ತನ್ನ ತಾಯಿ ರೂಪವತಿ ಎಂಬುದು ಮಗಳಿಗೆ ಸಹಿಸಲಾರದ ವಿಷಯವಾಗಿತ್ತು.ಕೆಲವು ಹೆಣ್ಣು ಮಕ್ಕಳಿಗೆ ತಮ್ಮ ತಾಯಿಯ ಸೌಂದರ್ಯದ ಮೇಲೆ ಮತ್ಸರ ಉಂಟಾಗಲು ಕೌಟುಂಬಿಕ, ಸಾಮಾಜಿಕ ಮತ್ತು ವ್ಯಕ್ತಿತ್ವ ಸಂಬಂಧಿ ಹಲವು ಕಾರಣಗಳು ಇರಬಹುದು. ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣದಲ್ಲಿ ‘ಮನವೆಂಬ ಮತ್ಸರ’ ವನ್ನು ತಪ್ಪದೆ ಮುಂದೆ ಓದಿ…
ವಾವ್ ನಿಮ್ಮ ಅಮ್ಮ ಸೂಪರ್ ಕಣೆ, ಸಖತ್ ಬ್ಯೂಟಿಫುಲ್. ಶಿ ಈಸ್ ಟೂ ಯಂಗ್ ಅಡೋರೆಬಲ್…..ಹೀಗೆ ಸ್ನೇಹಿತರು ಅವಳಿಗೆ ಹೇಳುತಿದ್ದರು. ದ್ವಿತೀಯ ಪಿ ಯು ಸಿ ಓದುತ್ತಿರುವ ಒಂದು ಹುಡುಗಿಯ ತಾಯಿ ಅಂದು ಕಾಲೇಜಿಗೆ ಮಗಳ ಪರೀಕ್ಷೆಯ ಫೀಸ್ ಕಟ್ಟಲು ಹೋಗಿದ್ದಾಗ ಈ ಮಾತುಗಳು ಕೇಳಿಬಂದಿತ್ತು. ಆ ತಾಯಿ ಮಗಳ ಎಲ್ಲಾ ಸ್ನೇಹಿತೆಯರನ್ನು ಮಾತನಾಡಿಸಿ ಹೊರಬಂದರು.
ಮಗಳಿಗೆ ಆ ದಿನ ಕಾಲೇಜಿನಲ್ಲಿ ಕೂರಲಾಗಲಿಲ್ಲ, ಯಾರ ಬಳಿಯೂ ಮಾತನಾಡಲು ಆಗಲಿಲ್ಲ. ತರಗತಿಗಳು ಮುಗಿಯುತಿದ್ದ ಹಾಗೆ ಅವಳಿಗಾಗಿ ಓಡಾಡಲು ಗೊತ್ತು ಮಾಡಿದ್ದ ಆಟೋದಲ್ಲಿ ಕುಳಿತು ಮನೆಗೆ ಹೊರಟಳು. ಗೆಳತಿಯರು ಇವಳ ವಿಚಿತ್ರ ವರ್ತನೆಗೆ ಆಶ್ಚರ್ಯ ಹಾಗು ಆತಂಕಗೊಂಡು ಏನಾಯಿತು ಇವಳಿಗೆ ಅಂದುಕೊಂಡು ಸುಮ್ಮನಾದರು.
ಮನೆಗೆ ಬರುತ್ತಿದ್ದ ಹಾಗೆ ಅವಳ ತಮ್ಮ ಎದುರಾದನು ಅವನನ್ನು ಪಕ್ಕಕ್ಕೆ ತಳ್ಳಿ, ವಿನಾಕಾರಣ ಜಗಳವಾಡಿಕೊಂಡು ಮಹಡಿ ಏರಿ ತನ್ನ ಕೋಣೆ ಸೇರಿಕೊಂಡಳು. ತಾಯಿಯ ಬಳಿ ಹೋಗಿ ಅಕ್ಕ ಹೀಗೆ ಮಾಡಿದಳು ಎಂದು ದುಃಖ ಹಾಗು ಕೋಪದಿಂದ ಹೇಳಿದ, ಯಾಕೋ ಅವಳ ವರ್ತನೆ ವಿಚಿತ್ರವಾಗಿದೆ ಏನಾಗಿದೆ ಎಂದು ಕೇಳು ಎಂದು ಹೇಳಿದನು. ತಾಯಿ ಆತಂಕಗೊಂಡು ಅವಳ ಕೋಣೆಗೆ ಹೋದರೆ, ಬಾಗಿಲು ಹಾಕಿಕೊಂಡಿದ್ದಳು. ಬಾಗಿಲು ಬಡಿದ ತಾಯಿ, ಬಾ ತಿಂಡಿ ಮಾಡಿದಿನಿ ತಿನ್ನು ಬಾ ಫ್ರೆಶ್ ಅಪ್ ಆಗಿ ಎಂದು ಹೇಳಿದಾಗ, ಒಳಗಿನಿಂದ ಮಗಳು ಜೋರಾಗಿ ಕಿರುಚುತ್ತಾ, ನಿನ್ನ ತಿಂಡಿ ಯಾವಳಿಗೆ ಬೇಕು, ನೀನೆ ತಿನ್ನು ಎಂದಳು.
ಈಗ ನಿಜವಾಗಿಯೂ ತಾಯಿಗೆ ಆತಂಕವಾಗಿತ್ತು. ಗಂಡ ಮನೆಗೆ ಬರುವುದನ್ನೇ ಕಾಯುತ್ತಿದ್ದ ಅವಳಿಗೆ, ಕಣ್ಣುಲ್ಲಿ ನೀರು ತುಂಬಿಕೊಂಡು ಮಗಳ ವರ್ತನೆಯ ಬಗ್ಗೆ ಹೇಳಿದಳು. ಗಂಡನೂ ಆತಂಕಗೊಂಡು ಮಹಡಿಗೆ ಹೋಗಿ ಮಗಳ ಕೋಣೆಯ ಮುಂದೆ ನಿಂತು ಬಾಗಿಲು ಬಡಿದು, ಕೆಳಗೆ ಬಾ ಎಂದು ಹೇಳಿದಾಗ, ಸ್ವಲ್ಪ ಹೊತ್ತು ಮಾತು ಕೇಳಿಸಲಿಲ್ಲ, ನಂತರ ಬಾಗಿಲನ್ನು ಜೋರಾಗಿ ಬಡಿದಾಗ ಬಾಗಿಲು ತೆಗೆದು ಹೊರ ಬಂದಳು ಮಗಳು.
ಏನು ಮನೆ ಇದು ಮಲಗಕ್ಕೂ ಬಿಡಲ್ವಾ ನೀವು ಎಂದು ಹೇಳಿ, ಬಂದಿರುವುದು ತನ್ನ ಅಪ್ಪ ಎಂದು ನೋಡಿ ಸುಮ್ಮನೆ ನಿಂತಳು. ತಂದೆ, ಏನಾಯ್ತು, ಕಾಲೇಜಿನಿಂದ ಬಂದ ತಕ್ಷಣ ಕೋಪ ಮಾಡಿಕೊಂಡು ರೂಮಲ್ಲೇ ಇದೀಯ ಹೊರಗೆ ಹೊರಬರದಾ ಎಂದು ಕೇಳಿದಾಗ ಅವರಿಗೂ ಧೋರಣೆಯಿಂದ ಉತ್ತರಿಸಿ ಮತ್ತೆ ರೂಮಿನೊಳಗೆ ಹೋಗಿ ಕುಳಿತಳು. ಅವಳ ತಂದೆ ತಾಯಿ ಇಬ್ಬರೂ ಏನಾಗಿರಬಹುದೆಂದು ತುಂಬಾ ಹೊತ್ತು ಚರ್ಚಿಸಿ, ಉತ್ತರ ಸಿಗದೆ, ಅವಳೇ ಸರಿಹೋಗಬಹುದೆಂದು ಸುಮ್ಮನಾದರು.

ಫೋಟೋ ಕೃಪೆ : google
ಕೆಲವು ದಿನಗಳ ಬಳಿಕ ಮಗಳಲ್ಲಿ ಓದುವುದರಲ್ಲಿ ಹಿನ್ನಡೆ ಇದ್ದಾಗ, ಕಾಲೇಜಿನ ಮುಖ್ಯಸ್ಥರು ತಾಯಿಯನ್ನು ಕರೆಸಿದರು. ತಾಯಿ ಮಗಳ ಕಾಲೇಜಿಗೆ ಹೋದಾಗ ಮಗಳ ಗೆಳತಿಯರು ಎಂದಿನಂತೆ ಯಾರೂ ಮಾತನಾಡಲಿಲ್ಲ. ಅವಳ ತಾಯಿಯನ್ನು ನೋಡಿದರೂ ನೋಡದ ಹಾಗೆ ಓಡಾಡುತ್ತಿದ್ದರು. ಅವಳ ತಾಯಿ ಒಂದು ಕಡೆ ಮಗಳಿಗಾಗಿ ಕಾಯುತ್ತಾ ನಿಂತಿದ್ದರು. ಮಗಳು ಇವರ ಬಳಿ ಓಡೋಡಿ ಬಂದಳು, ಮೊದಲು ನೀನು ಇಲ್ಲಿಂದ ಬೇಗ ಹೊರಡು, ಇಲ್ಲ ಅಂದರೆ ನಾನೇ ಕಾಲೇಜು ಬಿಟ್ಟು ಹೋಗುತ್ತೇನೆ ಎಂದು ಹೇಳಿ ಕೋಪಗೊಂಡು ತಾಯಿಯತ್ತ ನೋಡುತ್ತಿದ್ದಳು.
ತಾಯಿ ಅಲ್ಲಿಂದ ಹೊರಟು ಬಿಟ್ಟಳು. ಮಗಳ ವಿಚಿತ್ರ ವರ್ತನೆಗೆ ತಾಯಿ ಬೇಸತ್ತು ಹೋಗಿದ್ದಳು. ಹೀಗಿರಲು ಒಂದು ದಿನ ಅವಳ ತಾಯಿ ಸಂಬಂಧಿಕರ ಮನೆಗೆ ಒಂದು ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಅಲ್ಲಿಗೆ ಹೋದಾಗ ಮಗಳ ಗೆಳತಿಯೊಬ್ಬಳು ಬಂದಿದ್ದಳು. ತಾನೆ ಬಂದು, ಆಂಟಿ ಚೆನ್ನಾಗಿದೀರ ಎಂದು ಮಾತನಾಡಿಸಿದಳು. ಇವಳಿಗೆ ಮೊದಲು ಪರಿಚಯ ಸಿಗಲಿಲ್ಲ, ನಂತರ ಆ ಹುಡುಗಿ ನಿಮ್ಮ ಮಗಳ ಗೆಳತಿ ನಾನು ಎಂದು ಹೇಳಿದಾಗ, ಹೌದಾ ಎಂದು ಸುಮ್ಮನಾದಳು.
ಸ್ವಲ್ಪ ಹೊತ್ತಿನ ಬಳಿಕ, ಇತ್ತೀಚೆಗೆ ನಿಮ್ಮ ಮಗಳು ತುಂಬಾ ಬದಲಾವಣೆ ಆಗಿದ್ದಾಳೆ ಆಂಟಿ, ನಿಮ್ಮ ವಿಷಯ ಬಂದರೆ ತುಂಬಾ ಸಿಟ್ಟಾಗುತ್ತಾಳೆ, ನೀವು ಚೆನ್ನಾಗಿದ್ದೀರಾ ಎಂದು ಅವಳ ಮುಂದೆ ಹೇಳಿದರೆ ಸಾಕು ಕೋಪ ಮಾಡಿಕೊಂಡು ಹೋಗಿಬಿಡುತ್ತಾಳೆ. ಇತ್ತೀಚೆಗೆ ನಮ್ಮ ಅಮ್ಮನ ವಿಷಯ ಮಾತನಾಡಿದರೆ ನಾನು ಏನು ಮಾಡ್ತೀನಿ ನನಗೆ ಗೊತ್ತಿಲ್ಲ ಎಂದು ಹೇಳುತ್ತಾಳೆ ಎಂದು ಆ ಹುಡುಗಿ ಹೇಳಿದಾಗ, ಇವಳಿಗೆ ಬಹಳ ಆತಂಕ ಹಾಗು ಗಾಬರಿ ಆಯಿತು. ಮನೆಗೆ ಬಂದು ತನ್ನ ಪತಿಗೆ ಈ ವಿಷಯ ತಿಳಿಸಿದಾಗ, ಅವರ ಅರಿವಿಗೆ ಬಂದಿದ್ದು ತನ್ನ ತಾಯಿ ರೂಪವತಿ ಎಂಬುದು ಅವಳಿಗೆ ಸಹಿಸಲಾರದ ವಿಷಯವಾಗಿತ್ತು. ಈ ವಿಷಯವನ್ನು ಮಗಳ ಬಳಿ ಹೇಗೆ ಮಾತನಾಡಬೇಕೆಂದು ತೀರ್ಮಾನ ಮಾಡಲು, ತಂದೆ ತಾಯಿ ಇಬ್ಬರು ನಮ್ಮ ಬಳಿ ಆಪ್ತಸಮಾಲೋಚನೆ ನಡೆಸಿದರು. ಈ ಘಟನೆ ಕಳೆದು ಸುಮಾರು ವರ್ಷಗಳ ನಂತರ ಮಗಳ ಮದುವೆ ಆಯಿತ್ತು. ಕೆಲವು ಹೆಣ್ಣು ಮಕ್ಕಳಿಗೆ ತಮ್ಮ ತಾಯಿಯ ಸೌಂದರ್ಯದ ಮೇಲೆ ಮತ್ಸರ ಉಂಟಾಗಲು ಕೌಟುಂಬಿಕ, ಸಾಮಾಜಿಕ ಮತ್ತು ವ್ಯಕ್ತಿತ್ವ ಸಂಬಂಧಿ ಹಲವು ಕಾರಣಗಳು ಇರಬಹುದು.
ಮಕ್ಕಳು, ವಿಶೇಷವಾಗಿ ತಮ್ಮ ಹದಿಹರೆಯದಲ್ಲಿ , ತಮ್ಮ ತಾಯಿಯೊಂದಿಗೆ ಹೋಲಿಸಿಕೊಳ್ಳುತ್ತಾರೆ. ತಾಯಿ ಸೌಂದರ್ಯದ ಬಗ್ಗೆ ಹೆಚ್ಚಿನ ಪ್ರಶಂಸೆಯನ್ನು ಪಡೆದಾಗ, ಆತ್ಮವಿಶ್ವಾಸದ ಕೊರತೆಯಿಂದ ಮತ್ಸರ ಉಂಟಾಗಬಹುದು. ಸಮಾಜವು ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡುವ ಸಂದರ್ಭದಲ್ಲಿ, ಇಂತಹ ಹೋಲಿಕೆಗಳು ಹೆಚ್ಚಾಗುತ್ತವೆ. ತಾಯಿಯ ಸೌಂದರ್ಯವನ್ನು ಗಮನಿಸದೆ, ತಮ್ಮನ್ನು ಕಡಿಮೆ ಭಾವಿಸುವ ಸಾಧ್ಯತೆ ಹೆಚ್ಚುತ್ತದೆ.
ಯುವ ವಯಸ್ಸಿನಲ್ಲಿ ಮಕ್ಕಳು ತಾಯಿಯ ಅನುಭವಗಳನ್ನು ಅಥವಾ ಬಾಳಿನ ಗಂಭೀರತೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಿಲ್ಲ. ಇದು ಸೌಂದರ್ಯದ ಬಗ್ಗೆ ತಾತ್ಕಾಲಿಕ ಅಸಹನಶೀಲತೆಗೆ ಕಾರಣವಾಗಬಹುದು. ಕೆಲವೊಮ್ಮೆ, ತಾಯಿಯ ವ್ಯಕ್ತಿತ್ವ ಅಥವಾ ನಡತೆಯಲ್ಲಿ ಅಹಂಕಾರ ಅಥವಾ ತಮ್ಮ ಸೌಂದರ್ಯದ ಬಗ್ಗೆ ಅವಗಾಹನೆ ಮೂಡಿದಾಗ, ಇದು ಮಕ್ಕಳಿಗೆ ಅಸಮಾಧಾನವನ್ನುಂಟು ಮಾಡಬಹುದು. ತಾಯಿಯ ಪಾತ್ರ ಅಥವಾ ಪ್ರೀತಿಯಲ್ಲಿ ಅಗಾಧತೆ ಇಲ್ಲದಂತೆ ತೋರಿದರೆ, ಮತ್ಸರವು ಬೇರೆ ರೀತಿಯ ನೋವಿನಿಂದ ಉದ್ಭವಿಸಬಹುದು.
ಈ ರೀತಿಯ ಮತ್ಸರವು ತಾತ್ಕಾಲಿಕವಾಗಿರಬಹುದು ಮತ್ತು ಸಮಂಜಸವಾದ ಸಂವಹನ ಮತ್ತು ಪ್ರೀತಿ ಮೂಲಕ ಸರಿಪಡಿಸುವ ಸಾಧ್ಯತೆಯಿದೆ. ತಾಯಿ ಮತ್ತು ಮಗಳ ಮಧ್ಯೆ ಉಂಟಾಗುವ ಮತ್ಸರವನ್ನು ಪರಿಹರಿಸಲು, ನಿಜವಾದ ಸಂವಹನ ಮತ್ತು ಸಂಬಂಧದಲ್ಲಿ ಭಾವನಾತ್ಮಕ ಆಧಾರದ ಮೇಲೆ ಕೆಲಸ ಮಾಡುವುದು ಮುಖ್ಯ. ಇಲ್ಲಿವೆ ಕೆಲವು ಪರಿಹಾರಗಳು. ತಾಯಿ ಮತ್ತು ಮಗಳು ತಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ಕಲ್ಪಿಸಬೇಕು. ತಾಯಿ, ತನ್ನ ಮಗಳ ಆತ್ಮವಿಶ್ವಾಸ ಹೆಚ್ಚಿಸುವಂತೆ ಪ್ರೋತ್ಸಾಹಕರವಾಗಿ ಮಾತನಾಡುವುದು. ತನ್ನ ತಾಯಿಯ ಸೌಂದರ್ಯವನ್ನು ಮಗಳು ಅವಳಿಗೆ ಮಾತ್ರವಾದ ಒಂದು ಗುಣವೆಂದು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದು.
ಮಗಳು ತನ್ನದೇ ಆದ ವಿಶೇಷತೆಯನ್ನು (ಅದು ಶೌರ್ಯ, ಕೌಶಲ, ಅಥವಾ ಮನೋವಿಕಾಸ) ಗುರುತಿಸಲು ತಾಯಿಯು ಬೆಂಬಲಿಸಬೇಕು.ಅವಳ ಗೆಲುವುಗಳನ್ನು ಹೊಗಳುವುದರಿಂದ ಮತ್ತು ಪ್ರಶಂಸಿಸಲು ಪ್ರಯತ್ನಿಸಬೇಕು.
ಸೌಂದರ್ಯವು ಮುಖ್ಯವಾದುದೇನಲ್ಲ ಎಂಬ ಸಂದೇಶವನ್ನು ಸ್ಪಷ್ಟಪಡಿಸಬೇಕು. ಸೌಂದರ್ಯದ ಜೊತೆಗೆ, ಮಾನಸಿಕ ಶಕ್ತಿಯು ಮತ್ತು ನಡವಳಿಕೆಯು ವ್ಯಕ್ತಿತ್ವವನ್ನು ಹೆಚ್ಚಿಸುತ್ತವೆ ಎಂಬುದನ್ನು ನುಡಿಗಟ್ಟು ಮಾಡುವುದು.
ತಾಯಿ, ಮಗಳನ್ನು ತನ್ನೊಂದಿಗೆ ಅಥವಾ ಇತರರೊಂದಿಗೆ ಹೋಲಿಸಲು ಬಿಡಬಾರದು. ಪ್ರತಿಯೊಬ್ಬರೂ ತಮ್ಮದೇ ಆದ ಕೌಶಲ್ಯಗಳು ಮತ್ತು ವಿಶೇಷತೆಯೊಂದಿಗೆ ವಿಭಿನ್ನರಾಗಿರುತ್ತಾರೆ ಎಂಬ ಅರಿವನ್ನು ನೀಡುವುದು. ಮಗಳಿಗೆ ಹೆಚ್ಚಿನ ಪ್ರೀತಿಯನ್ನು ತೋರಿಸುವುದು ಮತ್ತು ಅವಳಿಗೆ ಅಗತ್ಯವಾದ ಬೆಂಬಲ ನೀಡುವುದು. ಮಗಳೊಂದಿಗೆ ಸಮಯ ಕಳೆಯುವುದು, ಒಟ್ಟಿಗೆ ಮನರಂಜನೆ ಮಾಡಲು ಹೊಸ ಚಟುವಟಿಕೆಗಳನ್ನು ಕೈಗೊಳ್ಳುವುದು.
ಇದು ಉಲ್ಬಣಗೊಂಡ ಸಮಸ್ಯೆಯಾಗಿದ್ದರೆ, ಕೌಟುಂಬಿಕ ಸಲಹಾ ತಜ್ಞರ ಸಹಾಯವನ್ನು ಪಡೆಯುವುದು ಉತ್ತಮ.
ಈ ನಿಟ್ಟಿನಲ್ಲಿ ಮಗಳ ಹರೆಯದ ವಯಸಿನಲ್ಲಿ ತಾಯಿಯ ಶಾಂತ ಮನೋಭಾವ ಮತ್ತು ಸಹನೆ ಬಹಳ ಮುಖ್ಯ. ಮಗಳು ಬದಲಾಗಲು ಸಮಯ ತೆಗೆದುಕೊಳ್ಳಬಹುದು, ಆದರೆ ತಾಯಿಯ ಪ್ರೀತಿಯೂ, ಬೆಂಬಲವೂ ಈ ಸಂಬಂಧವನ್ನು ಮರುಸ್ಥಾಪಿಸಲು ಪ್ರಮುಖ ಪಾತ್ರ ವಹಿಸುತ್ತವೆ.
ಮಾನಸ….ಇದು ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು :
- ಚಂಪಾ ಚಿನಿವಾರ್ (ಆಪ್ತ ಸಮಾಲೋಚಕಿ) ಪರಿಚಯ
- ಮಾನಸ….ಇದು ಮನಸಿನ ಮಾತು (ಭಾಗ-೧)
- ಮಾನಸ….ಇದು ಮನಸಿನ ಮಾತು (ಭಾಗ-೨)
- ಮಾನಸ….ಇದು ಮನಸಿನ ಮಾತು (ಭಾಗ-೩)
- ಮಾನಸ….ಇದು ಮನಸಿನ ಮಾತು (ಭಾಗ-೪)
- ಮಾನಸ….ಇದು ಮನಸಿನ ಮಾತು (ಭಾಗ-೫)
- ಮಾನಸ….ಇದು ಮನಸಿನ ಮಾತು (ಭಾಗ-೬)
- ಮಾನಸ….ಇದು ಮನಸಿನ ಮಾತು (ಭಾಗ-೭)
- ಮಾನಸ….ಇದು ಮನಸಿನ ಮಾತು (ಭಾಗ-೮)
- ಮಾನಸ….ಇದು ಮನಸಿನ ಮಾತು (ಭಾಗ-೯)
- ಮಾನಸ….ಇದು ಮನಸಿನ ಮಾತು (ಭಾಗ-೧೦)
- ಮಾನಸ….ಇದು ಮನಸಿನ ಮಾತು (ಭಾಗ-೧೧)
- ಮಾನಸ….ಇದು ಮನಸಿನ ಮಾತು (ಭಾಗ-೧೨)
- ಮಾನಸ….ಇದು ಮನಸಿನ ಮಾತು (ಭಾಗ-೧೩)
- ಮಾನಸ….ಇದು ಮನಸಿನ ಮಾತು (ಭಾಗ-೧೪)
- ಮಾನಸ….ಇದು ಮನಸಿನ ಮಾತು (ಭಾಗ-೧೫)
- ಮಾನಸ….ಇದು ಮನಸಿನ ಮಾತು (ಭಾಗ-೧೬)
- ಮಾನಸ….ಇದು ಮನಸಿನ ಮಾತು (ಭಾಗ-೧೭)
- ಮಾನಸ….ಇದು ಮನಸಿನ ಮಾತು (ಭಾಗ-೧೮)
- ಮಾನಸ….ಇದು ಮನಸಿನ ಮಾತು (ಭಾಗ-೧೯)
- ಮಾನಸ….ಇದು ಮನಸಿನ ಮಾತು (ಭಾಗ-೨೦)
- ಮಾನಸ….ಇದು ಮನಸಿನ ಮಾತು (ಭಾಗ-೨೧)
- ಮಾನಸ….ಇದು ಮನಸಿನ ಮಾತು (ಭಾಗ-೨೨)
- ಮಾನಸ….ಇದು ಮನಸಿನ ಮಾತು (ಭಾಗ-೨೫)
- ಮಾನಸ….ಇದು ಮನಸಿನ ಮಾತು (ಭಾಗ-೨೬)
- ಮಾನಸ….ಇದು ಮನಸಿನ ಮಾತು (ಭಾಗ-೨೭)
- ಮಾನಸ….ಇದು ಮನಸಿನ ಮಾತು (ಭಾಗ-೨೮)
- ಮಾನಸ….ಇದು ಮನಸಿನ ಮಾತು (ಭಾಗ-೨೯)
- ಮಾನಸ….ಇದು ಮನಸಿನ ಮಾತು (ಭಾಗ-೩೦)
- ಮಾನಸ….ಇದು ಮನಸಿನ ಮಾತು (ಭಾಗ-೩೧)
- ಮಾನಸ….ಇದು ಮನಸಿನ ಮಾತು (ಭಾಗ-೩೨)
- ಮಾನಸ….ಇದು ಮನಸಿನ ಮಾತು (ಭಾಗ-೩೩)
- ಮಾನಸ….ಇದು ಮನಸಿನ ಮಾತು (ಭಾಗ-೩೪)
- ಮಾನಸ….ಇದು ಮನಸಿನ ಮಾತು (ಭಾಗ-೩೫)
- ಮಾನಸ….ಇದು ಮನಸಿನ ಮಾತು (ಭಾಗ-೩೬)
- ಮಾನಸ….ಇದು ಮನಸಿನ ಮಾತು (ಭಾಗ-೩೭)
- ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.
