‘ಮಾಯವಾಗಿದೆ’ ಕವನ – ರೇಶ್ಮಾ ಗುಳೇದಗುಡ್ಡಾಕರ್



ಅಂತರ್ಜಾಲ, ಸೆಲ್ಫಿ ಗೀಳಿಗೆ ಮಾಯವಾಗಿದೆ ನಮ್ಮ ಖಾಸಗಿಯ ಬದುಕು… ಸುಂದರ ಸಾಲುಗಳ ಜೊತೆಗೆ ಚಿಂತನ ವಿಷಯವನ್ನು ಕವಿಯತ್ರಿ ರೇಶ್ಮಾ ಗುಳೇದಗುಡ್ಡಾಕರ್ ಅವರು ಕವಿತೆಯ ಮೂಲಕ ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ…

ಮಾಯವಾಗಿದೆ ನಮ್ಮ ಖಾಸಗಿತನ
ಮಾಯವಾಗಿದೆ
ಅಬ್ಬರದ “#ಸೆಲ್ಪಿ“ಗಳ ನಡುವೆ
ಸೂತು ಸೊರಗಿದೆ

ಎಲ್ಲವನ್ನು ಕ್ಷಣಾರ್ಧದಲ್ಲಿ ಕ್ಲಿಕ್ಕಿಸಿ
ಸಾಮಾಜಿಕ ಜಾಲಕ್ಕೆ ಹರಿಬಿಡುವ,
ಅಳಿಯದ ಗೋಡೆಗೆ ಅಂಟಿಸುವ
ಧಾವಂತದಲಿ ಮಾಯವಾಗಿ ನಮ್ಮ #ಖಾಸಗಿತನ‌

ಎನಿದ್ದರು ಆಗದು ಬಣ್ಣದ ಪಟ
ಎಷ್ಷೂ ತೆಗೆದರು ಸಾಲದು
ಕಾಯಕವೇ ಕೈಲಾಸ ಮರೆತುಹೋಯಿತು
ಎಲ್ಲೆಂದರಲ್ಲಿ ಸೇಲ್ಪಿ ಕಾಯಕವಾಯಿತು
ಕಾರು ,ಬಸ್ಸುಗಳಲ್ಲದೆ, ತಿಂದ್ದು ,ಹೇತದ್ದು ಎಲ್ಲ ಪಟಗಳನ್ನು
“ಅಪ್ಲೋಡ್ ” ಮಾಡುವದೇ ಕೆಲಸವಾಯಿತು ..!
ಖಾಸಗಿತನ‌ ಮಾಯಾವಾಯಿತು .

ಮರೆಯದ ಗೋಡೆಗೆ ಅಂಟಿಸಿ ,
ಮನೆಯಲ್ಲೂ ,ಮನದಲ್ಲೂ ಗೋಡೆಗಳು
ಎದ್ದುನಿಲ್ಲವಂತಾಯಿತು .
ಗೋಡೆ ಮರೆಯುವದಿಲ್ಲ
#ಮನಗಳು ಒಂದಾಗುವದಿಲ್ಲ ..!

ಸಾಮಾಜಿಕ ತಾಣ ಖಾಸಗಿತನದ
ಸರಕಾಯಿತು ಸಮಾಜ ,ಬದುಕಿನ
ನಡುವಿನ ಸೂಕ್ಷ್ಮ ಗೆರೆ ಅಳಿಸಿಹೋಯಿತು
ವಿವೇಕ ಎಂಬ ಬುದ್ದಿಗೆ #ಗೆದ್ದಲು ಹಿಡಿಯಿತು
ಖಾಸಗಿತನ ಮಾಯವಾಯಿತು ….

ಬಯಲಿಗೆ ಬಯಲು ಅಲ್ಲಮ
ಗುರುವಿನ ಬಯಲು ದೂರ ಸರಿಯಿತು
ತೋರಿಕೆಯ ಜಗತ್ತು ನಮ್ಮನ್ನು ಸುತ್ತುವರೆಯಿತು
ಅದ್ಬುತ ಅಂತರ್ಜಾಲ ಖಾಸಗಿತಾಣವಾಗಿ
ಅವುಗಳಿಗೆ ಲೈಕು ,ಕಾಮೆಂಟು ಎಂಬ ಅಮಲು‌
ಏರಿ ಜನಕೋಟಿ ಇದರ ದಾಸ್ಯಕ್ಕೆ ಜೋತುಬಿತ್ತು


  • ರೇಶ್ಮಾ ಗುಳೇದಗುಡ್ಡಾಕರ್
0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW