ಭೇಟಿಯಾದ ಮೊದಲ ಕ್ಷಣದ ಮಧುರ ನೆನಪನ್ನುಕವಿಯತ್ರಿ ರೇಶ್ಮಾ ಗುಳೇದಗುಡ್ಡಾಕರ್ ಅವರು ಕವನದ ರೂಪವನ್ನು ಕೊಟ್ಟಿದ್ದಾರೆ. ಮುಂದೆ ಓದಿ…
ಅವ್ಯಕ್ತ ಭಾವಗಳೊಂದಿಗಿನ
ಸೆಣಸಾಟಕ್ಕೆ ಮುಕ್ತಿ. ಹೃದಯಕ್ಕೆ
ತಣ್ಣನೆಯ ಅನುಭೂತಿ
ಕವಿದ ಕಾರ್ಮೋಡವು ಸರಿಯುವದು
ಒಡನೆಯೇ ,ನಾಟಕದ
ಅಂಕದ ಪರದೆಯಂತೆ
ಮದ್ದಿಲ್ಲದ ನೋವುಗಳಿಗೊ
ಔಷಧಿ ಲಭ್ಯವಂತೆ ..!
ಬೆಂಬಿಡದೆ ಕಾಡುವ ಕನಸುಗಳ
ಶಿಲಾಶಾಸನದ ವೇದಿಕೆ
ಸಿದ್ದವಾಗುವದಂತೆ,ಪ್ರಸ್ತುತ
ಸುಸಮಯ ಘಳಿಗೆಯೊ
ಅಪೂರ್ವವಂತೆ ನಿನ್ನ
ಭೇಟಿಯಾದ ಕ್ಷಣ ,ಎಂದು
ಹೇಳುತಿದೆ ಈ ಮನ
- ರೇಶ್ಮಾ ಗುಳೇದಗುಡ್ಡಾಕರ್