‘ಬನದ ಹುಣ್ಣಿಮೆ’ ಪುಸ್ತಕ ಪರಿಚಯ – ರೇಶ್ಮಾ ಗುಳೇದಗುಡ್ಡಾಕರ್



ಉತ್ತರ ಕರ್ನಾಟಕ ಈ ಹುಣ್ಣಿಮೆ, ಅಮವಾಸ್ಯೆಗಳನ್ನು ತನ್ನದೇ ಆದ ವಿಶಿಷ್ಠ ಆಚರಣೆಯಿಂದ ಆಚರಿಸಲಾಗುತ್ತದೆ. ಆ ‘ಬನದ ಹುಣ್ಣಿಮೆ’ ಮಹತ್ವದ ಕುರಿತು ಬರೆದ ಈ ಪುಸ್ತಕದ ಪರಿಚಯವನ್ನುಲೇಖಕಿ ರೇಶ್ಮಾ ಗುಳೇದಗುಡ್ಡಾಕರ್ ಅವರು ಮಾಡಿದ್ದಾರೆ, ಮುಂದೆ ಓದಿ..

ಕೃತಿ : ಬನದ ಹುಣ್ಣಿಮೆ ( ಸಾಮಾಜಿಕ ಕಾಂಬರಿ)

ಲೇಖಕರು : ಶ್ರೀ ಕೃಷ್ಣ ಮೂರ್ತಿ ಪುರಾಣಿಕ್

ಪ್ರಕಾಶನ : ಸಾಹಿತ್ಯ ನಂದನ

ಬೆಲೆ : ೭೦

ಪ್ರಕೃತಿಯಲ್ಲಿ #ಹುಣ್ಣಿಮೆ ,ಅಮವಾಸ್ಯೆಗಳು ಸಹಜ ವಿದ್ಯಮಾನಗಳು ಆದರೂ ಮನುಕುಲದಲ್ಲಿ, ಅದರಲ್ಲಿಯೂ ನಮ್ಮ ಭಾತರದಲ್ಲಿ ಈ ವಿದ್ಯಮಾನಗಳಿಗೆ ವಿಶೇಷ ಪ್ರಶಸ್ತ್ಯ ಮತ್ತು ಮಹತ್ವ ಪಡೆದಿವೆ ಭಾವನಾತ್ಮಕವಾಗಿ ಹಲವು ವೈವಿಧ್ಯ ತೆಯನ್ನು ಆಯಾ ಪ್ರದೇಶಗಳಿಗೆ ಅನುಗುಣವಾಗಿ ಹುಣ್ಣಿಮೆ, ಅಮವಾಸ್ಯೆ ದಿನಗಳಂದು ಆಚರಿಸಲಾಗುತ್ತದೆ ಮತ್ತು ಸಂಭ್ರಮಿಸಲಾಗುತ್ತದೆ. ಹಬ್ಬಗಳಿಗಾ ವರ್ಷ ಗಳೇ…. ಕಾಯ ಬೇಕು ಆದರೆ ಈ ಹುಣ್ಣಿಮೆ , ಅಮವಾಸ್ಯೆ ಗಳು ತಿಂಗಳಿಗೆ ಒಮ್ಮೆ ಬಂದು ಸಣ್ಣ ಹಬ್ಬವೇ ಆಗಿ ಜನಮನಗಳಲ್ಲಿ ಹೊಸ ಚೈತನ್ಯ ತುಂಬುವದು ಸುಳ್ಳಲ್ಲ.

ಹಣ್ಣಿಮೆ ಹೆಣ್ಣು ದೇವರ ಆರಾಧನೆಯಾದರೆ, ಅಮವಾಸ್ಯೆ ಗಂಡು ದೇವದ ಅರಾಧನೆಗಾಗಿ ಮೀಸಲು . ಉತ್ತರ ಕರ್ನಾಟಕ ಈ ಹುಣ್ಣಿಮೆ, ಅಮವಾಸ್ಯೆಗಳನ್ನು ತನ್ನದೇ ಆದ ವಿಶಿಷ್ಠ ಆಚರಣೆ ಇಂದ ಆಚರಿಸುತ್ತದೆ ಸಂಸ್ಕೃತಿಯ ಬೆಸೆಯುತ್ತದೆ .

ಇಂತಹ ವಿದ್ಯಮಾನದ ಹೆಸರಿನ ಕಾದಂಬರಿ ” ಬನದ ಹುಣ್ಣಿಮೆ ” ಶೀರ್ಷಕೆ ಸಹಜವಾಗಿಯೇ ಓದುಗರ ಗಮನಸೆಳೆಯತ್ತದೆ ಇಡೀ ಉತ್ತರ ಕರ್ನಾಟಕವೇ ಈ ಹುಣ್ಣಿಮೆ ನ್ನು ಅತೀವ ಸಂಭ್ರಮದಿಂದ ಆಚರಿಸುತ್ತದೆ ವಿಶೇಷ ಆಚರಣೆ ಗಳೂಂದಿಗೆ ಇದು ಕೃಷ್ಣ ಮೂರ್ತಿ ಪುರಣಿಕ್ ಅವರ ನಾನು ಓದಿದ ಮೊಟ್ಟಮೊದಲ ಕೃತಿ . ಈ ಕಾದಂಬರಿ ಭಾವನಾತ್ಮಕತೆಯನ್ನು ಧಾರ್ಮಿಕ ಆಚರಣೆಗಳ ತಳದಿಯಲ್ಲಿ ಚಿತ್ರಿಸಿ ಓದುಗರಿಗೆ ವಸ್ತವೀಕ ಅನುಭವಗಳನ್ನು ಈ ಕೃತಿ ನೀಡುತ್ತದೆ.

ಕಾದಂಬರಿ ಮೊದಲಿಗೆ ಅಸ್ತವ್ಯಸ್ತತೆ ಯ ಮುಖಾಂತರ ಆರಂಭವಾಗಿ ಹಂತ ಹಂತವಾಗಿ ಓದುಗರಿಗೆ ಅದರ ತಿರುಳು ಅರಿವಾಗುವಂತೆ ಮಾಡುತ್ತದೆ ಎಲ್ಲಿಯೂ ಕುತೂಹಲದಕ್ಕೆ ಅಡಚಣೆ ಉಂಟಾಗದೆ ಸರಳವಾಗಿ ಓದಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗುತ್ತದೆ.

#ಹುಣ್ಣಿಮೆಯ ಆಚರಣೆ ಜಾತ್ರಯೆ ಸೊಬಗನ್ನು ಬಹು ವರ್ಣರಂಜಿತವಾಗಿ ಕಟ್ಟಿ ಕೊಟ್ಟರು ಎಲ್ಲಿಯೂ ಮೂಢ ಆಚರಣೆ,ಅಥವಾ ನಂಬಿಕೆಗಳಿಗೆ ಆಸ್ಪದ ಕೊಡದೆ ಸಾಗುವ ಕೃತಿ ವೈಚಾರಿಕವಾಗಿ ಎಳೆಯನ್ನು ಪಸರಿಸಿಕೊಂಡಿದೆ ಢಾಳವಾಗಿ. ದೈವೀಕ ನಂಬಿಕೆ, ಧಾರ್ಮಿಕ ನಡೆನುಡಿಗಳು #ಕಾದಂಬರಿಯಲ್ಲಿ ವ್ಯಕ್ತವಾದರೂ ಮಾನಸಿಕ ವ್ಯಕುಲದ ಸಂವೇದನೆಯೇ ಈ ಕೃತಿಯಲ್ಲಿ ಪ್ರಧಾನ ಪಾತ್ರವಾಗಿ ಪಾತ್ರಗಳ ಪೋಷಣೆ ಮಾಡುತ್ತದೆ.



ಮನ- ಮನಗಳ ತುಂಬಿದ ಕ್ಲೇಷ, ಮೋಹ, ಮತ್ಸರ, ಅಸೊಯೆ, ಅಂತಸ್ತಿನ ತಾರತಮ್ಯ ಭಾವನೆಗಳು ದೈವಿಕ ನಂಬಿಕೆಗಿಂತ ಹೆಚ್ಚಿನದಾಗಿ ತಮ್ಮ ಇರವನ್ನು ಸಾಧಿಸಿವೆ ಹಾಗೂ ಪಾತ್ರಗಳ ಮೂಲಕ ವಿವಿಧ ಮಜಲುಗಳನ್ನು ಕಾದಂಬರಿಯಲ್ಲಿ ಉಂಟುಮಾಡುತ್ತವೆ . ನಾಯಕಿಯ ಹುಟ್ಟು ಹಾಗೂ ಬದುಕಿನ ವಿಶೇಷಣಗಳು ಈ ಬನದ ಹುಣ್ಣುಮೆ ಮೂಲಕವೇ ಆರಂಭವಾಗಿ ಅವಳಲ್ಲಿ ಅವಿಸ್ಮರಣೀಯ ಅನುಭೂತಿಯನ್ನುಂಟುಮಾಡುತ್ತದೆ. ಕೃತಿಯ ಉದಗದಗಲಕ್ಕೂ ವ್ಯಾಪಿಸಿರುವ ನಾಯಕಿ ಮತ್ತು ಬದನದ ಹುಣ್ಣಿಮೆ ಸಂಭ್ರಮ , ರಂಗನಾಥನ ಮನಸಿಕ ತಳಮಳಗಳು , ಬಿಷ್ಟಪ್ಪನವರ ದಕ್ಷತೆ, ಸೌಹಾರ್ದ ತೆ ದೈವೀಕ ಭಾಗವಾಗಿಯೇ ಸಹಜವೆಂಬಂತೆ ಮೂಡಿಬಂದಿವೆ .

ಹೆಂಡತಿ ತನ್ನ ಮಗನ ತಾಯಿಯು ಹೌದು ಎನ್ನುವ ಸರಳ ಸತ್ಯವನ್ನು ಅರಿಯಲು ಪ್ರಯಾಸ ಪಡುವ ಪತಿ, ಸ್ನೇಹವೇ ಉರುಳಾಗಿ ಬದುಕುನ್ನು ಛಿದ್ರ ಮಾಡುವ ಸನಿಹದಲ್ಲಿದ್ದರು
ಮತ್ತೆ ಬದುಕು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದ್ದದು ರಂಗನಾಥನ ಮನೋ ಸ್ಥೈರ್ಯ ವೇ ? ಅಥವ ನಾಯಕಿಯ ಆರಾಧ್ಯ ದೈವ ಕೃಪೆಯೂ ಎಂಬುದು ಬನದ ಹುಣ್ಣಿಮೆಯೇ ಸಾಕ್ಷಿಯಾಗಿ ಕಾದಂಬರಿ ಕೊನೆಯಾಗುತ್ತದೆ .

ಈ ಪುಟ್ಟ ಕೃತಿ ಹಲವು ವಿಚಾರಗಳನ್ನು ಓದುಗರ ಮನದಲ್ಲಿ ಅನುಸಂಧಾನ ಮಾಡುತ್ತದೆ. ಸಮಾಜಕ್ಕೆ ಸಂದೇಶ ನೀಡುತ್ತದೆ .ಕಾದಂಬರಿಯ ಕೊನೆಯಲ್ಲಿ ಕಾಡುವ ಮುಖ್ಯ ಪಾತ್ರ ಎಂದರೆ ಬಿಷ್ಟಪ್ಪನವರ ಆಚರಣೆ, ಸಂಭ್ರಮ, ದಕ್ಷತೆ, ಮಮತೆ, ಸಹೋದರತೆ ….


  • ರೇಶ್ಮಾ ಗುಳೇದಗುಡ್ಡಾಕರ್
0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW