರಿಗೆ ಪ್ರೀತಿ ಪ್ರೇಮ ಎಂದು ಪ್ರೌಢವಾಗಿ ಯೋಚಿಸುವ ಬದಲು ಅವರಿಗೆ ಇನ್ಸ್ಟಂಟ್ ಪ್ರೀತಿ ಬೇಕು. ಪ್ರೀತಿ ಕೊರತೆ ಏಕೆ ಇರುತ್ತದೆ ಎಂದರೆ ಅದೂ ಸಹ ಮನೆಗಳಲ್ಲಿಯೇ ಪ್ರಾರಂಭವಾಗುತ್ತದೆ. ತಂದೆ ತಾಯಿ, ಅಜ್ಜ ಅಜ್ಜಿ ಹಿರಿಯರ ಪ್ರೀತಿ ದೊರಕದಿದ್ದಾಗ ಮನೆಯ ಹೊರಗಡೆ ಅಂದರೆ ಸ್ನೇಹಿತರ ಬಳಿ ಬಯಸುತ್ತಾರೆ. ಮನೆಯಲ್ಲಿ ಹೇಳಿಕೊಳ್ಳಲಾಗದ ಸಮಸ್ಯೆಗಳನ್ನು ಗೆಳೆಯ/ಗೆಳತಿಯರ ಜೊತೆ ಹಂಚಿಕೊಳ್ಳುತ್ತಾರೆ. ಕೆಲವರಿಗೆ ನಿಜವಾದ ಪ್ರೀತಿ ಸಿಗಬಹುದು ಅಥವಾ ಟೈಂ ಪಾಸ್ ಪ್ರೀತಿ ಆಗಿರಬಹುದು ಇದನ್ನು ಅರಿಯುವ ಹೊತ್ತಿಗೆ ಹೊತ್ತು ಮೀರಿರುತ್ತದೆ ಸ್ನೇಹದಲ್ಲೂ ಮೋಸ ಹೋದಾಗ ದುಷ್ಟ ಚಟಗಳಿಗೆ ದಾಸರಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ ಇದರಿಂದ ಖಿನ್ನತೆಗೆ ಒಳಗಾಗುತ್ತಾರೆ.
ಇನ್ನೂ ಮುಖ್ಯ ಅಂಶವೆಂದರೆ ಮನೆಯಲ್ಲಿ ಮಕ್ಕಳ ಎದುರಿಗೆ ತಂದೆ ತಾಯಿ ಜಗಳ ಆಡುತಿದ್ದರೆ ಮನೆಯ ವಾತಾವರಣವೇ ಬೇಸರವಾಗಿ ಒಂಟಿತನದಿಂದ ಖಿನ್ನತೆಗೆ ಒಳಗಾಗುತ್ತಾರೆ. ಓದುವುದರಲ್ಲಿ ಆಸಕ್ತಿ ಕಳೆದುಕೊಂಡು ಶಾಲೆ ಕಾಲೇಜಿನಲ್ಲೂ ಉಪಾಧ್ಯಾಯರ ನಿಂದನೆಗೆ ಒಳಪಟ್ಟು ಖಿನ್ನತೆ ಕಾಡತೊಡಗುತ್ತದೆ.

ಒಂದು ವಯಸಿನವರೆಗೂ ತಂದೆ ತಾಯಿಯ ಮಾರ್ಗದರ್ಶನ ಬೇಕಾಗುತ್ತದೆ. ತಪ್ಪು ಮಾಡಿದಾಗ ತಂದೆ ತಾಯಿ ಬುದ್ಧಿ ಮಾತು ಹೇಳಿದಾಗ ಅರಿತು ನಡೆವ ಮನಸಿರಬೇಕು. ತಮಗೆ ಯಾವ ವಿಷಯದಲ್ಲಿ ಓದಲು ಕಷ್ಟವಾಗುತಿದೆ ಎಂದಾಗ ಪೋಷಕರ ಬಳಿ ಅಥವಾ ಅವರ ಟೀಚರ್ ಬಳಿ ಸಮಸ್ಯೆ ಹೇಳಿಕೊಂಡಾಗ ಖಂಡಿತವಾಗಿಯೂ ಪರಿಹಾರ ಸಿಗುತ್ತದೆ. ಸಂಕೋಚದಿಂದ, ಭಯದಿಂದ ಯಾರ ಜೊತೆಯೂ ಬೆರೆಯದೆ ಇದ್ದಾಗ ಖಿನ್ನತೆ ಕಾಡಿಸುತ್ತದೆ.
ಮತ್ತೊಂದು ಸಮಸ್ಯೆ ಎಂದರೆ ಮತ್ತೊಬ್ಬರ ಉಡುಗೆ ತೊಡುಗೆಗಳನ್ನು ನೋಡಿ ತಮ್ಮ ಬಳಿ ಅಂತಹ ಉಡುಪು ಇಲ್ಲದಿದ್ದಾಗ ತಂದೆ ತಾಯಿಯನ್ನು ಪೀಡಿಸಿ ಕೊಡಿಸಲು ಕೇಳಿ ಅದು ಸಾಧ್ಯವಾಗದಿದ್ದಾಗ ಅವಮಾನಗೊಂಡು ಅಥವಾ ಹತಾಷೆಯಿಂದ ಖಿನ್ನತೆಗೊಳಗಾಗಬಹುದು. ಇಂತಹ ಸಂದರ್ಭದಲ್ಲಿ ಖಂಡಿತವಾಗಿಯೂ ಕೌನ್ಸಲಿಂಗ್ ಅಗತ್ಯವಿರುತ್ತದೆ. ಕೌನ್ಸಿಲರ್ ಬಳಿ ತಮ್ಮ ತೊಂದರೆಗಳನ್ನು ಹೇಳಿಕೊಂಡಾಗ ಅವರು ಪರಿಹಾರ ಕಂಡುಕೊಳ್ಳುವ ರೀತಿ ಹಾಗು ಕೆಲವು ಟಿಪ್ಸ್ ಗಳನ್ನು ಕೊಡುತ್ತಾರೆ. ಅವರು ಹೇಳಿದಂತೆ ಕೇಳಿ ನಡೆದರೆ ಖಿನ್ನತೆಯಿಂದ ಹೊರಬರಬಹುದು.
ಯಾವುದೇ ವಯಸಿನಲ್ಲೂ ಮುಕ್ತ ಸಂಭಾಷಣೆ, ಮನೆಯ ಪರಿಸರ, ಪ್ರೀತಿಯ ಒಡನಾಟ ಸಮ ಮನಸ್ಕರ ಜೊತೆ ಚರ್ಚೆ ಇದ್ದಾಗ ಖಿನ್ನತೆಗೆ ಅವಕಾಶ ಇರುವುದಿಲ್ಲ ಹಾಗು ಖಿನ್ನತೆಯಿಂದ ಹೊರ ಬರಲು ಸುಲಭ ಮಾರ್ಗಗಳು.
ಯಾರ ಅಭಿಪ್ರಾಯಗಳ ಮೇಲೆ ಎಲ್ಲರ ಜೀವನ ನಿಂತಿಲ್ಲ, ಹಾಗಾಗಿ ಯಾರ ಮಾತಿಗೂ ಕಿವಿಗೊಡದೆ ತಮ್ಮ ಕೆಲಸದಲ್ಲಿ ಶ್ರದ್ದೆ ಹಾಗು ಸ್ವಚ್ಛ ಬದುಕು ಇದ್ದರೆ ಖಿನ್ನತೆಯಿಂದ ಮುಕ್ತರಾಗಿ ಬದುಕಬಹುದು. ಜೀವ ಅತ್ಯಮೂಲ್ಯವಾದದ್ದು ಪರೋಪಕಾರಿಯಾಗದಿದ್ದರೂ ಅಪಕಾರ, ಅಪಚಾರವೆಸಗದಿದ್ದರೆ ಸಾಕು. ಹಿರಿಯರೇ ಎಡವಿ ನಡೆದರೆ ಯುವ ಪೀಳಿಗೆಯವರಿಗೆ ದಾರಿ ತೋರುವವರಾರು? ಮಕ್ಕಳ ಭವಿಷ್ಯವೇನು? ಕಾಲವೇ ನಿರ್ಧರಿಸಬೇಕು.
ಮಾನಸ….ಇದು ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು :
- ಚಂಪಾ ಚಿನಿವಾರ್ (ಆಪ್ತ ಸಮಾಲೋಚಕಿ) ಪರಿಚಯ
- ಮಾನಸ….ಇದು ಮನಸಿನ ಮಾತು (ಭಾಗ-೧)
- ಮಾನಸ….ಇದು ಮನಸಿನ ಮಾತು (ಭಾಗ-೨)
- ಮಾನಸ….ಇದು ಮನಸಿನ ಮಾತು (ಭಾಗ-೩)
- ಮಾನಸ….ಇದು ಮನಸಿನ ಮಾತು (ಭಾಗ-೪)
- ಮಾನಸ….ಇದು ಮನಸಿನ ಮಾತು (ಭಾಗ-೫)
- ಮಾನಸ….ಇದು ಮನಸಿನ ಮಾತು (ಭಾಗ-೬)
- ಮಾನಸ….ಇದು ಮನಸಿನ ಮಾತು (ಭಾಗ-೭)
- ಮಾನಸ….ಇದು ಮನಸಿನ ಮಾತು (ಭಾಗ-೮)
- ಮಾನಸ….ಇದು ಮನಸಿನ ಮಾತು (ಭಾಗ-೯)
- ಮಾನಸ….ಇದು ಮನಸಿನ ಮಾತು (ಭಾಗ-೧೦)
- ಮಾನಸ….ಇದು ಮನಸಿನ ಮಾತು (ಭಾಗ-೧೧)
- ಮಾನಸ….ಇದು ಮನಸಿನ ಮಾತು (ಭಾಗ-೧೨)
- ಮಾನಸ….ಇದು ಮನಸಿನ ಮಾತು (ಭಾಗ-೧೩)
- ಮಾನಸ….ಇದು ಮನಸಿನ ಮಾತು (ಭಾಗ-೧೪)
- ಮಾನಸ….ಇದು ಮನಸಿನ ಮಾತು (ಭಾಗ-೧೫)
- ಮಾನಸ….ಇದು ಮನಸಿನ ಮಾತು (ಭಾಗ-೧೬)
- ಮಾನಸ….ಇದು ಮನಸಿನ ಮಾತು (ಭಾಗ-೧೭)
- ಮಾನಸ….ಇದು ಮನಸಿನ ಮಾತು (ಭಾಗ-೧೮)
- ಮಾನಸ….ಇದು ಮನಸಿನ ಮಾತು (ಭಾಗ-೧೯)
- ಮಾನಸ….ಇದು ಮನಸಿನ ಮಾತು (ಭಾಗ-೨೦)
- ಮಾನಸ….ಇದು ಮನಸಿನ ಮಾತು (ಭಾಗ-೨೧)
- ಮಾನಸ….ಇದು ಮನಸಿನ ಮಾತು (ಭಾಗ-೨೨)
- ಚಂಪಾ ಚಿನಿವಾರ್ – ಆಪ್ತ ಸಮಾಲೋಚಕಿ.
