ಬೇಸಿಗೆ ಅಂದರೆ ಎಲ್ಲೆಡೆ ಮಾವಿನ ಕಾಯಿ ಹಾಗೂ ಮಾವಿನ ಹಣ್ಣುಗಳ ಸಂಭ್ರಮ. ಮಾವಿನ ವಿವಿಧ ಖಾದ್ಯಗಳ ರುಚಿಗಳು ಎಲ್ಲರ ಮನೆಯಲ್ಲಿಯೂ ಸಾಮಾನ್ಯವಾಗಿರುತ್ತದೆ. ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರು ಮಾವಿನ ಕಾಯಿಯ ಪಾನಕ ಮಾಡುವ ವಿಧಾನವನ್ನು ಹೇಳಿಕೊಟ್ಟಿದ್ದಾರೆ, ತಪ್ಪದೆ ಮಾಡಿ ಸವಿಯಿರಿ…
ಬೇಕಾಗುವ ಪದಾರ್ಥಗಳು :
- ತೋತಾಪುರಿ ಮಾವಿನಕಾಯಿ – 1
- ಬೆಲ್ಲ – 2 ಅಚ್ಚು
- ಉಪ್ಪು ರುಚಿಗೆ ತಕ್ಕಷ್ಟು
- ಮೆಣಸಿನ ಕಾಯಿ – 2
- ಕಾಳು ಮೆಣಸು – ಅರ್ಧ ಸ್ಪೂನ್
- ಜೀರಿಗೆ – 1 ಸ್ಪೂನ್
- ಶುಂಠಿ – ಅರ್ಧ ಇಂಚು
- ಪುದೀನಾ ಎಲೆಗಳು – ಸ್ವಲ್ಪ

ಮಾಡುವ ವಿಧಾನ :
ಮಾವಿನಕಾಯಿ ಸಿಪ್ಪೆ ಸಮೇತ ಕಟ್ ಮಾಡಿಕೊಂಡು ಮೇಲೆ ಹೇಳಿದ ಎಲ್ಲ ಪದಾರ್ಥಗಳ ಜೊತೆ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಸಾಕಷ್ಟು ನೀರು ಸೇರಿಸಿ ಸವಿಯಿರಿ..
- ಶಕುಂತಲಾ ಸವಿ – ನಳಪಾಕ ಪ್ರವೀಣೆ , ಮೈಸೂರು
