ಎಲ್ಲರೂ ಇದ್ದು, ಎಲ್ಲವೂ ಇದ್ದು ಜೀವನದಲ್ಲಿ ಒಂಟಿ ಪಯಣದಲಿ ಸಾಗುವ ಮನಸ್ಸುಗಳೆಷ್ಟು? ಯಾರಾದರೂ ಮನಸ್ಸಿನಿಂದ ಸಮೀಕ್ಷೆ ಮಾಡಿ ವರದಿ ನೀಡಬಲ್ಲರಾ…? ಯಾರೂ ಇಲ್ಲದೆ, ಯಾವುದೂ ಇಲ್ಲದೆ ಒಂಟಿ ಬದುಕು ಬದುಕುವವರ ಮನಸ್ಸಿನ ಶೂನ್ಯತೆಯ ನಿವಾರಿಸಬಲ್ಲರಾ..? ಚಂದನ್ ಅವರ ಮನಸ್ಸಿನ ಪಿಸುಮಾತಿನ ಮುಂದಿನ ಸಂಚಿಕೆಯನ್ನು ತಪ್ಪದೆ ಮುಂದೆ ಓದಿ…
ರಾಜಕೀಯದಂತಾಗಿದೆ ಇಂದು ಸಂಬಂಧಗಳ ಲೆಕ್ಕಾಚಾರ. ಲಾಭವಿರುವ ಕಡೆಗೆ ವಾಲುವ ಮನಸ್ಸುಗಳ ಮಧ್ಯೆ ಮೌನದಲಿ ಬದುಕುವ ಮನಸ್ಸುಗಳ ಅಂತಾರಾಳವ ಅರಿಯುವವರು ಸಿಗಬಲ್ಲರಾ..?
ತನ್ನ ಬದುಕು, ತನ್ನ ಸಂತೋಷ, ತನ್ನ ಆದಾಯ, ಎಂಬ ತನ್ನತನದ ಸ್ವಾರ್ಥ ಪ್ರಪಂಚದ ಮಧ್ಯೆ ಬದಲಾಗದ ಹಣೆಬರಹಗಳ ಹೊತ್ತು ಕೆಲವೊಮ್ಮೆ ವಿಧಿಯನ್ನು ನೆನೆದು ಸಾಗುವ ಶೂನ್ಯ ಬದುಕಿನ ಕ್ಷಣಗಳಲ್ಲಿ ಲೀನವಾಗಿ, ಒಂಟಿಯಾಗಿ ಸಾಗುವ ಕೆಲವರ ಕಣ್ಣೀರ ಅಲೆಗಳು ಎಂದಿಗಾದರೂ ಭರವಸೆಯ ಸಮುದ್ರ ತೀರವನ್ನು ಸೇರಬಲ್ಲದಾ…?
ಅದೃಷ್ಟವೇನ್ನಬೇಕೋ ಅಥವಾ ದುರಾದೃಷ್ಟವೇನ್ನಬೇಕೋ ತಿಳಿಯದ ಗೊಂದಲಮಯ ಬದುಕಿನ ನಾವಿಕನ ಬದುಕು ಗಾಳಿಗೆ ಸಿಲುಕಿದ ಗಾಳಿಪಟದಂತೆ ಮೇಲೇರುವುದೋ ಅಥವಾ ಹರಿದು ಅಂತ್ಯ ಕಾಣುತ್ತಾ ಧರೆಗೆ ಉರುಳುವುದೋ ತಿಳಿದವರು ಯಾರು…?
ಬದಲಾಗದ ಬದುಕಿನಲಿ ಗತಾಕಾಲದ ನೆನಪುಗಳ ಪ್ರಭಾವ…
ಬದಲಾಗದ ಬದುಕಿನಲಿ ಭರವಸೆಯ ಬೆಳಕಿನ ಅಭಾವ…?
ಸದಾ ಮುಖದಲಿ ಕಾಣುವ ನಗುವಿನಲಿ ನೆಮ್ಮದಿಯಿಲ್ಲ…
ಸದಾ ನೆಮ್ಮದಿಯ ಹುಡುಕಾಡಿದರೂ ಸರಿ ದಾರಿ ಸಿಗಲಿಲ್ಲ…?
ಅಂತ್ಯವಿಲ್ಲದ ನೊಂದ ಕಣ್ಣೀರ ಧಾರೆ ನನ್ನಲ್ಲಿ ಹರಿಯುತಿರಲು,
ಕಾಣದ ಕಣ್ಣೀರು ತಾನಾಗಿಯೇ ನನ್ನನ್ನು ನೆನಪಿಸುತಿರಲು,
ಮರೆಯಲಿ ಹೇಗೆ ನನ್ನ ಕಹಿ ನೆನಪುಗಳ ವಾಸ್ತವದಲಿ,
ಅದು ಬದಲಾಗದು ಎಂದಿಗೂ ಅಂತ್ಯದವರೆಗೂ ಬದುಕಿನಲಿ….
ಹಿಂದಿನ ಸಂಚಿಕೆಗಳು :
- ಮನಸ್ಸಿನ ಪಿಸುಮಾತು – (ಭಾಗ-೧)
- ಮನಸ್ಸಿನ ಪಿಸುಮಾತು – (ಭಾಗ-೨)
- ಮನಸ್ಸಿನ ಪಿಸುಮಾತು – (ಭಾಗ-೩)
- ಮನಸ್ಸಿನ ಪಿಸುಮಾತು – (ಭಾಗ-೪)
- ಮನಸ್ಸಿನ ಪಿಸುಮಾತು – (ಭಾಗ-೫)
- ಮನಸ್ಸಿನ ಪಿಸುಮಾತು – (ಭಾಗ-೬)
- ಮನಸ್ಸಿನ ಪಿಸುಮಾತು – (ಭಾಗ-೭)
- ಮನಸ್ಸಿನ ಪಿಸುಮಾತು – (ಭಾಗ-೮)
- ಮನಸ್ಸಿನ ಪಿಸುಮಾತು – (ಭಾಗ-೯)
- ಮನಸ್ಸಿನ ಪಿಸುಮಾತು – (ಭಾಗ-೧೦)
- ಮನಸ್ಸಿನ ಪಿಸುಮಾತು – (ಭಾಗ-೧೧)
- ಮನಸ್ಸಿನ ಪಿಸುಮಾತು – (ಭಾಗ-೧೨)
- ಮನಸ್ಸಿನ ಪಿಸುಮಾತು – (ಭಾಗ-೧೩)
- ಚಂದನ್
