ಮಾಧ್ಯಮಗಳು ಮಾನವನ ಜೀವನವನ್ನು ಎಷ್ಟರ ಮಟ್ಟಿಗೆ ತೆಗೆದುಕೊಂಡು ಹೋಗುತ್ತಿದೆ ಎಂದರೆ ವಿನಾಶದ ಅಂಚಿನಲ್ಲಿದೆ ಎಂದರೆ ತಪ್ಪಾಗಲಾರದು. ಸೈಕಾಲಜಿಗೂ ಇಂದಿನ ಸಮಾಜಕ್ಕೂ, ಮಾಧ್ಯಮಗಳು ಒಂದಕ್ಕೊಂದು ಕೊಂಡಿಯಾಗದೆ. ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣದಲ್ಲಿ ‘ಸಾಮಾಜಿಕ ಜಾಲತಾಣ ಹಾಗು ಮಾನಸಿಕ ಅಸಮತೋಲನ’ ತಪ್ಪದೆ ಮುಂದೆ ಓದಿ…
ಈ ಗೊಂದಲ ಬಹು ಜನರನ್ನು ಕಾಡದೇ ಇರದು. ಸೈಕಾಲಜಿ ಮಾನವನ ಮನಸನ್ನು ಅರಿಯುವ, ಅವನ ವರ್ತನೆಯಿಂದ ತಿಳಿದುಕೊಳ್ಳಲು ಅಧ್ಯಯನ ಮಾಡುವುದು. ಮಾನವನ ಮನಸ್ಸು ತಿಳಿದುಕೊಂಡಷ್ಟು ನಿಗೂಢ. ಅವನ ಮಾತು ಕತೆ ನಡೆ ನುಡಿ ಹೀಗೆ ಸಂಪೂರ್ಣವಾಗಿ ಹೇಳಬೇಕೆಂದರೆ ಅವನ ವರ್ತನೆಯಿಂದ ಅವನ ಮನಸನ್ನು ಅರಿಯಬಹುದಾದಂತ ಅಧ್ಯಯನ.
ಮಾನವನ ಮನಸ್ಸು ಮತ್ತು ಅದರ ಕಾರ್ಯಗಳ ವೈಜ್ಞಾನಿಕ ಅಧ್ಯಯನ, ವಿಶೇಷವಾಗಿ ನಿರ್ದಿಷ್ಟ ಸನ್ನಿವೇಶದಲ್ಲಿ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ವ್ಯಕ್ತಿ ಅಥವಾ ಗುಂಪಿನ ಮಾನಸಿಕ ಗುಣಲಕ್ಷಣಗಳು, ವರ್ತನೆಯ ಪರಿಸ್ಥಿತಿ ಅಥವಾ ಚಟುವಟಿಕೆಯನ್ನು ನಿಯಂತ್ರಿಸುವ ಮಾನಸಿಕ ಮತ್ತು ಭಾವನಾತ್ಮಕ ಅಂಶಗಳು. ಮಾನಸಿಕ ಜೀವನದ ವಿಜ್ಞಾನ ಎಂದರೆ ತಪ್ಪಾಗಲಾರದು.
ಮನುಷ್ಯ ಹುಟ್ಟಿದಾಗಿನಿಂದ ಸಾಯುವವರೆಗಿನ ಅವನು ಹೇಗೆ ಜೀವನದಲ್ಲಿ ತನ್ನನ್ನು ತೊಡಗಿಸಿಕೊಂಡು ಬೇರೆಯವರನ್ನು ನಡೆಸಿಕೊಳ್ಳುವ ರೀತಿ ನೀತಿ ಅವನನ್ನು ಯಾರೆಂದು ಹೇಳಬಹುದು. ಅವನ ದೇಹದಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಬಹುದೇ ಹೊರತಾಗಿ ಮನಸು ಎಷ್ಟು ವಿಕಾಸಗೊಳ್ಳುತ್ತಿದೆ ಎಂಬುದು ಅರಿಯುವುದೇ ಸೈಕಾಲಜಿ. ಇಲ್ಲಿ ಅವನು ಬುದ್ಧಿವಂತ, ದಡ್ಡ, ಬಡವ ಶ್ರೀಮಂತ, ಚಿಕ್ಕವ ದೊಡ್ಡವ, ಲಿಂಗ ಭೇದವಿಲ್ಲದೆ ಕಾಡುವ ಸಮಸ್ಯೆ.

ಸೈಕಾಲಜಿಗೂ ಇಂದಿನ ಸಮಾಜಕ್ಕೂ, ಮಾಧ್ಯಮಗಳು ಒಂದಕ್ಕೊಂದು ಕೊಂಡಿಯಾಗದೆ. ಮಾಧ್ಯಮಗಳು ಮಾನವನ ಜೀವನವನ್ನು ಎಷ್ಟರ ಮಟ್ಟಿಗೆ ತೆಗೆದುಕೊಂಡು ಹೋಗುತ್ತಿದೆ ಎಂದರೆ, ವಿನಾಶದ ಅಂಚಿನಲ್ಲಿದೆ ಎಂದರೆ ತಪ್ಪಾಗಲಾರದು. ಮೊದಲಿಗೆ ದೂರದರ್ಶನ ತೆಗೆದುಕೊಂಡರೆ ಅಲ್ಲಿ ಕೆಲವು ದಾರವಾಹಿಗಳು ಅನೇಕ ನಕಾರಾತ್ಮಕ ಪಾತ್ರಗಳು ಕಾಣಸಿಗುತ್ತದೆ. ಮನುಷ್ಯನಿಗೆ ಕಿವಿಯಲ್ಲಿ ಕೇಳಿದ್ದಕ್ಕಿಂತ ಕಣ್ಣಲ್ಲಿ ನೋಡಿದ್ದೇ ನೆನಪಿನಲ್ಲಿ ಬಹಳವಾಗಿ ಉಳಿದುಕೊಂಡು ಬಿಡುತ್ತದೆ. ಹಾಗೇ ನಕಾರಾತ್ಮಕ ಚಿಂತನೆ, ದೃಶ್ಯ ಬೇಗ ಪ್ರಭಾವ ಬೀರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಇದು ಮಕ್ಕಳ ಮೇಲೆ ಬಹಳವಾಗಿ ಪರಿಣಾಮ ಬೀರುತ್ತಿದೆ. ಅಲ್ಲಿ ಆಡುವ ಪ್ರತಿಯೊಂದು ಮಾತನ್ನು ಅನುಸರಿಸಲು ಇಷ್ಟ ಪಡುತ್ತಾರೆ. ಮನೆಯಲ್ಲಿ ಕೆಟ್ಟ ಪದಗಳನ್ನು ಉಪಯೋಗಿಸಿದರೆ ಬಯ್ಯುತ್ತಾರೆಂಬ ಭಯದಿಂದ ಹೊರಗೆ ಶಾಲೆಯಲ್ಲಿ, ಸ್ನೇಹಿತರ ಬಳಿ ಈ ಪದಗಳನ್ನು ಉಪಯೋಗಿಸುತ್ತಾರೆ.
ನಂತರ ಫೇಸ್ ಬುಕ್ ಬಗ್ಗೆ ನೋಡಿದಾಗ, ಮೊದಲಿಗೆ ಫೇಸ್ ಬುಕ್ ನಲ್ಲಿ ಎಲ್ಲರ ಫೇಸ್ ನೋಡಿಯೇ ಗೆಳೆತನ ಬಯಸುತ್ತಾರೆ. ಕೆಲವರು ಒಂದೇ ರೀತಿಯ ಹವ್ಯಾಸ ಇರುವವರು, ಓದು, ಕೆಲಸ ಒಂದೇ ರೀತಿ ಇದ್ದರೆ ಅಂಥವರು ಸ್ನೇಹ ಬಯಸಿ ಬರುತ್ತಾರೆ. ಇದು ಆರೋಗ್ಯಕರವಾದ ಬೆಳವಣಿಗೆ. ಆದರೆ ಕೆಲವರು ದುರುದ್ದೇಶದಿಂದಲೇ ಸ್ನೇಹ ಬಯಸಿ ಬರುತ್ತಾರೆ, ದೇಹಾಕರ್ಷಣೆ ಬಹಳ ಜನರಿಗೆ ಇರುತ್ತದೆ. ಇದರಿಂದ ಹತ್ತಿರವಾಗಿ ಫೋನ್ ನಂಬರ್ ವಿನಿಮಯ ಮಾಡಿಕೊಳ್ಳುತ್ತಾರೆ. ಹಣವಂತರಿಂದ ಹಣ ಸುಲಿಗೆ ಮಾಡುವ ರೀತಿ, ಪ್ರೇಮ ಬಯಸಿ ಬಂದು ಮೋಸ ಹೋಗುವ ಜನರು ಎಷ್ಟೋ ಜನರಿದ್ದಾರೆ. ಈ ಮಾಧ್ಯಮ ಹದಿಹರೆಯದ ವಯಸ್ಸಿನವರಿಂದ ಮಧ್ಯ ವಯಸ್ಸಿನವರೂ ತಪ್ಪು ಹಾದಿ ಹಿಡಿಯುವಂತೆ ಮಾಡುತ್ತಿದೆ. ಅದರಲ್ಲಿ ಮಾತುಕತೆ ನೋಡಿ ಒಳ್ಳೆಯವರಂತೆ ಸೋಗು ಹಾಕಿ ಅನೇಕ ಮುಗ್ಧ ಹೆಣ್ಣು ಮಕ್ಕಳನ್ನು ಸಾವಿನ ದಾರಿಗೆ ತಳ್ಳಿದೆ.
ಹರೆಯದ ಮಕ್ಕಳನ್ನು ಬಹಳವಾಗಿ ಆಕರ್ಷಿಸುವ ಈ ಸಾಮಾಜಿಕ ಜಾಲತಾಣಗಳು ಅವರ ಕಲಿಕೆಯನ್ನು ಕುಂಠಿತಗೊಳಿಸಿದೆ. ತಂದೆ ತಾಯಿಯಿಂದ ದೂರವಾಗಿರಲು ಬಯಸುತ್ತಾರೆ. ಅವರಿಗೆ ಮುಕ್ತವಾದ ವಾತಾವರಣ ಬೇಕಿರುತ್ತದೆ. ಆದರೆ ಕ್ಷಣಿಕ ಸುಖದಿಂದ ಜೀವನ ಹಾಳು ಮಾಡಿಕೊಳ್ಳುತಿದ್ದೇವೆ ಎಂಬ ಅರಿವೂ ಇರುವುದಿಲ್ಲ. ಈ ವಯಸಿನಲ್ಲಿ ಪ್ರೀತಿಯ ಕೊರತೆ ಇದಕ್ಕೆಲ್ಲ ಕಾರಣವಾಗುತ್ತದೆ. ಮನೆಯಲ್ಲಿ ಸಿಗದ ಪ್ರೀತಿಯನ್ನು ಹೊರಗೆ ಬಯಸುತ್ತಾರೆ. ಇಂತಹ ಮನಸ್ಥಿತಿ, ಪರಿಸ್ಥಿತಿ ಇರುವ ಹುಡುಗ ಹುಡುಗಿಯರು ಬೇಗ ಇದರ ಸುಳಿಗೆ ಸಿಕ್ಕಿ ಯಾವುದು ತಪ್ಪು, ಯಾವುದು ಸರಿ ಎಂದು ತಿಳಿಯುವ ಮೊದಲೇ ಇದರಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಾರೆ.

ಪೋಷಕರು ಸಹ ಇಲ್ಲೇ ಎಡವುದು. ಮಕ್ಕಳಿಗೆ ಆದಷ್ಟು ಹೊರಗಡೆ ಪರಿಸರದ ಮಹತ್ವ ತಿಳಿಸಬೇಕು. ಹಾರುವ ಬಣ್ಣಬಣ್ಣದ ಚಿಟ್ಟೆಗಳು, ಹೂಬಿಡುವ ಮರಗಿಡಗಳು, ಎಲೆಗಳ ವೈಶಿಷ್ಟ್ಯತೆ, ಸಮುದ್ರ, ನದಿ ಬೆಟ್ಟ ಇವುಗಳ ಪರಿಚಯ ಮಾಡಿಕೊಡಬೇಕು. ಮಕ್ಕಳಿಗೆ ಒಂಬತ್ತು ವರ್ಷವಾಗುವವರೆಗು ಅವರ ಕೈಗೆ ಮೊಬೈಲ್ ಕೊಡಬಾರದು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪೋಷಕರು ತಮ್ಮ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ. ಇದರಿಂದಾಗುವ ಹಾನಿಯ ಬಗ್ಗೆ ಯೋಚಿಸದೆ ಮಗು ಸುಮ್ಮನಿದ್ದರಾಯಿತು ಎಂಬುದು ಅವರ ಅಭಿಪ್ರಾಯ. ಇದರ ಬದಲಿಗೆ ಯಾವುದಾದರೂ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಬೇಕು. ಚಿತ್ರ ಬಿಡಿಸುವುದು, ಬಿಲ್ಡಿಂಗ್ ಬ್ಲಾಕ್ಸ್ ಜೋಡಣೆ ಹೀಗೆ ಅನೇಕ ಚಟುವಟಿಕೆಗಳಿಂದ ಮಕ್ಕಳನ್ನು ತೊಡಗಿಸಿಬಹುದು.
ನಾವು ಸಮಾಜದಿಂದ ಏನು ಪಡೆಯುತಿದ್ದೇವೆ ಅನ್ನುವುದಕ್ಕಿಂತ ನಾವು ಸಮಾಜಕ್ಕಾಗಿ ಯಾವುದು ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂದು ಪ್ರತಿಯೊಬ್ಬ ಪ್ರಜೆಯೂ ತೀರ್ಮಾನಿಸಿದರೆ ಒಂದು ಸುಂದರ ಸಮಾಜ ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ.
ಮಾನಸ….ಇದು ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು :
- ಚಂಪಾ ಚಿನಿವಾರ್ (ಆಪ್ತ ಸಮಾಲೋಚಕಿ) ಪರಿಚಯ
- ಮಾನಸ….ಇದು ಮನಸಿನ ಮಾತು (ಭಾಗ-೧)
- ಮಾನಸ….ಇದು ಮನಸಿನ ಮಾತು (ಭಾಗ-೨)
- ಮಾನಸ….ಇದು ಮನಸಿನ ಮಾತು (ಭಾಗ-೩)
- ಮಾನಸ….ಇದು ಮನಸಿನ ಮಾತು (ಭಾಗ-೪)
- ಮಾನಸ….ಇದು ಮನಸಿನ ಮಾತು (ಭಾಗ-೫)
- ಮಾನಸ….ಇದು ಮನಸಿನ ಮಾತು (ಭಾಗ-೬)
- ಮಾನಸ….ಇದು ಮನಸಿನ ಮಾತು (ಭಾಗ-೭)
- ಮಾನಸ….ಇದು ಮನಸಿನ ಮಾತು (ಭಾಗ-೮)
- ಮಾನಸ….ಇದು ಮನಸಿನ ಮಾತು (ಭಾಗ-೯)
- ಮಾನಸ….ಇದು ಮನಸಿನ ಮಾತು (ಭಾಗ-೧೦)
- ಮಾನಸ….ಇದು ಮನಸಿನ ಮಾತು (ಭಾಗ-೧೧)
- ಮಾನಸ….ಇದು ಮನಸಿನ ಮಾತು (ಭಾಗ-೧೨)
- ಮಾನಸ….ಇದು ಮನಸಿನ ಮಾತು (ಭಾಗ-೧೩)
- ಮಾನಸ….ಇದು ಮನಸಿನ ಮಾತು (ಭಾಗ-೧೪)
- ಮಾನಸ….ಇದು ಮನಸಿನ ಮಾತು (ಭಾಗ-೧೫)
- ಮಾನಸ….ಇದು ಮನಸಿನ ಮಾತು (ಭಾಗ-೧೬)
- ಮಾನಸ….ಇದು ಮನಸಿನ ಮಾತು (ಭಾಗ-೧೭)
- ಮಾನಸ….ಇದು ಮನಸಿನ ಮಾತು (ಭಾಗ-೧೮)
- ಮಾನಸ….ಇದು ಮನಸಿನ ಮಾತು (ಭಾಗ-೧೯)
- ಮಾನಸ….ಇದು ಮನಸಿನ ಮಾತು (ಭಾಗ-೨೦)
- ಮಾನಸ….ಇದು ಮನಸಿನ ಮಾತು (ಭಾಗ-೨೧)
- ಮಾನಸ….ಇದು ಮನಸಿನ ಮಾತು (ಭಾಗ-೨೨)
- ಮಾನಸ….ಇದು ಮನಸಿನ ಮಾತು (ಭಾಗ-೨೫)
- ಮಾನಸ….ಇದು ಮನಸಿನ ಮಾತು (ಭಾಗ-೨೬)
- ಮಾನಸ….ಇದು ಮನಸಿನ ಮಾತು (ಭಾಗ-೨೭)
- ಮಾನಸ….ಇದು ಮನಸಿನ ಮಾತು (ಭಾಗ-೨೮)
- ಮಾನಸ….ಇದು ಮನಸಿನ ಮಾತು (ಭಾಗ-೨೯)
- ಮಾನಸ….ಇದು ಮನಸಿನ ಮಾತು (ಭಾಗ-೩೦)
- ಮಾನಸ….ಇದು ಮನಸಿನ ಮಾತು (ಭಾಗ-೩೧)
- ಮಾನಸ….ಇದು ಮನಸಿನ ಮಾತು (ಭಾಗ-೩೨)
- ಮಾನಸ….ಇದು ಮನಸಿನ ಮಾತು (ಭಾಗ-೩೩)
- ಮಾನಸ….ಇದು ಮನಸಿನ ಮಾತು (ಭಾಗ-೩೪)
- ಮಾನಸ….ಇದು ಮನಸಿನ ಮಾತು (ಭಾಗ-೩೫)
- ಮಾನಸ….ಇದು ಮನಸಿನ ಮಾತು (ಭಾಗ-೩೬)
- ಮಾನಸ….ಇದು ಮನಸಿನ ಮಾತು (ಭಾಗ-೩೭)
- ಮಾನಸ….ಇದು ಮನಸಿನ ಮಾತು (ಭಾಗ-೩೮)
- ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.
